ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಟವನ್ನು ಮುನ್ನಡೆಸಿದ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ದೊರೆತ ಐದಾರು ತಿಂಗಳುಗಳಲ್ಲೇ ತಾವೇ ದೊರಕಿಸಿಕೊಟ್ಟ ಸ್ವಾತಂತ್ರ್ಯದ ಮಣ್ಣಿನಲ್ಲೇ ಕೊಲೆ ಆಗಿ ಹುತಾತ್ಮರಾದರು. 

ಬೆಂಗಳೂರು (ಜ.31): ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಟವನ್ನು ಮುನ್ನಡೆಸಿದ ಮಹಾತ್ಮ ಗಾಂಧಿ (Mahatma Gandhi) ಅವರು ಸ್ವಾತಂತ್ರ್ಯ ದೊರೆತ ಐದಾರು ತಿಂಗಳುಗಳಲ್ಲೇ ತಾವೇ ದೊರಕಿಸಿಕೊಟ್ಟ ಸ್ವಾತಂತ್ರ್ಯದ ಮಣ್ಣಿನಲ್ಲೇ ಕೊಲೆ ಆಗಿ ಹುತಾತ್ಮರಾದರು. ಮತಾಂಧರು ಕೋಮು ಸಾಮರಸ್ಯ ಕಾಪಾಡುತ್ತಿದ್ದ ಗಾಂಧೀಜಿಯನ್ನು ಕೊಂದರೇ ಹೊರತು ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಾಗಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 

ಹುತಾತ್ಮರ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಹುತಾತ್ಮ ಮಹಾತ್ಮ ಗಾಂಧೀಜಿ ನಮ್ಮ ಜತೆಗೆ ಇಲ್ಲದಿರಬಹುದು. ಆದರೆ ಅವರ ವಿಚಾರಗಳು ಮತ್ತು ಅವರ ಬದುಕಿನ ಸಂದೇಶಗಳು ನಮ್ಮ ಜತೆಗಿವೆ. ದೇಶ ವಿಭಜನೆಯ ಸಂದರ್ಭದಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಬೇರೆ ಯಾರಿಂದಲೂ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. 

ವಿಭಜನೆ ಸಂದರ್ಭದಲ್ಲಿ ನಡೆದ ಕೋಮುಗಲಭೆಗಳು, ಹಿಂಸೆ ಮತ್ತು ಕ್ರೌರ್ಯದ ಘಟನೆಗಳನ್ನು ನಾನು ಓದಿದ್ದೇನೆ. ಆ ಘಟನೆಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ನಡುಗುತ್ತದೆ. ಲಾಹೋರ್‌, ದೆಹಲಿ, ಪಶ್ಚಿಮಬಂಗಾಳ ಮುಂತಾದ ಕಡೆಗಳಲ್ಲಿ ನಡೆಯುತ್ತಿದ್ದ ಭೀಕರ ಕೋಮುಗಲಭೆಗಳ ಸಂದರ್ಭದಲ್ಲಿ ಜನರ ಬಳಿಗೆ ಹೋಗಿ ಅವರಿಗೆ ಸಾಂತ್ವನ ಹೇಳಿ ಸಮಾಧಾನಪಡಿಸಿ ಕೋಮುಗಲಭೆಗಳನ್ನು ನಿಲ್ಲಿಸಿದರು ಎಂದರು.

'ಚಾಮುಂಡೇಶ್ವರಿ ಜನ ಕೈ ಹಿಡಿಯಲಿಲ್ಲ, ಬಾದಾಮಿಯಲ್ಲಿ ಬೀಳ್ಕೊಡಲು ಸಜ್ಜು, ನೀವು ಸಲ್ಲುವ ಜಾಗ ಯಾವುದು'?

ವಿಶ್ವಕ್ಕೆ ಪ್ರೇರಣಾ ಶಕ್ತಿ​- ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಮಾತನಾಡಿ, ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಅವರು ಇಡೀ ವಿಶ್ವಕ್ಕೆ ಪ್ರೇರಣಾ ಶಕ್ತಿಯಾಗಿದ್ದರು. ಯಾರು ಏನೇ ರಾಜಕೀಯ ಮಾಡಿದರೂ ಅವರ ತತ್ವ, ಸಿದ್ಧಾಂತವನ್ನು ಇಡೀ ವಿಶ್ವವೇ ಒಪ್ಪಿದೆ. ಅವರು ತಮ್ಮ ಕೊನೆಯುಸಿರೆಳೆಯುವಾಗ ‘ಹೇ ರಾಮ…’ ಎಂದರು. ‘ರಘುಪತಿ ರಾಘವ ರಾಜಾರಾಂ’ ಎಂಬ ಹಾಡಿನ ಸಾಲುಗಳಲ್ಲಿ ಎಲ್ಲ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಾರ್ಗದರ್ಶನ ನೀಡಿದ್ದಾರೆ ಎಂದು ಸ್ಮರಿಸಿದರು.

ನಮ್ಮ ಕಾಂಗ್ರೆಸ್‌ ಧ್ವಜದಲ್ಲಿ ಗಾಂಧೀಜಿ ಅವರ ಚರಕದ ಗುರುತು ಅಡಗಿದೆ. ಈ ಕಾಂಗ್ರೆಸ್‌ ಬಾವುಟ ಹಿಡಿಯುವ ನಿಮಗೆ ಮಾತ್ರ ಗಾಂಧೀಜಿ ಅವರ ಜತೆ ಭಾವನಾತ್ಮಕ ಸಂಬಂಧ ಹೊಂದುವ ಅವಕಾಶವಿದೆ. ಈ ಭಾಗ್ಯ ನಿಮಗೆ ಮಾತ್ರವೇ ಹೊರತು ಬೇರೆಯವರಿಗೆ ಸಿಗುವುದಿಲ್ಲ. ನಮ್ಮ ನಾಯಕರ ತ್ಯಾಗ ಬಲಿದಾನದ ಇತಿಹಾಸ ಬೇರೆ ಪಕ್ಷದವರಿಗೆ ಇಲ್ಲ ಎಂದರು.

ನಾವು ಇತ್ತೀಚೆಗೆ ಮೇಕೆದಾಟು ‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಪಾದಯಾತ್ರೆ ಮಾಡಿದೆವು. ನಮಗೆ ಪಾದಯಾತ್ರೆ, ಹೋರಾಟವನ್ನು ಹೇಳಿಕೊಟ್ಟವರು ಯಾರು?. ಅದೇ ಮಹಾತ್ಮ ಗಾಂಧೀಜಿ. ಈ ದೇಶದ ರೈತರು 400 ಸಂಸತ್‌ ಸದಸ್ಯರಿರುವ ಬಲಿಷ್ಠ ಸರ್ಕಾರದ ವಿರುದ್ಧ ಬೀದಿಗಿಳಿದು ಒಂದು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ್ದಾರೆ. ರೈತರು ಗಾಂಧೀಜಿ ಅವರ ತತ್ವದಂತೆ ಅಹಿಂಸೆ ಮಾರ್ಗದ ಮೂಲಕ ಸತ್ಯಾಗ್ರಹ ಮಾಡಿ ಪ್ರಧಾನಮಂತ್ರಿ ಅವರು ಕರಾಳ ಕಾಯ್ದೆಗಳನ್ನು ಹಿಂಪಡೆದು ಕೈಮುಗಿದು ಕ್ಷಮೆ ಕೇಳುವಂತೆ ಮಾಡಿದ್ದಾರೆ. ಇದು ಗಾಂಧೀಜಿ ಅವರು ಹಾಕಿಕೊಟ್ಟಹಾದಿಗಿರುವ ಸಾಮರ್ಥ್ಯ ಎಂದು ಹೇಳಿದರು.

ಸಿದ್ದರಾಮಯ್ಯ ಭೇಟಿ ಮಾಡಿದ ಮಂಡ್ಯ ಜೆಡಿಎಸ್ ಶಾಸಕ, ಎಚ್‌ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ

ಮತಾಂಧತೆಯ ವಿರುದ್ಧ ಶ್ರಮಿಸುತ್ತಿದ್ದ ಇಂತಹ ಮಹಾತ್ಮಗಾಂಧಿಯನ್ನು ಮತಾಂಧನೊಬ್ಬ ಕೊಂದು ಹಾಕಿದ. ಆಗಿನ ಬ್ರಿಟಿಷ್‌ ಅಧಿಕಾರಿಯೇ ಗಾಂಧೀಜಿ ಅವರನ್ನು ‘ಆರ್ಮಿ ಆಫ್‌ ಪೀಸ್‌’ ಎಂದು ಕರೆದಿದ್ದರು. ಇಂದು ನಮಗೆ ಅವರ ಶಾಂತಿಯುತ ಹೋರಾಟ ಹಾಗೂ ಜೀವನದ ಸಂದೇಶ ದಾರಿ ದೀಪವಾಗಬೇಕು ಎಂದು ಹೇಳಿದರು.'