ಭೈರಾಪುರ ಸೇತುವೆ ಬಳಿ ಹಳೇ ಕಾಲದ ನಾಣ್ಯ, ಮಣಿನಾಲ್ಮೂರುನಲ್ಲಿ ಶಿಲಾಮಯ ದೇಗುಲ ಕುರುಹು ಪತ್ತೆ!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿ ಭೈರಾಪುರ ಬಳಿ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಪತ್ತೆಯಾಗಿವೆ.

Ancient coinss with an image of Chhatrapati Shivaji found near Bhairapur at chitradurga rav

ಚಿತ್ರದುರ್ಗ (ಜು.17):  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿ ಭೈರಾಪುರ ಬಳಿ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಪತ್ತೆಯಾಗಿವೆ.

ಬಹುತೇಕ ನಾಣ್ಯಗಳು ಛತ್ರಪತಿ ಶಿವಾಜಿಯ ಮುಖಚಿತ್ರವನ್ನು ಹೊಂದಿದ್ದು, ಹಿಂಬದಿ ಕತ್ತಿ-ಗುರಾಣಿ ಚಿತ್ರವಿದೆ. ನಾಣ್ಯಗಳ ಮೇಲೆ  1674 ಎಂದು ದಾಖಲಾಗಿದೆ. 

ಹದಿನೈದು ವರ್ಷದ ಹಿಂದೆ ನಿರ್ಮಾಣ ಆಗಿರುವ ಸೇತುವೆ. ಸೇತುವೆ ನಿರ್ಮಾಣಕ್ಕೆ ಅರಣ್ಯ ಭಾಗದಿಂದ ಮಣ್ಣು ತರಲಾಗಿತ್ತು. ಕುರಿಗಾಹಿಗಳು ಮೇಯಿಸಲು ಹೋಗಿದ್ದಾಗ ಸೇತುವೆ ಕೆಳಭಾಗದಲ್ಲಿ ಸಿಕ್ಕಿರುವ ನಾಣ್ಯಗಳು. ತಾಮ್ರದ ಮಾದರಿಯ ಐವತ್ತಕ್ಕೂ ಹೆಚ್ಚು ನಾಣ್ಯಗಳು ಪತ್ತೆ. ಸೇತುವೆ ಬಳಿ‌ ಸಿಕ್ಕ ನಾಣ್ಯಗಳನ್ನು ಮನೆಗೆ ಕೊಂಡೊಯ್ದಿರುವ ಜನರು. ಅಧಿಕಾರಿಗಳು, ಸಂಶೋಧಕರು ಪರಿಶೀಲನೆ ನಡೆಸಲಿ ಎಂದು ಗ್ರಾಮದ ಚಿತ್ತಯ್ಯ ಮನವಿ ಮಾಡಿದ್ದಾರೆ.

ಮೊಘಲರ ಕಾಲದ ನಾಣ್ಯ ಪತ್ತೆ: ಸಿಕ್ಕಿದ ನಾಣ್ಯ ಹಂಚಿಕೊಂಡ ಗುಮ್ಮನೇ ಕುಳಿತ ಜನ 

ಮಣಿನಾಲ್ಕೂರು: ಶಿಲಾಮಯ ದೇಗುಲ ಕುರುಹು ಪತ್ತೆ!

 ಉಪ್ಪಿನಂಗಡಿ:  ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಬಾರ್ಯತ್ತಾರು ಎಂಬಲ್ಲಿ ಸುಜಾನಂದ ರೈ ಎಂಬವರ ಭೂಮಿಯಲ್ಲಿ ಶಿಲಾಮಯ ದೇಗುಲವೊಂದರ ಕುರುಹು ಪತ್ತೆಯಾಗಿದ್ದು, ಇತಿಹಾಸಕಾರರ ಅಧ್ಯಯನಕ್ಕೆ ಸೂಕ್ತವೆನಿಸಿದೆ.

ಗಿಡಗಂಟಿ ಪೊದೆಗಳು ಬೆಳೆದು ಮೇಲ್ನೋಟಕ್ಕೆ ಯಾವುದೂ ಗೋಚರಿಸದಿದ್ದರೂ, ಶತಮಾನಗಳ ಹಿನ್ನೆಲೆಯನ್ನು ಸಾದರಪಡಿಸುವ ಅಗಲವಾದ ಮುರಕಲ್ಲಿನಿಂದ ಕಟ್ಟಲಾದ ಪಂಚಾಂಗಗಳ ಕಲ್ಲುಗಳು ಪೊದೆಯ ಮಧ್ಯ ಭಾಗದಲ್ಲಿ ಅಲ್ಲಿಲ್ಲಿ ಕಾಣಿಸುತ್ತಿದೆ. ಮಾತ್ರವಲ್ಲದೆ ದೇವಾಲಯಗಳ ಬಳಿ ಇರುವಂತಹ ಬಾವಿ ಇಂದಿಗೂ ಗಿಡಮರಗಳ ಮಧ್ಯೆ ಸುಸ್ಥಿತಿಯಲ್ಲಿದ್ದು, ಇಲ್ಲಿ ದೇವಾಲಯವಿರುವುದನ್ನು ಖಚಿತಪಡಿಸುತ್ತಿದೆ.

ಮಾತ್ರವಲ್ಲದೆ ಸುಜಾನಂದ ರೈ ಯವರ ಮನೆ ಸಮೀಪ ಹಲವು ಚಪ್ಪಡಿ ಕಲ್ಲುಗಳು ದೊರಕಿದ್ದು, ಅವೆಲ್ಲವೂ ಶಿಲಾಮಯ ದೇಗುಲದಲ್ಲಿ ಕಿಟಕಿ ದಾರಂದಗಳಿಗೆ ಬಳಸುವಂತಿದ್ದ ಸ್ವರೂಪದಲ್ಲಿದೆ.

ಸ್ಥಳೀಯ ನಿವಾಸಿಗರಾದ ವಿಶ್ವನಾಥ ಶೆಟ್ಟಿಪ್ರಕಾರ, ಸುತ್ತಮುತ್ತಲ ದೇವಾಲಯಗಳಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ ಈ ಗ್ರಾಮಕ್ಕೆ ಗ್ರಾಮ ದೇವಾಲಯವಾಗಿ ಶಿವ ದೇವಾಲಯವೊಂದು ಅಸ್ತಿತ್ವದಲ್ಲಿತ್ತೆಂದೂ, ಕಾಲಾಂತರದ ವಿದ್ಯಾಮಾನಗಳಿಂದಾಗಿ ಆ ದೇವಾಲಯ ಜೀರ್ಣಸ್ಥಿತಿಯಲ್ಲಿದೆ ಎಂದೂ ತಿಳಿಯಲಾಗುತ್ತಿದೆ. ಈ ಕಾರಣಕ್ಕಾಗಿ ಹಲವಾರು ಮಂದಿ ಇಲ್ಲಿಗೆ ಬಂದು ದೇವಾಲಯದ ಕುರುಹುಗಳಿದ್ದ ಸ್ಥಳಕ್ಕೆ ಪ್ರಾರ್ಥನೆ ಸಲ್ಲಿಸಿ ಹೋಗುತ್ತಿರುತ್ತಾರೆ. ಅಲ್ಲಲ್ಲಿ ಕೆತ್ತನೆ ಕಲ್ಲುಗಳು ಕಾಣಿಸಿಕೊಂಡಿರುವುದು ನಾಗರ ಹಾವಿನ ಸಂಚಾರ ಪದೇ ಪದೇ ಗೋಚರಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆಯಾದರೂ , ಇಲ್ಲಿ ಈ ಹಿಂದೆ ಇದೆ ಎನ್ನಲಾದ ದೇವಾಲಯದ ಬಗ್ಗೆ ಪ್ರಶ್ನಾ ಚಿಂತನೆಯನ್ನು ನಡೆಸಲು ಮತ್ತು ಆ ವೇಳೆ ದೊರಕುವ ನಿರ್ದೇಶನಗಳನ್ನು ಪಾಲಿಸಲು ನಾವು ಸಮರ್ಥರಾಗಿಲ್ಲ ಎಂದು ತಿಳಿಸುತ್ತಾರೆ.

ಇಂಥ ನಾಣ್ಯ ಮನೆಯಲ್ಲಿಟ್ಟರೆ ಹಣದ ಸಮಸ್ಯೆ ಇರೋದಿಲ್ಲ!

ಅದರ ಹೊರತಾಗಿಯೂ ಶಿಲಾಮಯ ದೇಗುಲವೊಂದು ಅಸ್ತಿತದಲ್ಲಿದ್ದು ಪ್ರಸಕ್ತ ಜೀರ್ಣ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ನಿಖರ ಕಾರಣವನ್ನು ಇತಿಹಾಸ ಅಧ್ಯಯನಕಾರರೂ ಇಲ್ಲಿ ಗಮನ ಹರಿಸಬಹುದಾಗಿದೆ. ಇತಿಹಾಸ ಅಧ್ಯಯನಕ್ಕೆ ಪೂರಕವಾಗಿ ಇಲ್ಲಿ ಬಹಳಷ್ಟುಶಿಲಾ ಕಲ್ಲುಗಳು ಲಭ್ಯವಿದೆ. ಸರ್ಕಾರವೂ ಇದರತ್ತ ಚಿತ್ತವಿರಿಸಿದರೆ ಕಾಲಗರ್ಭದಲ್ಲಿ ಹುದುಗಿಹೋಗಿರುವ ಹಲವಾರು ವಿಚಾರಗಳು ಬೆಳಕಿಗೆ ಬರಬಹುದಾಗಿದೆ.
 

Latest Videos
Follow Us:
Download App:
  • android
  • ios