ಕರ್ನಾಟಕ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಈಗಾಗಲೇ ತಮ್ಮ ಪಕ್ಷದ ಶಾಸಕರನ್ನು ರೆಸಾರ್ಟ್‌ಗೆ ರವಾನಿಸಿದ್ದಾರೆ. ಆದರೆ ಈ ನಡುವೆ ಉಭಯ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಮುಂದುವರೆಸಿದ್ದಾರೆ.

ಚಿತ್ರದುರ್ಗ[ಜ.20]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಚ್ಚು ಹುಡಿದಿದೆ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ಏನೇನೋ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದ್ದಾರೆ. ಚಿತ್ರದುರ್ಗ ಹಾಗೂ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ತೀವ್ರ ಕಿಡಿಕಾರಿದರು. ಯಡಿಯೂರಪ್ಪ ವಯಸ್ಸಿನ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಹಾಗಿದ್ದರೆ ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿಲ್ವಾ? ಅವರಿಗೆ ಮದುವೆಯಾಗುವ ವಯಸ್ಸಾ ಎಂದು ವ್ಯಂಗ್ಯವಾಡಿದರು. ಜತೆಗೆ, ಲಫಂಗರ ಬಾಯಲ್ಲಿ ಮಾತ್ರ ಅಂತಹ ಪದಗಳು ಬರುತ್ತವೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಸರಿಯಾದ ಪದಗಳನ್ನು ಬಳಸಬೇಕೆಂಬ ಪ್ರಜ್ಞೆ ಇರಬೇಕು. ಮುಖ್ಯಮಂತ್ರಿ ಸ್ಥಾನ ತಪ್ಪಿದ ಮೇಲೂ ನಿಮಗೆ ಬುದ್ದಿ ಬಂದಿಲ್ಲವಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌-ಜೆಡಿಎಸ್‌ನವರು ಮಕ್ಕಳ ಕಳ್ಳರಿದ್ದಂತೆ. ಹಾಗಾಗಿ ನಾವು ನಮ್ಮ ಪಕ್ಷದ ಮಕ್ಕಳನ್ನು ಕಾಪಾಡಿಕೊಳ್ಳಲು ರೆಸಾರ್ಟ್‌ಗೆ ಹೋಗಿದ್ದೆವು. ಆಳಂದ ಶಾಸಕ ಸುಭಾಷ್‌ ಗುತ್ತೇದಾರ್‌ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೇ ಆಫರ್‌ ನೀಡಿದ್ದರು ಎಂದು ಇದೇ ವೇಳೆ ಈಶ್ವರಪ್ಪ ಆರೋಪಿಸಿದರು.

ಶಾಸಕರ ರಾಜಿನಾಮೆಯೇ ಸಾಕು: ಸರ್ಕಾರ ರಚನೆ ಮಾಡಲು ಬಿಜೆಪಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರ ಅಗತ್ಯವಿಲ್ಲ. ಶಾಸಕರ ರಾಜಿನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರ ಅಲ್ಪ ಮತಕ್ಕೆ ಕುಸಿಯುತ್ತದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು. ಜತೆಗೆ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ ಎಂದು ತಿಳಿಸಿದರು.

ಈಶ್ವರಪ್ಪಗೆ ಬುದ್ಧಿ ಭ್ರಮಣೆ: ಸಿದ್ದು

ಆನೇಕಲ್‌: ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪಗೆ ಬುದ್ಧಿ ಭ್ರಮಣೆಯಾಗಿದೆ. ಬಾಯಿಗೆ ಬಂದಂತೆ ಮಾತನಾಡುವುದು ಒಂದು ಚಟ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಆನೇಕಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ತಮ್ಮನ್ನು ಓರ್ವ ಹುಚ್ಚ ಎಂದಿದ್ದಕ್ಕೆ$ಪ್ರತಿಕ್ರಿಯಿಸಿ, . ಆತನಿಗೆ ಒಂದು ಸಂಸ್ಕಾರ ಮತ್ತು ಸಂಸ್ಕೃತಿ ಇಲ್ಲ. ಜವಾಬ್ದಾರಿ ಸ್ಥಾನವನ್ನು ಅಲಂಕರಿಸಿದ್ದರೂ ಸಮಾಜದಲ್ಲಿ ವರ್ತಿಸುವ ಬಗೆ ಗೊತ್ತಿಲ್ಲ ಎಂದು ದೂರಿದರು.

ಬಿಜೆಪಿ ನೀಡುತ್ತಿರುವ ಹಿಂಸೆಯಿಂದ ತಪ್ಪಿಸಿಕೊಳ್ಳಲು ರೆಸಾರ್ಟ್‌ ಮೊರೆ ಹೋಗಿದ್ದೇವೆ ಎಂದು ವ್ಯಂಗವಾಗಿ ಚುಚ್ಚಿದ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಪವರ್ರೂ ಇಲ್ಲ. ಜನತೆ ಫುಲ್‌ ಆಗುವಷ್ಟುಪವರ್‌ ನೀಡಲಿಲ್ಲ ಎಂದರು.

++++

ವಸತಿ ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿ, ಬಿಜೆಪಿ ಮುಖಂಡ ಈಶ್ವರಪ್ಪ ಒಮ್ಮೆ ಉಪಮುಖ್ಯಮಂತ್ರಿಯಾಗಿದ್ದವರು. ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಸರ್ಕಾರ ಸುಭದ್ರವಾಗಿದೆ, ಯಾವುದೇ ಗೊಂದಲವಿಲ್ಲ, ಶಾಸಕರು ರೆಸಾರ್ಟ್‌ನಲ್ಲಿರುವುದು ನಿಜ. ಸರ್ಕಾರಕ್ಕೆ ಯಾವುದೇ ಅಪಾಯಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ನೇತಾರರು. ಅವರಲ್ಲೇನಾದರೂ ನ್ಯೂನತೆ ಇದ್ದರೆ ನಮ್ಮ ಪಕ್ಷದಲ್ಲಿ ಸರಿಪಡಿಸಿಕೊಳ್ಳುತ್ತೇವೆ. ಈಶ್ವರಪ್ಪ ತಮ್ಮ ತಲೆಯನ್ನು ತಾವೇ ಸರಿಪಡಿಸಿಕೊಳ್ಳಲಿ ಎಂದು ಸಂಸದ ಸುರೇಶ್‌ ಖಾರವಾಗಿ ಪ್ರತಿಕ್ರಿಯಿಸಿದರು. ಪಕ್ಷದ ಕೆಲ ಚಾರಗಳನ್ನು ಚರ್ಚೆ ಮಾಡಲು ಚರ್ಚೆ ಮಾಡಲು ಈಗಲ್‌ ಟನ್‌ ರೆಸಾರ್ಟ್‌ನಲ್ಲಿ ಸೇರಿದ್ದೇವೆ. ರೆಸಾರ್ಟ್‌ ರಾಜಕಾರಣ ಎಲ್ಲಿ ಬಂದಿತು ಎಂದು ಮರು ಪ್ರಶ್ನೆ ಹಾಕಿದರು.