ಬಿಜೆಪಿಗೆ ಬಿಸಿ ತುಪ್ಪವಾದ ಪುತ್ತಿಲ; ಪರಿವಾರದಿಂದ ಸೌಜನ್ಯ ಪರ ಹೋರಾಟ
2012ರಲ್ಲಿ ಅತ್ಯಾಚಾರವಾಗಿ ಕೊಲೆಯಾದ ಬೆಳ್ತಂಗಡಿ ತಾಲೂಕಿನ ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಆಗ್ರಹಿಸಿ ಇಂದು ಆ.14ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ಪಾದಯಾತ್ರೆ ಹಾಗೂ ರಸ್ತೆ ತಡೆ ನಡೆಯಲಿದೆ. ಈ ಹೋರಾಟಕ್ಕೆ ಮೃತ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಪುತ್ತಿಲ ಪರಿವಾರದ ವತಿಯಿಂದ ಆಹ್ವಾನಿಸಲಾಗಿದೆ.
ಪುತ್ತೂರು (ಆ.14) : 2012ರಲ್ಲಿ ಅತ್ಯಾಚಾರವಾಗಿ ಕೊಲೆಯಾದ ಬೆಳ್ತಂಗಡಿ ತಾಲೂಕಿನ ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಆಗ್ರಹಿಸಿ ಇಂದು ಆ.14ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ಪಾದಯಾತ್ರೆ ಹಾಗೂ ರಸ್ತೆ ತಡೆ ನಡೆಯಲಿದೆ. ಈ ಹೋರಾಟಕ್ಕೆ ಮೃತ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಪುತ್ತಿಲ ಪರಿವಾರದ ವತಿಯಿಂದ ಆಹ್ವಾನಿಸಲಾಗಿದೆ.
ಬಿಜೆಪಿಗೆ ಬಿಸಿ ತುಪ್ಪವಾದ ಪುತ್ತಿಲ. ಬಿಜೆಪಿಗೂ ಮೊದಲೇ ಹೈ ಫ್ರೊಫೈಲ್ ಕೇಸ್ ನಲ್ಲಿ ಫೀಲ್ಡಿಗಿಳಿದ ಪುತ್ತಿಲ. ಕಳೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಪುತ್ತಿಲ ಇದೀಗ ಧರ್ಮಸ್ಥಳದ ಸೌಜನ್ಯ ಹೋರಾಟಕ್ಕೆ ಧುಮುಕಿದ್ದಾರೆ. ಸೌಜನ್ಯ ಪರ ನ್ಯಾಯಕ್ಕೆ ಆಗ್ರಹಿಸಿ ಇಂದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿರುವ ಪುತ್ತಿಲ ಪರಿವಾರ.
ಜಸ್ಟೀಸ್ ಫಾರ್ ಸೌಜನ್ಯಾ ಕೇಸಿಗೆ ಮಣಿಯುತ್ತಾ ಸರ್ಕಾರ.! ನಾಲ್ವರ ವಿರುದ್ಧ ಮರು ತನಿಖೆ ನಡೆಯುತ್ತಾ.?
ದ.ಕ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೆಚ್ಚಾಗ್ತಿರೋ ಸೌಜನ್ಯ ಪರ ಹೋರಾಟ. ಅ.27ಕ್ಕೆ ಬೆಳ್ತಂಗಡಿಯಲ್ಲಿ ಬಿಜೆಪಿಯಿಂದಲೂ ಸೌಜನ್ಯ ಪರ ಬೃಹತ್ ಧರಣಿ ನಡೆಯಲಿದೆ. ಬಿಜೆಪಿಗೂ ಮೊದಲೇ ಸೌಜನ್ಯ ಪರ ಹೋರಾಟಕ್ಕೆ ಇಳಿದಿರುವ ಪುತ್ತಿಲ ಬೃಹತ್ ಕಾಲ್ನಡಿಗೆ ಜಾಥ ನಡೆಸಲಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪುತ್ತೂರು ಬಂದ್ ಗೂ ಕರೆ ನೀಡಲಾಗಿದೆ. ದರ್ಬೆ ವೃತ್ತದಿಂದ 10ಕ್ಕೆ ಆರಂಭವಾಗಲಿರೋ ಬೃಹತ್ ಪಾದಯಾತ್ರೆ ಬಳಿಕ ಪುತ್ತೂರು ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ಸಭೆ.
ಪ್ರತಿಭಟನೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಪುತ್ತಿಲ ಪರಿವಾರ ಸ್ಪಷ್ಟನೆ
ಉಜಿರೆಯ ವಿದ್ಯಾರ್ಥಿನಿ ಸೌಜನ್ಯಳಿಗೆ ನ್ಯಾಯ ಕೇಳಲು ನಡೆಸುವ ಹೋರಾಟಕ್ಕೂ ಅಡ್ಡಿಪಡಿಸುತ್ತಿರುವುದನ್ನು ಮಾಧ್ಯಮದ ಮೂಲಕ ಗಮನಕ್ಕೆ ಬಂದಿದ್ದು , ಇದನ್ನು ಪುತ್ತಿಲ ಪರಿವಾರ ಖಂಡಿಸಿದೆ. ಪುತ್ತೂರಿನ ವ್ಯಾಪಾರಸ್ಥರು ಯಾವತ್ತೂ ನ್ಯಾಯದ ಪರವಾಗಿದ್ದು ಅವರು ಸೌಜನ್ಯಳ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಇಂದು ಪುತ್ತಿನ ಪರಿವಾರದ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆ, ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.
ಈ ಹೋರಾಟ ಯಾವುದೇ ರಾಜಕೀಯ ಹೋರಾಟವಲ್ಲ ಮತ್ತು ಸರ್ಕಾರದ ವಿರುದ್ಧ ನಡೆಯುವ ಹೋರಾಟವೂ ಅಲ್ಲ. ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ಈ ಹೋರಾಟಕ್ಕೆ ಪೊಲೀಸ್ ಇಲಾಖೆಯೂ ಸ್ಪಂದಿಸಬೇಕು. ಆ.14 ರ ಪುತ್ತಿಲ ಪರಿವಾರದ ಹೋರಾಟ ಪೂರ್ವನಿಗದಿಯಂತೆ ನಡೆಯುತ್ತದೆ. ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ದರ್ಬೆಯಿಂದ ಹೊರಟು ಬಸ್ ನಿಲ್ದಾಣದವರೆಗೆ ಜಾಥಾ ನಡೆಯಲಿದೆ ಎಂದು ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾದ ಪ್ರಸನ್ನ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ, ನಗರ ಅಧ್ಯಕ್ಷ ಅನಿಲ್ ತೆಂಕಿಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರ್ತಕ ಸಂಘದ ಬೆಂಬಲವಿಲ್ಲ: ಸೋಮವಾರ ನಡೆಯುವ ರಸ್ತೆ ತಡೆ ಹಾಗೂ ಬಂದ್ ಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬೆಂಬಲವಿಲ್ಲ ಎಂದು ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ತಿಳಿದಿದ್ದಾರೆ.
ಧರ್ಮಸ್ಥಳ ಭಕ್ತರ ಪ್ರತಿಭಟನೆ ವೇಳೆ ಸೌಜನ್ಯ ಪೋಷಕರ ಮೇಲೆ ಹಲ್ಲೆ ಯತ್ನ; ದೂರು
ಬಂದ್ ರಸ್ತೆ ತಡೆ ಗಳಿಂದ ವ್ಯಾಪಾರ ವ್ಯವಹಾರ ಹಾಗೂ ನಾಗರಿಕರಿಗೆ ಹಲವಾರು ರೀತಿಯ ತೊಂದರೆಗಳು ಉಂಟಾಗುವುದು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬೆಂಬಲ ಇರುವುದಿಲ್ಲ. ಮುಂದೆ ಯಾವುದೇ ಧರ್ಮದ ಯುವತಿ ಹಾಗೂ ಯುವಕರ ಮೇಲೆ ನಡೆಯುವ ಅತ್ಯಾಚಾರ ದೌರ್ಜನ್ಯ ಕೊಲೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು. ಈಗಾಗಲೇ ನಡೆದ ಘಟನೆಗಳನ್ನು ಖಂಡಿಸಲಾಗುವುದು. ವರ್ತಕರ ಪರವಾಗಿ ಸರಕಾರಕ್ಕೆ ಅಸಿಸ್ಟೆಂಟ್ ಕಮಿಷರ್ನ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.