ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಜಿಹಾದಿಗಳು ತಲ್ವಾರ್‌ಗಳನ್ನು, ಚಾಕು, ಚೂರಿ ಆಯುಧಗಳನ್ನು ಝಳಪಿಸಿದ್ದರೂ, ಸೆಕ್ಯೂಲರ್‌ ಸಿದ್ದರಾಮಯ್ಯ ತಲೆಮರೆಸಿಕೊಂಡಿದ್ದಾರೆ.

ಬೆಂಗಳೂರು (ಅ.02): ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಹಬ್ಬದ ಹಿನ್ನೆಯಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ತಲ್ವಾರ್‌ಗಳನ್ನು, ಚಾಕು, ಚೂರಿ ಹಾಗೂ ಇತರೆ ಹರಿತವಾದ ಆಯುಧಗಳನ್ನು ಜಿಹಾದಿಗಳು ಝಳಪಿಸಿದ್ದರೂ, ಸೆಕ್ಯೂಲರ್‌ ಸಿದ್ದರಾಮಯ್ಯ ತಲೆಮರೆಸಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿಕೊಂಡಿದೆ.

ಜಿಹಾದಿಗಳು ಶಿವಮೊಗ್ಗದ ಬೀದಿಗಳಲ್ಲಿ ಕತ್ತಿ ಮತ್ತು ಆಯುಧಗಳನ್ನು ಝಳಪಿಸುತ್ತಾ 'ಸೆಕ್ಯುಲರ್' ಆಗಿ ಓಡುತ್ತಾರೆ. ಆದರೆ, ಈ ಘಟನೆಯ ನಂತರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಮರೆಸಿಕೊಂಡಿದ್ದಾನೆ. ಜೊತೆಗೆ ಕಾಂಗ್ರೆಸ್‌ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ, ಯಾವುದೇ ಕ್ರಮದ ಭಯವಿಲ್ಲದೆ ಹಿಂದೂಗಳನ್ನು ಭಯಭೀತಗೊಳಿಸಲು ಜಿಹಾದಿ ಸಂಘಟನೆಗಳು ಅಡಗಿ ಕುಳಿತಿವೆ. ಕಾಂಗ್ರೆಸ್‌ ಜಿಹಾದಿಗಳಿಗೆ ಶರಣಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಿಹಾದಿ ಸರ್ಕಾರವಲ್ಲದೆ ಬೇರೇನೂ ಅಲ್ಲ ಎಂಬುದು ದುರದೃಷ್ಟಕರ ಎಂದು ವೀಡಿಯೋ ಸಮೇತವಾಗಿ ಟ್ವೀಟ್‌ ಮಾಡಿದೆ.

ಶಿವಮೊಗ್ಗದಲ್ಲಿ ಇದೆಲ್ಲ ಏನ್ ಹೊಸದಾಗಿ ಮಾಡ್ತಾರಾ? ಗೃಹ ಸಚಿವ ಪರಮೇಶ್ವರ ಉಡಾಫೆ ಉತ್ತರ!

ಇದು ಶಿವಮೊಗ್ಗದಲ್ಲಿ ಮತಾಂಧರು ಮಾಡಿರುವ ತಲ್ವಾರ್ ಮೆರವಣಿಗೆಯ ವಿಡಿಯೋ. ಇಂತಹ ತಲ್ವಾರ್ ಮೆರವಣಿಗೆಯು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ ಎಂಬುದನ್ನು ಅನುಮತಿ ನೀಡಿದ ಕಾಂಗ್ರೆಸ್ ಸರ್ಕಾರವೇ ತಿಳಿಸಬೇಕು. ಹಿಂದೂಗಳೆಲ್ಲರನ್ನೂ ಒಬ್ಬರು ಉಳಿಯದ ರೀತಿ ಮುಗಿಸುತ್ತೇವೆ ಎಂದು ಹೇಳಿದ ಜಿಹಾದಿ ಸಂಘಟನೆಗಳಿಗೆ ಬೆಂಬಲವಾಗಿ ಕಾಂಗ್ರೆಸ್ ಸರ್ಕಾರ ನಿಂತಿರುವುದಕ್ಕೆ ಬೇರೇನು ಸಾಕ್ಷಿ ಬೇಕು! ಗಣೇಶ ಚತುರ್ಥಿಗೆ ಹಿಂದೂಗಳು ಸ್ಥಾಪಿಸುವ ಗಣಪತಿಗೆ ನೂರೆಂಟು ಅನುಮತಿ ಕೇಳುವ ಕೈ ಸರ್ಕಾರ, ಸಮಾಜದ ಶಾಂತಿ ಕದಡುವ ಇಂತಹ ಮೆರವಣಿಗೆಗಳಿಗೆ ಅನುಮತಿ ನೀಡಿದ್ದರ ಹಿನ್ನಲೆ ಏನು..? ಈ ಜಿಹಾದಿ ಸರ್ಕಾರದಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ! ಎಂದು ಟೀಕೆ ಮಾಡಿತ್ತು.

Scroll to load tweet…

ಕರ್ನಾಟಕವನ್ನು ಟಿಪ್ಪು-ಔರಂಗಜೇಬನ ನಾಡನ್ನಾಗಿಸಲು ಹೊರಟಿದೆ ಕಾಂಗ್ರೆಸ್‌: ಶಾಂತಿಯ ನಾಡಾಗಿದ್ದ ನಮ್ಮ ಕರ್ನಾಟಕವನ್ನು ಮತಾಂಧ ಟಿಪ್ಪು-ಔರಂಗಜೇಬನ ನಾಡನ್ನಾಗಿಸಲು ಹೊರಟಿದೆ ಕಾಂಗ್ರೆಸ್‌! ಕೋಲಾರದಲ್ಲಿ ತಲ್ವಾರ್‌ ಶೈಲಿಯ ಕಮಾನ್‌, ಕಟೌಟ್ ನಿರ್ಮಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾಯ್ತು, ಈಗ ಶಿವಮೊಗ್ಗದಲ್ಲಿ ಅದೇ ರೀತಿಯ ತಲ್ವಾರ್‌ ಕಮಾನ್‌, ಟಿಪ್ಪು ಕಟೌಟ್‌ಗಳನ್ನು ನಿರ್ಮಿಸಿ ಶಾಂತಿ ಕದಡುವ ಕೆಲಸ ನಡೆದಿದೆ. ಜಿಲ್ಲಾಡಳಿತ ಮೌನವಾಗಿದ್ದು ಕಾಂಗ್ರೆಸ್‌ ಸರ್ಕಾರ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ.

ಈದ್‌ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ, ಶಿವಮೊಗ್ಗ ಈಗ ಬೂದಿಮುಚ್ಚಿದ ಕೆಂಡ

ಪುಂಡರ ಹಿಂದಿರುವ ಶಕ್ತಿ ಕಾಂಗ್ರೆಸ್ ಸರ್ಕಾರ: ವಿವಾದಾತ್ಮಕ ಕಟೌಟ್‌ಗಳನ್ನು ತೆರವುಗೊಳಿಸಿ ಎಂದು ಪೊಲೀಸರು ಹೇಳಿದರೂ, ಪೊಲೀಸರಿಗೆ ಆವಾಜ್ ಹಾಕುತ್ತಾರೆಂದರೇ, ಆ ಪುಂಡರ ಹಿಂದಿರುವ ಶಕ್ತಿ ಕಾಂಗ್ರೆಸ್ ಸರ್ಕಾರವೇ ಹೊರತು ಮತ್ತಾರು ಅಲ್ಲ. ಆಧುನಿಕ ಔರಂಗಜೇಬನಂತೆ ಮತಾಂಧರಿಗೆ ಅಭಯ ನೀಡುವ ಸಿದ್ದರಾಮಯ್ಯರವರ ಸರ್ಕಾರ ಬಂದಿದ್ದೇ ಬಂದಿದ್ದು, ಸಮಾಜಘಾತುಕ ಶಕ್ತಿಗಳೆಲ್ಲಾ, ಸಮಾಜದ ಶಾಂತಿಯನ್ನು ಕದಡಲು ಸದಾ "ಸಿದ್ಧ" ಎಂಬಂತೆ ಕುಳಿತಿವೆ. ಒಂದು ವೇಳೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಬಂದದ್ದೇ ಆದಲ್ಲಿ, ಅದಕ್ಕೆ ನೇರ ಹೊಣೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಟ್ವೀಟ್‌ ಮಾಡಿತ್ತು.