100 ರಮೇಶ್‌ ಜಾರಕಿಹೊಳಿ ಬಂದ್ರೂ ಡಿಕೆಶಿ ಟಚ್‌ ಮಾಡಲಾಗದು: ಶಾಸಕ ಗಣಿಗ ರವಿ

ನೂರು ಜನ ರಮೇಶ್‌ ಜಾರಕಿಹೊಳಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಟಚ್ ಮಾಡುವುದಕ್ಕೆ ಆಗೋದಿಲ್ಲ. ಒಕ್ಕಲಿಗ ನಾಯಕತ್ವವನ್ನು ಸಾಯಿಸಲು ಒಂದು ತಂಡ ವ್ಯವಸ್ಥಿತವಾಗಿ ಸಂಚು ನಡೆಸಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿ ಕಿಡಿಕಾರಿದರು. 
 

Operation Kamala Congress MLA Ganiga Ravi Slams Ramesh Jarkiholi In Mandya gvd

ಮಂಡ್ಯ (ಅ.31): ನೂರು ಜನ ರಮೇಶ್‌ ಜಾರಕಿಹೊಳಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಟಚ್ ಮಾಡುವುದಕ್ಕೆ ಆಗೋದಿಲ್ಲ. ಒಕ್ಕಲಿಗ ನಾಯಕತ್ವವನ್ನು ಸಾಯಿಸಲು ಒಂದು ತಂಡ ವ್ಯವಸ್ಥಿತವಾಗಿ ಸಂಚು ನಡೆಸಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್ ಜಾರಕಿಹೊಳಿ ಮತ್ತವರ ತಂಡ ಏಳು ಜನ್ಮ ಎತ್ತಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಏಜೆನ್ಸಿಗಳು ರಮೇಶ್ ಜಾರಕಿಹೊಳಿ ಕೈಯಲ್ಲಿದ್ಯಾ? ಅಧಿಕಾರ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಹೀಗೆ ಅಸಂಬದ್ಧವಾಗಿ ಆಡುತ್ತಿದ್ದಾರೆ. 

ಚುನಾವಣೆ ಮುಂಚೆ ಡಿಕೆಶಿ ಕಾಲು ಹಿಡಿಯಲು ಬಂದಿದ್ದ ರಮೇಶ್ ಜಾರಕಿಹೊಳಿ ಈಗ ಅವರಿಗೇ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದರು. ಆಪರೇಷನ್ ಕಮಲ ಸುಳ್ಳು ಎಂಬ ರಮೇಶ್‌ ಹೇಳಿಕೆಗೆ ತಿರುಗೇಟು ನೀಡಿದ ಗಣಿಗ, ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಎನ್ನುವುದಾದರೆ ಕೈ ಶಾಸಕರಿಗೆ ಆಫರ್ ಮಾಡಿದ್ದು ಯಾಕೆ? ಬೆಳಗಾವಿ ಏರ್‌ರ್ಪೋರ್ಟ್‌ನಲ್ಲಿ ಆ ಭಾಗದ ಶಾಸಕರಿಗೆ ಏನು ಆಫರ್ ಮಾಡಿದ್ರಿ? ಅದರ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಮಾಡ್ತೀವಿ ಎಂದು ಎಚ್ಚರಿಸಿದ ಅವರು, ನೀವು ಆಫರ್‌ ನೀಡಿದ ಅಷ್ಟೂ ಶಾಸಕರು ಮಾಧ್ಯಮದ ಮುಂದೆ ಬರ್ತಾರೆ‌, ಕಾಯಿರಿ ಎಂದು ಹೇಳಿದರು.

ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್

ರಾಜ್ಯಾದ್ಯಂತ ಆಪರೇಷನ್ ಕಮಲ ಬಲೆ: ಕಾಂಗ್ರೆಸ್‌ನ ಐವರು ಶಾಸಕರಿಗೆ ಬಿಜೆಪಿ ಗಾಳ ಹಾಕಿರುವುದು ಸತ್ಯ. ಎಲ್ಲಾ ಸಾಕ್ಷ್ಯಗಳು ಹಾಗೂ ಆಫರ್ ನೀಡಿರುವ ಶಾಸಕರೊಟ್ಟಿಗೆ ಶೀಘ್ರವೇ ಮಾಧ್ಯಮದ ಎದುರು ಬರಲಿದ್ದೇವೆ. ಇದಲ್ಲದೆ ರಾಜ್ಯಾದ್ಯಂತ ಆಪರೇಷನ್ ಕಮಲದ ಬಲೆ ಬೀಸಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಪುನರುಚ್ಛರಿಸಿದರು. ಬಿಜೆಪಿಯ ಆಪರೇಷನ್ ಕಮಲ ತಂಡ ಐವರು ಶಾಸಕರನ್ನು ಭೇಟಿ ಮಾಡಿ ಪಕ್ಷಕ್ಕೆ ಸೆಳೆಯಲು ೫೦ ಕೋಟಿ ರು. ಆಫರ್ ನೀಡಿರುವ ಬಗ್ಗೆ ಬಾಂಬ್ ಸಿಡಿಸಿದ್ದ ಶಾಸಕ ರವಿಕುಮಾರ್ ಗಣಿಗ ಮತ್ತೆ ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಹೇಳಿದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಐವರು ಶಾಸಕರಿಗೆ 50 ಕೋಟಿ ರು. ಕೊಟ್ಟು ಮಂತ್ರಿಗಿರಿ ಕೊಡುವುದರ ಬಗ್ಗೆ ಪೂರಕವಾದ ಸಾಕ್ಷಿಗಳಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಇನ್ನೂ ದೊಡ್ಡ ನಾಯಕರ ಹೆಸರುಗಳಿವೆ ಎಂದು ಹೇಳಿದ್ದಾರೆ. ಅವರನ್ನು ಇಂದು ಭೇಟಿಯಾಗಲು ತೆರಳಿದ್ದೆ. ಆದರೆ, ಅವರು ತೆಲಂಗಾಣಕ್ಕೆ ಹೊರಟಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ನನ್ನಲ್ಲಿರುವ ಮಾಹಿತಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರೊಂದಿಗೆ ಹಂಚಿಕೊಂಡು ಅವರಲ್ಲಿರುವ ಮಾಹಿತಿಯನ್ನು ಸಂಗ್ರಹಿಸಿ ಮಾಧ್ಯಮಗಳ ಎದುರಿಗೆ ಬರುವುದಾಗಿ ಹೇಳಿದರು.

ಯುವಜನತೆಗೆ ಸಂವೇದನಾಶೀಲತೆ ಮೂಡಿಸಿದ್ದು ಪುನೀತ್ ರಾಜ್‌ಕುಮಾರ್: ಸಚಿವ ಮಹದೇವಪ್ಪ

ಯಡಿಯೂರಪ್ಪ ಮಾಜಿ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಪಕ್ಷಕ್ಕೆ ಕರೆದಿರುವುದು ಬೇರೆ ವಿಚಾರ ಎಂದಿದ್ದಾರೆ. ಹಾಗಾದರೆ ಮಾತುಕತೆ ನಡೆಸಿರುವುದು ನೀಡಿರುವುದು ಸತ್ಯ ಎಂದಾಯಿತಲ್ಲವೇ. ನಮ್ಮ ಪಕ್ಷದ ಐವರು ಶಾಸಕ ಮಿತ್ರರನ್ನು ಬಿಜೆಪಿಯವರು ಸಂಪರ್ಕಿಸಿರೋದು ಸತ್ಯ. ಎನ್.ಆರ್.ಸಂತೋಷ್ ಜೊತೆಗೆ ಬೆಳಗಾವಿ ಮಾಜಿ ಸಚಿವ ಹಾಗೂ ಹಳೇ ಮೈಸೂರು ಭಾಗದ ಒಬ್ಬ ವಿಧಾನಪರಿಷತ್ ಸದಸ್ಯ ಇದರಲ್ಲಿ ಭಾಗಿಯಾಗಿದ್ದಾರೆ. ಕಳೆದ 10 ದಿನಗಳ ಹಿಂದೆ ಗೋಲ್ಡ್‌ಫಿಂಚ್‌ನಲ್ಲಿ ಒಬ್ಬ ಶಾಸಕರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಭೇಟಿ ಮಾಡುವ ಶಾಸಕರೆದುರು ಓಪನ್ ಸ್ಪೀಕರ್ ಇಟ್ಟು ಇನ್ನೊಬ್ಬರ ಜೊತೆ ಮಾತನಾಡಿಸುತ್ತಿದ್ದಾರೆ. ಆದರೆ, ಏನು ಮಾತನಾಡಿದ್ದಾರೆ ಎಂದು ಎನ್.ಆರ್.ಸಂತೋಷ್ ಅವರನ್ನೇ ಕೇಳುವಂತೆ ಹೇಳಿದ್ದೇನೆ. ಎರಡು ದಿನ ಕಾಲಾವಕಾಶ ಕೊಡಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎದುರು ಮಾತನಾಡಿ ನಂತರ ನಿಮ್ಮ ಮುಂದೆ ಬರುತ್ತೇನೆ ಎಂದು ನುಡಿದರು.

Latest Videos
Follow Us:
Download App:
  • android
  • ios