Asianet Suvarna News Asianet Suvarna News

ಐದು ವರ್ಷವೂ ನಾನೇ ಸಿಎಂ ಆಗಿರ್ತೀನಿ: ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಎಚ್ಚರಿಕೆ ರವಾನಿಸಿದ ಸಿದ್ದರಾಮಯ್ಯ

ರಾಜ್ಯದಲ್ಲಿ ಐದು ವರ್ಷಗಳ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಇಲ್ಲಿ ಕೆಲಸ ಇಲ್ಲದವರು ಮುಖ್ಯಮಂತ್ರಿ ಬದಲಾವನೆ ಬಗ್ಗೆ ಮಾತನಾಡುತ್ತಿದ್ದಾರೆ.

Siddaramaiah said i will be the Chief minister for five years warned to those talk about cm change sat
Author
First Published Nov 2, 2023, 3:44 PM IST

ವಿಜಯನಗರ (ನ.02): ರಾಜ್ಯದಲ್ಲಿ ಐದು ವರ್ಷಗಳ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಇಲ್ಲಿ ಕೆಲಸ ಇಲ್ಲದವರು ಮುಖ್ಯಮಂತ್ರಿ ಬದಲಾವನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸ್ವಪಕ್ಷೀಯರ ವಿರುದ್ಧವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐದು ವರ್ಷ ನಮ್ಮದೇ ಸರ್ಕಾರ ನಾನು ಈಗ ಮುಖ್ಯಮಂತ್ರಿ. ನಾನೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವೆ.ಕೆಲಸ ಇಲ್ಲದೇ ಇರೋರು ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡ್ತಾರೆ. ನಮ್ಮ ಸರ್ಕಾರ ಸುಭದ್ರವಾಗಿದೆ. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡೋದು  ಹೈಕಮಾಂಡ್‌ಗೆ ಬಿಟ್ಟಿರೋದು. ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನ ಆದ್ರು ಹೈಕಮಾಂಡ್ ಜೊತೆ ಚರ್ಚೆ ಮಾಡಿನೇ ಆಗೋದು ಎಂದು ಹೇಳಿದರು.

100 ರಮೇಶ್‌ ಜಾರಕಿಹೊಳಿ ಬಂದ್ರೂ ಡಿಕೆಶಿ ಟಚ್‌ ಮಾಡಲಾಗದು: ಶಾಸಕ ಗಣಿಗ ರವಿ

ರಮೇಶ್ ಜಾರಕಿಹೊಳಿ ಸರ್ಕಾರ ಬೀಳುತ್ತೆ ಎನ್ನುವ ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರು ಅಧಿಕಾರಕ್ಕೆ ಬರುವಲ್ಲಿ ಸೋತಿದ್ದಾರೆ. ಈಗ ಅವರಿಗೆ ಬೇರೆ ಕೆಲಸ ಇಲ್ಲದ್ದೇ ಬಾಯಿಗೆ ಬಂದಂಗೆ ಮಾತಾಡ್ತಾನೆ. ರಾಜ್ಯದ ಜನರು ನಮಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ಸುಭದ್ರ ಸರ್ಕಾರ ಕೊಡ್ತೇವೆ. ಬಿಜೆಪಿಯವರು ಭ್ರಮ ನಿರಸವಾಗಿದ್ದಾರೆ. ಅವರಿಗೆ ಅಧಿಕಾರ ಇಲ್ಲದೆ ಇರೋಕೆ ಆಗಲ್ಲ. ಮತ್ತೆ ಅಪರೇಷನ್ ಮಾಡೋಕೆ ಪ್ರಯತ್ನ ಮಾಡ್ತಾರೆ. ಅದು ಸಾಧ್ಯವಾಗಲ್ಲ ಎಂದು ಹೇಳಿದರು.

ಈ ಬಾರಿಯೂ ಹಂಪಿ ಉತ್ಸವ ಮಾಡ್ತೀವಿ: ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಬಾರಿ ಸಿಎಂ ಆದ ಬಳಿಕ ಬಂದಿರುವೆ. 36 ಕೋಟಿ ರೂ. ವೆಚ್ಚದಲ್ಲಿ ಶಾಲೆ, ಕಾಲೇಜು ಮತ್ತು ಲೈಬ್ರರಿ ಉದ್ಘಾಟನೆ ಮಾಡಿದ್ದೇವೆ. ಈ ಬಾರಿಯೂ ಹಂಪಿ ಉತ್ಸವ ಮಾಡ್ತೇವೆ. ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡೋದಿಲ್ಲ. ಸಿ ಕ್ಯಾಟಗರಿ ಮೈನಿಂಗ್ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಆದರೆ, ಇಲ್ಲಿ ಅಕ್ರಮಕ್ಕೆ ಅವಕಾಶವಿರುವುದಿಲ್ಲ. ಕರ್ನಾಟಕದ ಹೆಸರು ನಾಮಕರಣವಾಗಿ 50 ವರ್ಷವಾಗಿದೆ. ಇದರ ಸಂಭ್ರಮಾಚರಣೆ ಮಾಡಲು ವಿಶೇಷ ಕಾರ್ಯಕ್ರಮ ಮಾಡಲಾಗ್ತಿದೆ. ಸಂಜೆ ಹಂಪಿಯಲ್ಲಿ ಸಂಭ್ರಮಾಚರಣೆಯ ಕಾರ್ಯಕ್ರಮ ಮಾಡ್ತೇವೆ. ವರ್ಷವೀಡಿ ಸಂಭ್ರಮಾಚರಣೆ ಇರುತ್ತದೆ. ನಂತರ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೋಗುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ

ಈ ಮೂಲಕ ರಾಜ್ಯದಲ್ಲಿ 2 ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಮಂಡ್ಯ ಶಾಸಕ ಗಣಿಗ ರವಿ ಹಾಗೂ ಇತರೆ ಶಾಸಕರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಮುಂದುವರೆದು ಈಗ ಕೆಲಸ ಇಲ್ಲದವರು ಮುಖ್ಯಮಂತ್ರಿ ಬಸಲಾವಣೆಯ ಬಗ್ಗೆ ಸುಖಾಸುಮ್ಮನೆ ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಸ್ವಪಕ್ಷೀಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ಮುಂದಿನ 5 ವರ್ಷಗಳ ಕಾಲ ತಾವೇ ಮುಖ್ಯಮಂತ್ರಿ ಆಗಿ ಮುಂದುವರೆಯುವೆ ಎಂದು ದೃಢವಾಗಿ ಹೇಳುವ ಮೂಲಕ ಸಿಎಂ, ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟವರಿಗೆ ಶಾಕ್‌ ನೀಡಿದರು.

Follow Us:
Download App:
  • android
  • ios