ಸಿದ್ದಗಂಗಾ ಮಠದ ಗೋಕಟ್ಟೆಗೆ ಬಿದ್ದು ನಾಲ್ವರು ಮೃತ: ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಪರಮೇಶ್ವರ

ತುಮಕೂರು ಸಿದ್ದಗಂಗಾ ಮಠದ ಗೋಕಟ್ಟೆಗೆ ಬಿದ್ದು ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

Siddaganga mutt water pond four died Home Minister Parameshwar announced Rs 2 lakh compensation sat

ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಆ.14): ಸಿದ್ಧಗಂಗಾ ಮಠದಲ್ಲಿ ಜಲಸಮಾಧಿಯಾಗಿದ್ದ ನಾಲ್ವರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.. ಈ ನಡುವೆ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದುರಂತ ಸ್ಥಳಕ್ಕೆ ಭೇಟಿ ನೀಡಿದರು. ಮೃತರ ಕುಟುಂಬಸ್ಥರಿಗೆ ಸ್ವಾಂತನ ಹೇಳಿ. ಸರ್ಕಾರದಿಂದ 2 ಲಕ್ಷ ರೂ. ಪರಿಹಾರ ನೀಡುವ ಘೋಷಣೆ ಮಾಡಿದ್ದಾರೆ.

ನಿನ್ನೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯಬಾದರದ್ದ ದುರಂತವೊಂದು ನಡೆದು ಹೋಗಿತ್ತು. ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ  ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದರು. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಶ್ರೀ ಮಠದ ಸಿದ್ದಲಿಂಗ ಸ್ವಾಮೀಜಿಗಳ ಅಶಿರ್ವಾದ ಪಡೆದು ಘಟನೆ ಬಗ್ಗೆ ಮಾಹಿತಿ ಪಡೆದರು. ಅವಘಡದ ಸ್ಥಳ ವೀಕ್ಷಣೆ ಮಾಡಿ ಅಲ್ಲೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ನೀಡುತ್ತೇವೆ ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.

ಸಿದ್ದಗಂಗಾ ಮಠದ ಗೋಕಟ್ಟೆಗೆ ಬಿದ್ದು ನಾಲ್ವರು ದುರಂತ ಸಾವು: ನೀರಿಗೆ ಬಿದ್ದವ ಪಾರಾದ, ರಕ್ಷಣೆಗೋದವರು ಸತ್ತರು

ಅಚಾನಕ್ ಆದ ಆ ಒಂದು ಘಟನೆಯಿಂದ ನಾಲ್ವರು ಜಲಸಮಾಧಿಯಾಗಿದ್ದರು.. ಒಬರನೊಬ್ಬರು ಉಳಿಸಿಕೊಳ್ಳಲು ಹೋಗಿ ರಂಜಿತ್ ತಾಯಿ ಲಕ್ಷ್ಮೀ, ವಿದ್ಯಾರ್ಥಿಗಳಾದ ಶಂಕರ್, ಹರ್ಷಿತ್. ಪೋಷಕ ಮಹದೇವಪ್ಪ ನೀರು ಪಾಲಾಗಿದ್ದರು. ರಾತ್ರಿ ವರೆಗೆ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗಳು ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹ ಹೊರ ತೆಗೆದಿದ್ದರು. ತಡರಾತ್ರಿ ವರೆಗೂ ಕಾರ್ಯಚರಣೆ ನಡೆಸಿದರು ಕೂಡ ಶಂಕರ್ ಹಾಗೂ ಮಹದೇವಪ್ಪ ಅವರ ಮೃತದೇಹಗಳು ಪತ್ತೆಯಾಗಿರಲಿಲ್ಲ ರಾತ್ರಿ ಹಿನ್ನಲೆ ಶೋಧಕಾರ್ಯ ಸ್ಥಗಿತಗೊಳಿಸಲಾಗಿತ್ತು. ಮುಂಜಾನೆ ಆರು ಗಂಟೆಗೆ ಶೋಧನೆಗೆ ಇಳಿದ ತಂಡಕ್ಕೆ ಮೊದಲು ಶಂಕರ್ ಮೃತದೇಹ ಪತ್ತೆಯಾಗಿದೆ. ಬಳಿಕ ಮಹದೇವಪ್ಪ ಮೃತಯಾಗಿದೆ ಒಂದೊಂದೇ ಮೃತದೇಹ ಪತ್ತೆಯಾಗುತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಟ್ಟೆ ಸುತ್ತಲೂ ಮುಳ್ಳು ತಂತಿ ಹಾಕಲು ಮಠ ಸಿದ್ದತೆ ಮಾಡಿಕೊಂಡಿತ್ತು.ಇಂತಹ ವೇಳೆ ನಾಲ್ವರು ಮೃತಪಟ್ಟಿರೋದಕ್ಕೆ ಗೃಹ ಸಚಿವರು ಕಂಪನಿ ಮಿಡಿದು ಮೃತ ಕುಟಂಬಕ್ಕೆ‌ಸಾಂತ್ವಾನ ತಿಳಿಸಿದ್ರು.

ಮೃತ ಹರ್ಷಿತ್, ಶಂಕರ್ ಹಾಗೂ ರಂಜಿತ್ ಸಿದ್ದಗಂಗಾ ಮಠದಲ್ಲಿ 6 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದು. ಇನ್ನು ಮೃತ ಹರ್ಷಿತ್ ಚಿಕ್ಕಮಗಳೂರು ಮೂಲದವನಾಗಿದ್ದಾನೆ. ಶಂಕರ್ ರಾಮನಗರದ ಮಾಗಡಿ ಮೂಲದವನು, ಮಹದೇವಪ್ಪ ಯಾದಗಿರಿ ಮೂಲದವದರಾಗಿದ್ದು ತಮ್ಮ ಪುತ್ರ ಪವನ್ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತನ ಯೋಗಕ್ಷೇಮ ವಿಚಾರಿಸಲು ಬಂದಿದ್ದರು. ಶ್ರೀ ಮಠದ ಬಳಿಕ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ಪರಮೇಶ್ವರ್ ಕುಟುಂಬಸ್ಥರಿ ಸಾಂತ್ವನ ಹೇಳಿದರು. ನಾಲ್ವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹಗಳನ್ನು ತಮ್ಮ‌ಗ್ರಾಮಗಳಿಗೆ ತಗೆದುಕೊಂಡು ಹೋಗುವ ಮುನ್ನ, ತುಮಕೂರು ಶವಾಗಾರದ ಮುಂದೆ ತಮ್ಮವರನ್ನ ಕಳೆದುಕೊಂಡ ಕುಟುಂಬಸ್ಥರ ಸ್ಥಿತಿ ಎಂಥವರ ಮನ ಕಲಕುವಂತಿತ್ತು.

ಕಾವೇರಿ ನೀರನ್ನು ಮಿತಿಮೀರಿ ಬಳಸುತ್ತಿದೆ ತಮಿಳುನಾಡು: ಸಿಎಂ ಸಿದ್ದರಾಮಯ್ಯಗೆ ಮಾಹಿತಿ ಕೊಟ್ಟ ಬೊಮ್ಮಾಯಿ

ಒಟ್ಟಾರೆ ಇಂತಹ ಪುಣ್ಯ ಕ್ಷೇತ್ರದಲ್ಲಿ ನಡೆಯಬಾರದಂತ ಘಟನೆ‌ವೊಂದು ನಡೆದು ಶ್ರೀ ಮಠದಲ್ಲಿ ನೀರವಮೌನ ಆವರಿಸಿದ್ದು..ಮಠದ ತುಂಬಿಲ್ಲಾ ಕಂಬನಿ ಮಿಡಿದಿದೆ..ಮತ್ತೆಂದು ಇಂತಹ ಘಟನೆಗಳು  ಮರುಕಳಿಸದಿರಲಿ ಎಂಬುದು ನಮ್ಮ ಆಶಯವಾಗಿದೆ.

Latest Videos
Follow Us:
Download App:
  • android
  • ios