Cabinet Decisions: ಅಲ್ಪಸಂಖ್ಯಾತರ ಪರವಾಗಿ ಮತ್ತೊಂದು ನಿರ್ಣಯ ಕೈಗೊಂಡ ರಾಜ್ಯ ಸರ್ಕಾರ!

ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮ್ಯಾನೇಜ್ಮೆಂಟ್‌ನಲ್ಲಿ 2/3 ಅಲ್ಪಸಂಖ್ಯಾತರರಿಗೆ ಮೀಸಲಿಡಲಾಗಿದ್ದು, ವಿದ್ಯಾರ್ಥಿಗಳ ಪ್ರವೇಶಾತಿಗೆ ಯಾವುದೇ ಷರತ್ತುಗಳಿಲ್ಲ.

siddaramaiah Government taken another decision favor of minorities san

ಬೆಂಗಳೂರು (ಡಿ.6): ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು, ಕಾಲೇಜು ಶಿಕ್ಷಣ ತಿದ್ದುಪಡಿ ನಿಯಮಗಳ ವಿಧೇಯಕ್ಕೆ ರಾಜ್ಯ ಸಂಪುಟ ಅನುಮೋದನೆ ನೀಡಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಈ ವಿಧೇಯಕ ಅನುಕೂಲ ಮಾಡಿಕೊಡಲಿದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ 2/3 ಮೆಜಾರಿಟಿ ಅಲ್ಪಸಂಖ್ಯಾತರಿಗೆ ನಿಗದಿಯಾಗಿರಲಿದೆ. ಆದರೆ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿತ ವಿದ್ಯಾರ್ಥಿಗಳ ಪ್ರವೇಶಾತಿಗೆ ಷರತ್ತು ಇರೋದಿಲ್ಲ. ಕಡಿಮೆ‌ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳು ಇದ್ದರೂ ಆ ಕಾಲೇಜಿನ ಮಾನ್ಯತೆ ಮುಂದುವರಿಕೆ ಮಾಡಲಾಗುತ್ತದೆ.ಕಾಲೇಜುಗಳ ಮ್ಯಾನೇಜ್ಮೆಂಟ್ಗಳಲ್ಲಿ ಮಾತ್ರ 2/3 ಮೆಜಾರಿಟಿ ಅಲ್ಪಸಂಖ್ಯಾತರಿಗೆ ನಿಗದಿಯಾಗಿರಲಿದೆ.

ರಾಜ್ಯದ ರೈತರಿಗೆ ಹೊಸ ಟ್ಯಾಕ್ಸ್‌; ಖನಿಜ ಹೊಂದಿರುವ ಭೂಮಿಗೆ ಇನ್ನು ತೆರಿಗೆ

ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ  ಮೈನಾರಿಟಿ ವಿಧ್ಯಾರ್ಥಿಗಳ ಪ್ರವೇಶಾತಿ ನಿಗದಿಯಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಶೇಕಡಾ 25 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕಿತ್ತು. ಪ್ರೌಢಶಾಲೆಯಲ್ಲಿ ಶೇಕಡಾ 50 ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಇರಬೇಕಿತ್ತು. ನೂತನ ವಿಧೇಯಕ ಪ್ರಕಾರ ಇನ್ನುಂದೆ ಇಂತಹ ಕಂಡೀಷನ್ ಇರೋದಿಲ್ಲ. ಆದರೆ ಮ್ಯಾನೆಜ್‌ಮೆಂಟ್‌ ಅಲ್ಪಸಂಖ್ಯಾತರರಿಗೆ ಸಿಗುವಂತೆ ಮಾಡಲು ಹೊಸ ವಿಧೇಯಕ ದಲ್ಲಿ ಅವಕಾಶ ಮಾಡಿಕೊಡಲಾಗಿದೆ. ವಕ್ಫ್ ವಿವಾದದ ಕಾರಣಕ್ಕಾಗಿ ಕಳೆದ ಮೂರು ಸಂಪುಟ ಸಭೆಯಲ್ಲಿ ವಿಧೇಯಕದ ವಿಚಾರ ಮುಂದೂಡಿಕೆಯಾಗಿತ್ತು/ ಉಪಚುನಾವಣೆ ಬಳಿಕ ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ನಿಷ್ಕ್ರಿಯ ಅಕೌಂಟ್‌ಗಳನ್ನು ಸಕ್ರಿಯಗೊಳಿಸಲು ಎಸ್‌ಬಿಐನಿಂದ ರಾಷ್ಟ್ರವ್ಯಾಪಿ ಅಭಿಯಾನ

Latest Videos
Follow Us:
Download App:
  • android
  • ios