ಕರ್ನಾಟಕದ ರತ್ನ ಸಿದ್ದಗಂಗಾ ಶ್ರೀ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಯಾರೆಲ್ಲ ಹೇಗೆ ನಡೆದಾಡುವ ದೇವರನ್ನು ಸ್ಮರಿಸಿಕೊಂಡಿದ್ದಾರೆ ನೋಡಿ.
ಕರ್ನಾಟಕದ ರತ್ನ ಸಿದ್ಧಗಂಗಾ ಶ್ರೀ ಅಗಲಿಕೆಗೆ ಮೋದಿ ಸೇರಿದಂತೆ ಹಲವು ಗಣ್ಯರ ಕಂಬನಿ

ಕನ್ನಡಿಗರಿಗೆ ಮತ್ತೊಂದು ಆಘಾತ ಬಂದೆರಗಿದೆ. ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದರು. ಬಡವರ ಬಾಳಿಗೆ ಬೆಳಕಾಗಿದ್ದ ಶ್ರೀಗಳ ಸಾವಿಗೆ ಇಡೀ ರಾಜ್ಯವೇ ಮಮ್ಮುಲ ಮರಗುತ್ತಿದೆ. ಶ್ರೀಗಳ ಅಂತಿಮ ವಿಧಾನ ಜನವರಿ 22ರ ಸಂಜೆ 4.30ಕ್ಕೆ ನೆರವೇರಲಿದೆ.
ಕರ್ನಾಟಕದ ರತ್ನ ಸಿದ್ದಗಂಗಾ ಶ್ರೀ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಯಾರೆಲ್ಲ ಹೇಗೆ ನಡೆದಾಡುವ ದೇವರನ್ನು ಸ್ಮರಿಸಿಕೊಂಡಿದ್ದಾರೆ ನೋಡಿ.
ಕರ್ನಾಟಕದ ರತ್ನ ಸಿದ್ಧಗಂಗಾ ಶ್ರೀ ಅಗಲಿಕೆಗೆ ಮೋದಿ ಸೇರಿದಂತೆ ಹಲವು ಗಣ್ಯರ ಕಂಬನಿ
ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದಾರೆ. ಈಗಾಗಲೇ ಚಿತ್ರೋದ್ಯಮ ಮಂಗಳವಾರದಂದು ಬಂದ್ ಘೋಷಿಸಿದೆ. ಸಿನಿಮಾ ನಟ, ನಟಿಯರು 'ಕಾಯಕಯೋಗಿಯ' ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ
ಶ್ರೀಗಳು ಶಿವೈಕ್ಯರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇನ್ನು ನಾಳೆ ಮಂಗಳವಾರ ಶ್ರೀಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
HH Dr. Sree Sree Sree Sivakumara Swamigalu remained at the forefront of ensuring better healthcare and education facilities for the marginalised.
— Narendra Modi (@narendramodi) January 21, 2019
He represents the best of our traditions of compassionate service, spirituality and protecting the rights of the underprivileged. pic.twitter.com/Tp6o5ULU2d
I have had the privilege to visit the Sree Siddaganga Mutt and receive the blessings of His Holiness Dr. Sree Sree Sree Sivakumara Swamigalu.
— Narendra Modi (@narendramodi) January 21, 2019
The wide range of community service initiatives being done there are outstanding and are at an unimaginably large scale. pic.twitter.com/wsmRp2cERd
ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ.
— Siddaramaiah (@siddaramaiah) January 21, 2019
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದು:ಖತಪ್ತ ಮನಸ್ಸಿನಿಂದ ಪ್ರಾರ್ಥಿಸುತೇನೆ. ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.#DrShivakumaraswamijeepic.twitter.com/NJFf3slO2F
ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ನಡೆಯುತ್ತಿದ್ದ ಏರುಪೇರು ನಮ್ಮೆಲ್ಲರನ್ನೂ ಆತಂಕಕ್ಕೀಡುಮಾಡಿತ್ತು. ಇಂತಹದ್ದೊಂದು ದಿನ ಎದುರಾಗಬಹುದೆಂಬ ಭಯ ನಿಜವಾಗಿದೆ. ಸಾಧನೆಯ ಮೂಲಕ ಲೋಕವನ್ನೇ ಗೆದ್ದಿರುವ ಸ್ವಾಮಿಗಳು ಕೊನೆಗೂ ಸಾವನ್ನು ಗೆಲ್ಲಲಾಗದೆ ಶರಣಾಗಿ ನಮ್ಮನ್ನು ಅನಾಥರಾಗಿಸಿದ್ದಾರೆ.#DrShivkumaraswamijipic.twitter.com/oPero9hPfk
— Siddaramaiah (@siddaramaiah) January 21, 2019
ನಾವು ಯಾರೂ ಬಸವಣ್ಣನವರನ್ನು ಕಣ್ಣಾರೆ ನೋಡಿಲ್ಲ, ನಾನು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ಅವರನ್ನು ‘’ನಡೆದಾಡುವ ದೇವರು’’ ಎನ್ನುತ್ತಾರೆ. ನನ್ನ ಪಾಲಿಗೆ ಅವರು ‘’ನಡೆದಾಡುತ್ತಿದ್ದ ಬಸವಣ್ಣ’’ ಆಗಿದ್ದರು.#DrShivakumarswamijipic.twitter.com/y30gD2KYwL
— Siddaramaiah (@siddaramaiah) January 21, 2019
24 ಗಂಟೆಗಳ ಕಾಲ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಾಳೆ ಮಧ್ಯಾಹ್ನ 03 ಗಂಟೆಯವರೆಗೆ ಅಂತಿಮ ದರ್ಶನ.
ಶ್ರೀಗಳು ಶಿವೈಕ್ಯರಾಗಿದ್ದು, ನಾಳೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ತುಮಕೂರು ಸಿದ್ಧಗಂಗಾ ಮಠಕ್ಕೆ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ತುಮಕೂರು ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಂಗಳವಾರ ಚಿತ್ರೋದ್ಯಮ ಬಂದ್ ಘೋಷಿಸಲಾಗಿದೆ.
ಶ್ರೀಗಳ ಶಿವೈಕ್ಯಕ್ಕೆ ವಿ. ಸೋಮಣ್ಣ ಕಣ್ಣೀರು ಹರಿಸಿದ್ದಾರೆ. ಇತ್ತ ಎಚ್. ಡಿ ಕುಮಾರಸ್ವಾಮಿ ಹಾಗೂ ಬಿ. ಎಸ್ ಯಡಿಯೂರಪ್ಪ ಶ್ರೀಗಳಿಗೆ ಭಾರತ ರತ್ನ ನೀಡಲೇಬೆಖು ಎಂದು ಮನವಿ ಮಾಡಿಕೊಂಡಿದ್ದಾರೆ.
ಶ್ರೀಗಳು ಲಿಂಗೈಕ್ಯರಾಗಿದ್ದು, ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ನಾಡಿನಾದ್ಯಂತ 3 ದಿನ ಶೋಕಾಚರಣೆ.
ಎಚ್. ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡುತ್ತಾ 'ಶಿವಕುಮಾರ ಸ್ವಾಮೀಜಿಗಳು ಸೋಮವಾರ 11.45ಕ್ಕೆ ಶಿವೈಕ್ಯರಾಗಿರುವುದನ್ನು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ. ಭಕ್ತರು ಅವರ ಅಂತಿಮ ದರ್ಶನ ಪಡೆಯಬೇಕಾದರೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಇಲ್ಲಿ ಎಲ್ಲಾ ಕ್ಷೇತ್ರದ ಮಠಾಧೀಶರು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು, ಬಿ. ಎಸ್ ಯಡಿಯೂರಪ್ಪನವರು ಸೇರಿ ನಡೆಸಿದ ತುರ್ತು ಸಭೆಯಲ್ಲಿ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಶಾಂತಿಯಿಂದ ಅಂತಿಮ ದರ್ಶನ ಪಡೆಯಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ನಾಡಿನ ನಡೆದಾಡುವ ದೇವರೆಣಂದೇ ಕರೆಯಲಾಗುತ್ತಿದ್ದ ಪರಮಪೂಜ್ಯ ಶ್ರೀ ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಹೂಗಳಿಂದ
ಪಲ್ಲಕ್ಕಿಯನ್ನೂ ತರಲಾಗಿದೆ. .
ತುಮಕೂರು ಮಠದ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ. ತುಮಕೂರಿನಾದ್ಯಂತ ಅಘೋಷಿತ ಬಂದ್. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು. ತುಮಕೂರು ಮಠ ಹಾಗೂ ನಗರದಾದ್ಯಂತ ನೀರವ ಮೌನ.
ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಭಕ್ತರನ್ನು ಆತಂಕಕ್ಕೀಡು ಮಾಡಿದೆ. ಶ್ರೀಗಳ ದರ್ಶನ ಪಡೆಯಲು ಭಕ್ತ ಸಾಗರ ಮಠದತ್ತ ಆಗಮಿಸುತ್ತಿದ್ದು, ಆವರಣದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮಠಕ್ಕೆ ತಲುಪಿರುವ ಕುಮಾರಸ್ವಾಮಿ ತುರ್ತು ಸಭೆ ನಡೆಸುತ್ತಿದ್ದಾರೆ.
ಸಿಎಂ ಕುಮಾರಸ್ವಾಮಿ ತುಮಕೂರು ಸಿದ್ಧಗಂಗಾ ಮಠಕ್ಕೆ ತೆರಳಿದ್ದು, ವೈದ್ಯರು ಹಾಗೂ ಕಿರಿಯ ಶ್ರೀಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಇನ್ನು 15-20 ನಿಮಿಷಗಳೊಳಗೆ ಶ್ರೀಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಯಲಿದೆ.
ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ತುಮಕೂರಿನ ಸಿದ್ಧಗಂಗಾ ಮಠದತ್ತ ಆಗಮಿಸುತ್ತಿದ್ದಾರೆ
ತುಮಕೂರು ಸಿದ್ಧಗಂಗಾ ಮಠದಲ್ಲಿ ಕಿರಿಯ ಶ್ರೀಗಳೊಂದಿಗೆ ಬಿಎಸ್‌ವೈ ಚರ್ಚೆ ಆರಂಭಿಸಿದ್ದಾರೆ. ಶ್ರಿಗಳ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಆತಂಕಗೊಂಡಿರುವ ಕಿರಿಯ ಶ್ರೀಗಳು
ಶ್ರೀಗಳ ಅನಾರೋಗ್ಯ ಹಿನ್ನೆಲೆ ಕಾಂಗ್ರೆಸ್ ಶಾಸಕಾಂಗ ಸಭೆ ರದ್ದುಗೊಳಿಸಲಾಗಿದೆ. ರೆಸಾರ್ಟ್ ರಾಜಕಾರಣ ಕೂಡಾ ಅಂತ್ಯಗೊಂಡಿದ್ದು, ಕಾಂಗ್ರೆಸ್ ಶಾಸಕರು ತುಮಕೂರು ಮಠದತ್ತ ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಸಿದ್ಧಗಂಗಾ ಮಠಕ್ಕೆ ಭೇಟಿ ಮಾಡುವ ಸಾಧ್ಯತೆ ಇದೆ.
ಶ್ರೀಗಳ ಆರೋಗ್ಯದ ಕುರಿತಾಗಿ ಡಾ| ಪರಮೇಶ್ ಮಾಹಿತಿ ನೀಡಿದ್ದು, 'ಶ್ರೀಗಳ ಆರೋಗ್ಯ ಬಹಳ ಗಂಭೀರವಾಗಿದೆ. ಆದರೂ ಚಿಕಿತ್ಸೆ ಮುಂದುವರೆಸಿದ್ದು, ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಿದ್ದೇವೆ. ಬೆಂಗಳೂರಿನಿಂದ ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡವೂ ಬರುತ್ತಿದೆ. ಡಾ. ರೆಲಾರವರ ಸಲಹೆಯನ್ನೂ ಪಡೆಯುತ್ತಿದ್ದೇವೆ. ಪ್ರೋಟೀನ್ ಅಂಶವೂ ಕುಸಿದಿದೆ. ಮುಂದಿನ 2-3 ಗಂಟೆಯೊಳಗೆ ಶ್ರೀಗಳ ಆರೋಗ್ಯದ ಕುರಿತಾಗಿ ಸ್ಪಷ್ಟವಾಗಿ ತಿಳಿಯಲಿದೆ' ಎಂದಿದ್ದಾರೆ.