ಮುಡಾ ಅಧ್ಯಕ್ಷ ಮರಿಗೌಡರಿಂದ ಕಣ್ಣೀರು: 'ಸಿದ್ದರಾಮಯ್ಯ ನನ್ನ ಮನೆ ದೇವರು, ನನ್ನ ಮೇಲೆ ಆರೋಪ ಯಾಕೆ?'

ಸಿದ್ದರಾಮಯ್ಯ ನನ್ನ ಮನೆ ದೇವರು. ಅವರಿಗೆ ದ್ರೋಹ ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಯಾಕೆ ಮಾಡಬೇಡಿ ಎಂದ ಮುಡಾ ಅಧ್ಯಕ್ಷ ಮರಿಗೌಡ ಹೇಳಿದ್ದಾರೆ.

Siddaramaiah Muda site scam case president Marigowda was in tears sat

ಮೈಸೂರು (ಸೆ.30): ಸಿದ್ದರಾಮಯ್ಯ ನನ್ನ ಮನೆ ದೇವರು. ಅವರಿಗೆ ದ್ರೋಹ ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. ನನಗೆ ಮಕ್ಕಳಿಲ್ಲ, ನಮ್ಮನೆಯಲ್ಲಿ ನಾನು- ನನ್ನ ಹೆಂಡತಿ ಮಾತ್ರ ಇದ್ದೇವೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಯಾಕೆ ಮಾಡುತ್ತೀರಿ ? ಆರೋಪ ಮಾಡುವ ಮುಂಚೆ ಯೋಚನೆ ಮಾಡಿ ಮಾತನಾಡಿ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಮರಿಗೌಡ ಅಳಲು ತೋಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆದಿ ಸಿಎಂ ಸಿದ್ದರಾಮಯ್ಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರೇ ಘೇರಾವ್ ಹಾಕಿದ್ದ ಪ್ರಕರಣದ ಕುರಿತು ಮಾತನಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಆಹ್ವಾನದ ಮೇರೆಗೆ ವಿಮಾನ ‌ನಿಲ್ದಾಣಕ್ಕೆ ಹೋಗಿದ್ದೆ. ಆದರೆ, ಈ ವೇಳೆ ಕಾರ್ಯಕರ್ತ ಭಾಸ್ಕರ್ ನಿನ್ನಿಂದಲೇ ಸಿಎಂಗೆ ಈ ಗತಿ ಬಂತು ಅಂತ ಕೂಗಾಡಿದ್ದರು. ಆಗ ಭಾಸ್ಕರ್ ನನಗೆ ಹೊಡೆಯಲು ಬಂದಿದ್ದು ನೋವು ತಂದಿದೆ. ಆ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಭಾವುಕರಾದರು.

ಸಿಎಂ ವಿರುದ್ಧ ನಾವು ಷಡ್ಯಂತ್ರ ಮಾಡಿಲ್ಲ; ಮುಡಾ ಹಗರಣ ಬಯಲು ಮಾಡಿದ್ದೇ ಕಾಂಗ್ರೆಸ್‌ನವರು: ಯತ್ನಾಳ್

ಮಾರ್ಚ್ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ನನ್ನನ್ನು ಮುಡಾ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ತುಂಡು ಭೂಮಿ ಉಳಿಸಲು ಪ್ರಯತ್ನ ಮಾಡಿದ್ದೇನೆ. ನಾನು 50:50 ಅನುಪಾತದ ನಿವೇಶನ ಮಂಜೂರು ಮಾಡಬಾರದು ಅಂತ ಸೂಚಿಸಿದ್ದೆ. ಆದರೆ, ಶಾಸಕ ಕೆ.ಹರೀಶ್‌ಗೌಡ ಸೂಚನೆ ಮೇರೆಗೆ ಮಾರಗೌಡನಹಳ್ಳಿ ಸರ್ವೇ ನಂ. 77, 57ರ 8 ಎಕರೆ ಜಾಗಕ್ಕೆ ನಿವೇಶನ ಕೊಟ್ಟಿದ್ದಾರೆ. ಕಸಬಾ ಹೋಬಳಿಯ ಸರ್ವೇ ನಂ. 86ರ ಜಾಗಕ್ಕೂ ನಿವೇಶನ ಮಂಜೂರು ಮಾಡಿದ್ದಾರೆ. ನನ್ನ ತಪ್ಪು ಏನೂ ಇಲ್ಲ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ ನನ್ನ ಮನೆ ದೇವರು. ಅವರಿಗೆ ದ್ರೋಹ ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. ನನಗೆ ಮಕ್ಕಳಿಲ್ಲ, ನಾನು- ನನ್ನ ಹೆಂಡತಿ ಇದ್ದೇವೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಯಾಕೆ ಮಾಡುತ್ತೀರಿ? ಆರೋಪ ಮಾಡುವ ಮುಂಚೆ ಯೋಚನೆ ಮಾಡಿ ಮಾತನಾಡಿ. ನನ್ನ ಹೆಂಡ್ತಿ 30 ವರ್ಷಕ್ಕೂ ಹೆಚ್ಚು ಕಾಲ ಸರ್ಕಾರಿ ಸೇವೆಯಲ್ಲಿದ್ದರು. ಅವರು ನಿವೃತ್ತಿ ಆದಾಗ 82 ಲಕ್ಷ ರೂ. ದುಡ್ಡು ಬಂತು. ಆ ಹಣವನ್ನು ಎಫ್‌ಡಿ ಇಟ್ಟಿದ್ದೇವೆ. ಇದೀಗ 50 ಲಕ್ಷ ರೂ. ಸಾಲ ಮಾಡಿ  2 ಕೋಟಿ ರೂ.ಗೆ ಮನೆ ತೆಗೆದುಕೊಂಡಿದ್ದೇವೆ. ನಾನು ಮಾನಸಿಕವಾಗಿ ನೊಂದಿದ್ದೇನೆ. ನನ್ನ ಮೇಲೆ ಆರೋಪ ಮಾಡೋದು ಬಿಡಿ ಎಂದು ಕಿಡಿಕಾರಿದರು.

ಸ್ನೇಹಮಯಿ ಕೃಷ್ಣ ಯಾರು ಎಂಬುದೇ ನನಗೆ ಗೊತ್ತಿಲ್ಲ: ಸಿಎಂ

ಮುಡಾದಲ್ಲಿ 2020ರಿಂದಲೂ 50:50 ಅನುಪಾತ ಜಾರಿಯಲ್ಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಆರ್‌ಟಿಐ ಕಾರ್ಯಕರ್ತರು ಯಾಕೆ ಪ್ರಶ್ನೆ ಮಾಡಲಿಲ್ಲ. ಸಿದ್ದರಾಮಯ್ಯ 40 ವರ್ಷದಿಂದಲೂ ಸ್ವಚ್ಛ ಮತ್ತು ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಸೈಟು ಹಂಚಿಕೆ 021ರಲ್ಲಿ ಆಗಿರೋದು . ಇದಕ್ಕೆಲ್ಲ ನಾನು ಹೇಗೆ ಕಾರಣ ಆಗ್ತೀನಿ. ನಾನು ಪದತ್ಯಾಗ ಮಾಡಲು ಯೋಚನೆ ಮಾಡಿಲ್ಲ. ದ್ದರಾಮಯ್ಯ ನನ್ನ ಪಾಲಿನ ಹೈಕಮಾಂಡ್. ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡಲು ಸಿದ್ಧ. ಸಿದ್ದರಾಮಯ್ಯ ನನಗೆ ತಲೆ ಕೆಡಿಸಿಕೊಳ್ಳಬೇಡ ಅಂದಿದ್ದಾರೆ.  ಆದರೆ, ನಮ್ಮ ಕಾರ್ಯಕರ್ತರೇ ನನ್ನ ಮೇಲೆ ಆರೋಪ ಮಾಡ್ತಿರೋದು ನೋವು ತಂದಿದೆ ಎಂದು ಮುಡಾ ಅಧ್ಯಕ್ಷ ಮರಿಗೌಡ ಹೇಳಿದ್ದಾರೆ.

Latest Videos
Follow Us:
Download App:
  • android
  • ios