ಹಿಂದೂ-ಮುಸ್ಲಿಂ ‘ಕ್ರಾಸ್ ಬ್ರೀಡ್': ಲವ್‌ಜಿಹಾದ್ ತಡೆ ಕಾಯ್ದೆ ಜಾರಿಗೆ ಸಿದ್ದು ವಿರೋಧ!
ಹಿಂದೂ-ಮುಸ್ಲಿಂ ‘ಕ್ರಾಸ್ ಬ್ರೀಡ್!’| ಲವ್ ಜಿಹಾದ್ ಕುರಿತು ಸಿದ್ದು ಹೇಳಿಕೆ ವಿವಾದ| ‘ಕ್ರಾಸ್’ ಆಗಿ ಹುಟ್ಟಿರೋರು ಬಹಳ ಜನ ಇದ್ದಾರೆ| ಲವ್‌ಜಿಹಾದ್ ತಡೆ ಕಾಯ್ದೆ ಜಾರಿಗೆ ಸಿದ್ದು ವಿರೋಧ| ಸಂವಿಧಾನದಲ್ಲಿ ಈ ಕಾಯ್ದೆಗೆ ಅವಕಾಶವೇ ಇಲ್ಲ
ಬೆಂಗಳೂರು(ಡಿ.02): ‘ಹಿಂದೂ ಮುಸ್ಲಿಂ ಕ್ರಾಸಾಗಿ ಹುಟ್ಟಿರುವವರು ನಮ್ಮ ದೇಶದಲ್ಲಿ ಬಹಳ ಜನ ಇದ್ದಾರೆ’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ಲವ್ ಜಿಹಾದ್ ನಿಷೇಧಕ್ಕೆ ರಾಜ್ಯದಲ್ಲಿ ಚಿಂತನೆ ನಡೆದಿರುವುದಕ್ಕೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ ನೀಡಿದ ಈ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತಪಡಿಸಿ, ಕ್ರಾಸ್ ಬ್ರೀಡ್‌ಗೂ ಕಾಂಗ್ರೆಸ್‌್ಸಗೂ ಬಹಳ ಹಳೆಯ ಸಂಬಂಧ ಇದೆ. ಕ್ರಾಸ್ ಬ್ರೀಡ್ ಶುರು ಮಾಡಿದ್ದೇ ಕಾಂಗ್ರೆಸ್ಸಿಗರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರುಬರ ಎಸ್‍ಟಿ ಹೋರಾಟ: ಈಶ್ವರಪ್ಪ ಹಿಂದೆ ಆರ್‌ಎಸ್‌ಎಸ್, ಸಿದ್ದರಾಮಯ್ಯ ಗಂಭೀರ ಆರೋಪ
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ‘ಭಾರತದಲ್ಲಿ ಸುಮಾರು 600 ವರ್ಷಗಳ ಕಾಲ ಮುಸ್ಲಿಮರು ಆಡಳಿತ ನಡೆಸಿದ ಇತಿಹಾಸವಿದೆ. ಮೊಘಲರ ಆಳ್ವಿಕೆಯಲ್ಲಿ ಸಾಕಷ್ಟುಅಂತರ್ಧರ್ಮೀಯ ವಿವಾಹಗಳಾಗಿವೆ. ಹಿಂದೂ ಮುಸ್ಲಿಂ ಕ್ರಾಸಾಗಿ ಹುಟ್ಟಿರುವವರು, ಹಿಂದೂ ಮುಸ್ಲಿಂ ದಂಪತಿಗೆ ಹುಟ್ಟಿದವರು ಬಹಳ ಜನ ಇದ್ದಾರೆ’ ಎಂದು ಹೇಳಿದರು.
‘ಲವ್ ಜಿಹಾದ್ ತಡೆ ಕಾಯ್ದೆ ಎಂಬುದೇ ಮೂರ್ಖತನದ್ದು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಕಾಯ್ದೆ ವಜಾಗೊಳ್ಳಲಿದೆ. ಇಂಥ ಕಾಯ್ದೆಗಳಿಗೆ ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಅಲಹಾಬಾದ್ ಹಾಗೂ ಕರ್ನಾಟಕ ಹೈಕೋರ್ಟ್ ಪೀಠಗಳು ಹೇಳಿವೆ. ಹಾಗಾಗಿ ಕಾಯ್ದೆ ಜಾರಿ ಅಸಾಧ್ಯ. ಆದರೂ ಇಂತದ್ದೊಂದು ಕೆಲಸಕ್ಕೆ ಸರ್ಕಾರ ಕೈಹಾಕಿದೆ ಅಂದರೆ ಅದು ದುರುದ್ದೇಶದಿಂದ ಕೂಡಿದ ಕೆಲಸವಲ್ಲದೆ ಬೇರೇನು? ಸಮಾಜದ ಶಾಂತಿ ಕದಡಬೇಕು ಎಂಬ ಬಿಜೆಪಿಯವರ ಉದ್ದೇಶ ಇದರಿಂದ ಸ್ಪಷ್ಟವಾಗುತ್ತಿದೆ. ರಾಜ್ಯದಲ್ಲಿ ಈ ಬಗ್ಗೆ ಕಾಯ್ದೆ ತರುವ ಪ್ರಯತ್ನ ನಡೆಸಿದರೆ ತಮ್ಮ ಪಕ್ಷ ಬಲವಾಗಿ ವಿರೋಧಿಸಲಿದೆ’ ಎಂದು ತಿಳಿಸಿದರು.
‘ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಿರುವ ಲವ್ ಜಿಹಾದ್ ತಡೆ ಕಾನೂನು ಅಸಾಂವಿಧಾನಿಕ. ನಿಗದಿತ ವಯೋಮಾನಕ್ಕೆ ಮೇಲ್ಪಟ್ಟಪ್ರತಿಯೊಬ್ಬರಿಗೂ ತಮಗೆ ಇಷ್ಟವಾಗುವ ವ್ಯಕ್ತಿಯನ್ನು ವಿವಾಹವಾಗುವ ಸ್ವಾತಂತ್ರ್ಯವನ್ನು ಸಂವಿಧಾನ ಕಲ್ಪಿಸಿದೆ. ಯಾವುದೇ ಜಾತಿ, ಧರ್ಮದ ಹುಡುಗ ಅಥವಾ ಹುಡುಗಿ ಅದೇ ಧರ್ಮ, ಜಾತಿಯವರನ್ನು ವಿವಾಹವಾಗಬೇಕೆಂಬ ಕಾನೂನಾಗಲಿ ಅಥವಾ ಹಿಂದೂಗಳು ಮುಸ್ಲಿಮರನ್ನು, ಮುಸ್ಲಿಮರು ಹಿಂದೂಗಳನ್ನು ಮದುವೆಯಾಗಬಾರದು ಎಂಬ ಕಾನೂನಾಗಲಿ ನಮ್ಮ ಸಂವಿಧಾನದಲ್ಲಿ ಇಲ್ಲ. ಅಂತಹ ನಿಯಮ ರೂಪಿಸುವುದು ತಪ್ಪು. ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಲವ್ ಜಿಹಾದ್ ತಡೆ ಕಾನೂನು ಅಸಂವಿಧಾನಿಕ. ವಿವೇಕ- ವಿವೇಚನೆಯಿಲ್ಲದೆ ರಚನೆಯಾದ ಕಾನೂನು’ ಎಂದರು
ನಮ್ಮಿಂದ ಹಣ ಪಡೆದು ಬಿಜೆಪಿ ಪರ ಕೆಲಸ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಜಿಟಿಡಿ
ಈಶ್ವರಪ್ಪ ಆಕ್ರೋಶ: ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ, ಕ್ರಾಸ್ ಬ್ರೀಡ್‌ಗೂ ಕಾಂಗ್ರೆಸ್‌್ಸಗೂ ಬಹಳ ಹಳೆಯ ಸಂಬಂಧ ಇದೆ. ಕ್ರಾಸ್ ಬ್ರೀಡ್ ಶುರು ಮಾಡಿದ್ದೇ ಕಾಂಗ್ರೆಸ್ಸಿಗರು ಎಂದು ಕಿಡಿಕಾರಿದ್ದಾರೆ. ಇಂದಿರಾ ಮದುವೆಯಾಗಿದ್ದು ಯಾರನ್ನು, ಸೋನಿಯಾಗಾಂಧಿ ಮದುವೆಯಾಗಿದ್ದು ಯಾರನ್ನು, ಪ್ರಿಯಾಂಕಾಗಾಂಧಿ ಮದುವೆಯಾಗಿದ್ದು ಯಾರನ್ನು ಎಂದು ಪ್ರಶ್ನಿಸಿದ ಈಶ್ವರಪ್ಪ, ಕ್ರಾಸ್ ಬ್ರೀಡ್‌ಗೂ ಕಾಂಗ್ರೆಸ್ಸಿಗೂ ಬಹಳ ಒಳ್ಳೆಯ ಸಂಬಂಧ ಇದೆ. ಅದಕ್ಕಾಗಿ ಸಿದ್ದರಾಮಯ್ಯ ಆ ಮಾತು ಹೇಳಿದ್ದಾರೆ ಎಂದರು. ಲವ್ ಜಿಹಾದ್ ಬ್ಯಾನ್ ಮಾಡಬೇಕು ಅನ್ನೋ ಚಿಂತನೆ ಇರುವುದು ನಿಜ. ಮುಸ್ಲಿಮರನ್ನು ಓಲೈಸುವುದನ್ನು ಇನ್ನಾದರೂ ಸಿದ್ದರಾಮಯ್ಯ ಬಿಡಲಿ ಎಂದು ಹೇಳಿದರು.
ಸಿದ್ದು ಹೇಳಿದ್ದೇನು?
ಲವ್ ಜಿಹಾದ್ ತಡೆ ಕಾಯ್ದೆ ಎಂಬುದೇ ಮೂರ್ಖತನದ್ದು. ಭಾರತದಲ್ಲಿ ಸುಮಾರು 600 ವರ್ಷಗಳ ಕಾಲ ಮುಸ್ಲಿಮರು ಆಡಳಿತ ನಡೆಸಿದ ಇತಿಹಾಸವಿದೆ. ಮೊಘಲರ ಆಳ್ವಿಕೆಯಲ್ಲಿ ಸಾಕಷ್ಟುಅಂತರ್ಧರ್ಮೀಯ ವಿವಾಹಗಳಾಗಿವೆ. ಹಿಂದೂ ಮುಸ್ಲಿಂ ಕ್ರಾಸಾಗಿ ಹುಟ್ಟಿರುವವರು, ಹಿಂದೂ ಮುಸ್ಲಿಂ ದಂಪತಿಗೆ ಹುಟ್ಟಿದವರು ಬಹಳ ಜನ ಇದ್ದಾರೆ.
-ಸಿದ್ದರಾಮಯ್ಯ
ಕ್ರಾಸ್ ಬ್ರೀಡ್ ಶುರು ಮಾಡಿದ್ದೇ ಕಾಂಗ್ರೆಸ್
ಕ್ರಾಸ್ ಬ್ರೀಡ್‌ಗೂ ಕಾಂಗ್ರೆಸ್ಗೂ ಬಹಳ ಹಳೆಯ ಸಂಬಂಧ ಇದೆ. ಕ್ರಾಸ್ ಬ್ರೀಡ್ ಶುರು ಮಾಡಿದ್ದೇ ಕಾಂಗ್ರೆಸ್ಸಿಗರು. ಮುಸ್ಲಿಮರನ್ನು ಓಲೈಸುವುದನ್ನು ಇನ್ನಾದರೂ ಸಿದ್ದರಾಮಯ್ಯ ಬಿಡಲಿ.
ಈಶ್ವರಪ್ಪ, ಸಚಿವ