Asianet Suvarna News Asianet Suvarna News

ಪ್ರವಾಸಿ ಮಕ್ಕಳಿಗೆ ಮೇಷ್ಟ್ರಾದ ಮಾಜಿ ಸಿಎಂ ಸಿದ್ದರಾಮಯ್ಯ!

ಮಾಜಿ ಸಿಎಂ ಸಿದ್ದರಾಮಯ್ಯ ಮೇಷ್ಟ್ರಾಗುವುದು ಹೊಸತೇನಲ್ಲ. ಸದನದಲ್ಲಿ ಶಾಸಕರಿಗೆ, ಸಚಿವರಿಗೆ ವ್ಯಾಕರಣ ಪಾಠ ಮಾಡಿದ್ದ ಸಿದ್ದರಾಮಯ್ಯ, ಈ ಬಾರಿ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಮಕ್ಕಳಿಗೆ ಕೆಲ ಸಮಯ ಮೇಷ್ಟ್ರಾಗಿದ್ದಾರೆ.

siddaramaiah becomes a teacher to the students who came to bagalkot on tour
Author
Bagalkot, First Published Jan 5, 2019, 1:49 PM IST

ಬೆಂಗಳೂರು[ಜ.05]: ಮಾಜಿ ಸಿಎಂ ಸಿದ್ದರಾಮಯ್ಯ ಆಗಾಗ ಮೇಷ್ಟ್ರಾಗಿ ಪಾಠ ಮಾಡುತ್ತಾರೆ. ಮುಖ್ಯಮಂತ್ರಿಯಾಗಿದ್ದಾಗ, ಸದನದಲ್ಲಿ ಕನ್ನಡ ಸಂಧಿಗಳ ಬಗ್ಗೆ ಶಾಸಕರು ಹಾಗೂ ಸಚಿವರಿಗೆ ಪ್ರಶ್ನಿಸಿ ಬೆವರಿಳಿಸಿದ್ದರು. ಉತ್ತರ ನೀಡದಾಗ ತಾವೇ ಪಾಠ ಮಾಡಿದ್ದರು. ಕನ್ನಡ ಎಂಬ ವಿಚಾರ ಬಂದಾಗ, ಯಾವ ನಾಯಕ, ಯಾವ ಪಕ್ಷ ಎಂದೂ ನೋಡದೆ ಸಿದ್ದರಾಮಯ್ಯ ಪಾಠ ಮಾಡುತ್ತಾರೆ. ಬಿಜೆಪಿ ನಾಯಕ ಶ್ರೀರಾಮುಲುರವರಿಗೂ ಒಂದು ಬಾರಿ ವ್ಯಾಕರಣವನ್ನು ಹೇಳಿಕೊಟ್ಟು ಸದ್ದು ಮಾಡಿದ್ದರು.

ಸದ್ಯ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮಹಾಕೂಟ ಕ್ಷೇತ್ರ ಅಭಿವೃದ್ಧಿ ಹಿನ್ನೆಲೆ ಸ್ಥಳ ವೀಕ್ಷಣೆಗೆಂದು ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಶೈಕ್ಷಣಿಕ ಪ್ರವಾಸಕ್ಕೆಂದು ಬಾಗಲಕೋಟೆಗೆ ಬಂದಿದ್ದ ಮಕ್ಕಳಿಗೆ ಕೆಲ ಸಮಯ ಮೇಷ್ಟ್ರಾಗಿದ್ದಾರೆ. ಐತಿಹಾಸಿಕ ಪ್ರವಾಸಿ ತಾಣಗಳ ಭೇಟಿ ವೇಳೆ ಮಕ್ಕಳೊಂದಿಗೆ ಬೆರೆತ ಸಿದ್ದರಾಮಯ್ಯ ಮೊದಲಿಗೆ 'ನೀವು ಕನ್ನಡ ಮೀಡಿಯಂ, ಅಥವಾ ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

'ಕನ್ನಡ ಮೀಡಿಯಂ' ಎಂದು ಉತ್ತರಿಸಿದ ಮಕ್ಕಳ ಬಳಿ 'ನೀವೀಗ ಎಲ್ಲಿಗೆ ಹೊರಟ್ಟಿದ್ದೀರಿ?' ಎಂದು ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮಕ್ಕಳು ಕೂಡಾ 'ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ' ಎಂದಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಮಾಜಿ ಸಿಎಂ 'ಸಮ್ಮೇಳನದ ಅಧ್ಯಕ್ಷರು ಯಾರು?' ಎಂದು ಕೇಳುವುದೇ....!. ಮಕ್ಕಳು ಕೂಡಾ ತಾವೇನು ಕಡಿಮೆಯಲ್ಲ ಎಂದು 'ಚಂದ್ರಶೇಖರ ಕಂಬಾರರು' ಎಂದು ಉತ್ತರಿಸಿದ್ದಾರೆ. ಮಕ್ಕಳ ಈ ಉತ್ತರದಿಂದ ಸಂತೋಷಗೊಂಡ ಸಿದ್ದರಾಮಯ್ಯ ಕೊನೆಯದಾಗಿ 'ಚಂದ್ರಶೇಖರ ಕಂಬಾರರು ಯಾರು?’ ಎಂದು ಕೇಳಿದ್ದಾರೆ. ಈ ವೇಳೆ ಮಾಜಿ ಸಿಎಂ ಸಾಹೇಬರ ಪ್ರಶ್ನೆಗೆ ಮಕ್ಕಳು ಕೂಡಾ ಅಷ್ಟೇ ನೀಟಾಗಿ 'ಸಾಹಿತಿಗಳು' ಎಂದಿದ್ದಾರೆ.

ಶ್ರೀರಾಮುಲುಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಸಿದ್ದರಾಮಯ್ಯ

ಒಟ್ಟಾರೆಯಾಗಿ  ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯರ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳು ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಮಾಜಿ ಸಿಎಂ ಅವಕಾಶ ಸಿಕ್ಕಾಗೆಲ್ಲಾ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಈ ವೇಳೆ ಕೆಲ ಪ್ರಶ್ನೆಗಳನ್ನು ಕೇಳುವುದು.. ಉತ್ತರ ಸಿಗದಿದ್ದರೆ ತಾವೇ ಹೇಳಿಕೊಡುವುದು ನಡೆಯುತ್ತದೆ.

Follow Us:
Download App:
  • android
  • ios