Asianet Suvarna News Asianet Suvarna News

Congress Leader Siddaramaiah : ಸಿದ್ದರಾಮಯ್ಯಗೆ ಅನಾರೋಗ್ಯ : ವಿಶ್ರಾಂತಿ

  • ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಕೊಂಚ ಅನಾರೋಗ್ಯ 
  • ಕಲಾಪದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತ್ರ ಭಾಗವಹಿಸಿ ವಿಶ್ರಾಂತಿ 
Siddaramaiah  Faces Minor Health Issue in Belagavi snr
Author
Bengaluru, First Published Dec 23, 2021, 7:23 AM IST

ವಿಧಾನಸಭೆ (ಡಿ.23):  ಕೊಂಚ ಅನಾರೋಗ್ಯದ ಕಾರಣ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Suddaramaiah) ಬುಧವಾರದ ಕಲಾಪದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತ್ರ ಭಾಗವಹಿಸಿ ವಿಶ್ರಾಂತಿ ಪಡೆದರು. ಸಾಮಾನ್ಯವಾಗಿ ಕಲಾಪದಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವ ಸಿದ್ದರಾಮಯ್ಯ  ಅವರಿಗೆ ಆರೋಗ್ಯದಲ್ಲಿ (Health) ಸ್ವಲ್ಪ ವ್ಯತ್ಯಾಸ ಕಂಡು ಬಂದಿತು. 

ವೈದ್ಯರು (Doctor) ವಿಶ್ರಾಂತಿಗೆ ಸೂಚಿಸಿದ ಕಾರಣ ಬೆಳಗಿನ ಕಲಾಪದಲ್ಲಿ ಭಾಗವಹಿಸಲಿಲ್ಲ. ಆದರೆ ಭೋಜನ ವಿರಾಮದ ಬಳಿಕ ಸದನಕ್ಕೆ ಬಂದ ಅವರು ಸ್ವಲ್ಪ ಕಾಲ ಕಲಾಪದಲ್ಲಿ ಹಾಜರಾಗಿದ್ದರು.ತಮಗೆ ಇವತ್ತು ಹುಷಾರಿಲ್ಲ. ಬಿಡಬಾರದೆಂದು ಹಾಜರಾದ್ದೇನೆ ಅಷ್ಟೇ. ಇವತ್ತು ವಿಶ್ರಾಂತಿ ಪಡೆದು ನಾಳೆ ಹಾಜರಾಗುತ್ತೇನೆ ಎಂದು ಸದನಕ್ಕೆ ತಿಳಿಸಿ, ವಿಶ್ರಾಂತಿ ಪಡೆಯಲು ತೆರಳಿದರು.

ನಾನಿಲ್ಲದೇ ಸಭೆ ಮಾಡಬೇಡಿ :    ‘ಮೈಸೂರು ಹಾಗೂ ಚಾಮರಾಜನಗರದಲ್ಲಿ (Chamarajanagar)  ನನ್ನ ಅನುಪಸ್ಥಿತಿಯಲ್ಲಿ ಸಭೆ ಮಾಡಬೇಡಿ. ನಾವಿಬ್ಬರೂ ಒಟ್ಟಿಗೆ ಇಲ್ಲದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರಿಗೆ ಬಹಿರಂಗವಾಗಿಯೇ ಸಲಹೆ ನೀಡಿದ್ದರು.

ಮೇಕೆದಾಟು ಪಾದಯಾತ್ರೆ ಕುರಿತು ಶಿವಕುಮಾರ್‌ ಅವರು ಅಧಿವೇಶನದ ಅವಧಿಯಲ್ಲೇ ಮೈಸೂರು (Mysuru) ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸಭೆ ಮೊಗಸಾಲೆಯಲ್ಲಿ ಶಿವಕುಮಾರ್‌ (Shivakumar) ಆಗಮಿಸಿದ ವೇಳೆ, ‘ಏ ಅಧ್ಯಕ್ಷ ಬಾರಯ್ಯ. ಕುಳಿತುಕೋ. ಮೈಸೂರಿನಲ್ಲಿ ನೀನು ಸಭೆ ನಡೆಸಬೇಡ. ಎಲ್ಲರೂ ಅಧಿವೇಶನದಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ನೀನು ಹೋಗಿ ಕಾಂಗ್ರೆಸ್ ಸಭೆ ನಡೆಸಿದರೆ ತಪ್ಪು ಸಂದೇಶ ಹೋಗುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದ್ದರು

ಇದಕ್ಕೆ ಶಿವಕುಮಾರ್‌, ಇಲ್ಲ ಸರ್‌ ಸಭೆ ಮಾಡುತ್ತಿಲ್ಲ. ಸುದ್ದಿಗೋಷ್ಠಿಯಷ್ಟೇ ಎಂದು ಸಮಜಾಯಿಷಿ ನೀಡಿದರು. ಅದೂ ಅಷ್ಟೇ. ಬೇಕಿದ್ದರೆ ಕೊಡಗು ಜಿಲ್ಲೆಯಲ್ಲಿ ಮಾಡಿ ಎಂದರು. ಇದಕ್ಕೆ ಡಿ.ಕೆ. ಶಿವಕುಮಾರ್‌ ತಲೆಯಾಡಿಸಿದ್ದರು

ಡಬಲ್ ಸಂಭ್ರಮದಲ್ಲಿ ಕಾಂಗ್ರೆಸ್ :   ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ(Karnataka MLC Election) ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ರಾಜ್ಯ ಕಾಂಗ್ರೆಸ್ಸಿಗರಿಗೆ(Congress) ಮಾತ್ರವಲ್ಲ ಹೈಕಮಾಂಡ್‌ಗೂ ಉತ್ಸಾಹ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ ಮಾತ್ರವಲ್ಲದೆ, ಮೇಲ್ವರ್ಗವೂ ಕಾಂಗ್ರೆಸ್‌ ಪರ ಒಲವು ತೋರಿರುವುದನ್ನು ಫಲಿತಾಂಶ(Election Result) ಸ್ಪಷ್ಟವಾಗಿ ನಿರೂಪಿಸಿರುವುದು.

ಪರಿಷತ್‌ ಚುನಾವಣೆಗಳಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ವಿಜಯ ಸಾಧಿಸಿದೆ. ಅದರಲ್ಲೂ ವಿಶೇಷವಾಗಿ ಹಳೆ ಮೈಸೂರಿನಲ್ಲಿ ಜೆಡಿಎಸ್‌ನ(JDS) ಪ್ರಬಲ ಕ್ಷೇತ್ರಗಳನ್ನು ಕಬಳಿಸಿರುವುದು ಪಕ್ಷಕ್ಕೆ ಖುಷಿ ನೀಡಿದೆ. ಇದರ ಜತೆಗೆ, ಮುಖ್ಯಮಂತ್ರಿ, ಕೇಂದ್ರದ ಪ್ರಭಾವಿ ಸಚಿವ, ಬಿಜೆಪಿ ಶಾಸಕರೇ ಹೆಚ್ಚಿರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಅತಿ ಹೆಚ್ಚು ಮತಗಳಿಂದ ಗೆದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯನ್ನು(BJP) ಹಿಂದಿಕ್ಕಿದ್ದಾರೆ. ಈ ಎರಡು ಅಂಶಗಳ ಜತೆಗೆ ಯುವಕರಿಗೆ ಟಿಕೆಟ್‌ ನೀಡುವ ರಿಸ್ಕ್‌ ತೆಗೆದುಕೊಂಡ ಕಾಂಗ್ರೆಸ್‌ ನಾಯಕತ್ವದ ನಡೆ ಯಶ ತಂದಿರುವುದು ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಒಕ್ಕಲಿಗ ಡಿಕೆಶಿ ಎಫೆಕ್ಟ್:
ಒಕ್ಕಲಿಗ ಬೆಲ್ಟ್‌ನಲ್ಲಿ ಪಕ್ಷದ ಬೇರು ಮತ್ತಷ್ಟುಗಟ್ಟಿಯಾಗಿವೆ ಎಂಬುದನ್ನು ಈ ಫಲಿತಾಂಶ ನಿರೂಪಿಸುತ್ತಿದೆ. ಜೆಡಿಎಸ್‌ನ ಭದ್ರಕೋಟೆಯೆನಿಸಿದ ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳನ್ನು ಪಕ್ಷ ವಶಕ್ಕೆ ತೆಗೆದುಕೊಂಡಿದೆ. ಜತೆಗೆ, ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರಗಳಲ್ಲೂ ಜಯಗಳಿಸಿದೆ. ಇದನ್ನು ಒಕ್ಕಲಿಗ ಮತಗಳು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ನತ್ತ ವಾಲಿರುವುದರ ಸೂಚಕ ಎಂದೇ ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್‌ ಪರ ಗಟ್ಟಿಯಾಗಿ ನಿಲ್ಲಿತ್ತಿದ್ದ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ನತ್ತ ವಾಲಿರುವುದರ ಹಿಂದೆ ಸಹಜವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಪ್ರಭಾವ ಕಾಣಲಾಗುತ್ತಿದೆ.

ಕಮಲದೊಳಗೆ ಅರಳಿದ ಕೈ:
ಇನ್ನು ಲಿಂಗಾಯತ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಅತಿ ಹೆಚ್ಚು ಮತ ಗಳಿಸಿರುವುದು ಕಾಂಗ್ರೆಸ್ಸಿಗರ ಸಂತೋಷವನ್ನು ದ್ವಿಗುಣಗೊಳಿಸಿದೆ. ಮುಖ್ಯಮಂತ್ರಿ, ಪ್ರಭಾವಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಇದ್ದ ಕ್ಷೇತ್ರವಾದ ಧಾರವಾಡದಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ಅವರು 3334 ಮತಗಳನ್ನು ಗಳಿಸಿ ಪ್ರಥಮ ಪ್ರಾಶಸ್ತ್ಯದ ಮತಗಳ ಮೂಲಕವೇ ವಿಧಾನಪರಿಷತ್ತು ಪ್ರವೇಶಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಿಂತ 834 ಮತಗಳಿಂದ ಮುಂದಿದ್ದಾರೆ. ಈ ಟ್ರೆಂಡ್‌ ಕೇವಲ ಧಾರವಾಡ ಮಾತ್ರವಲ್ಲ, ಲಿಂಗಾಯತ ಮತಗಳು ಹೆಚ್ಚಿರುವ ವಿಜಯಪುರ, ಬೆಳಗಾವಿ, ರಾಯಚೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಿಜೆಪಿಗಿಂತ ಹೆಚ್ಚು ಮತಗಳನ್ನು ಗಳಿಸಿದೆ.

ಯುವ ಅಭ್ಯರ್ಥಿಗಳ ಸಾಧನೆ:
ಯುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ರಿಸ್ಕ್‌ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾರ್ಯತಂತ್ರ ಕೂಡ ಪಕ್ಷದ ಕೈ ಹಿಡಿದಿದೆ. ಮಂಡ್ಯದಲ್ಲಿ ದಿನೇಶ್‌ ಗೂಳಿಗೌಡ, ಬೆಳಗಾವಿಯಲ್ಲಿ ಚೆನ್ನರಾಜ ಹಟ್ಟಿಹೊಳಿ, ತುಮಕೂರಿನಲ್ಲಿ ರಾಜೇಂದ್ರ, ಕೋಲಾರದಲ್ಲಿ ಅನಿಲ್‌ಕುಮಾರ್‌ ಗೆದ್ದಿದ್ದರೆ, ಕಾಂಗ್ರೆಸ್‌ ಮತಗಳು ಅತ್ಯಂತ ಕಡಿಮೆಯಿದ್ದ ಕೊಡಗಿನಲ್ಲಿ ಮಂಥರ್‌ ಗೌಡ ಸೋತಿದ್ದರೂ 603 ಮತ ಪಡೆದಿರುವುದು ಕಡಿಮೆ ಸಾಧನೆಯೇನಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Follow Us:
Download App:
  • android
  • ios