ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಳ್ಳಿಯ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ ಹಾಗೂ ಶಿವನ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಸಚಿವ ಮುನಿರತ್ನ ಹಾಗೂ ಬಿಬಿಎಂಪಿಗೆ ಹೈಕೋರ್ಚ್‌ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರು (ಫೆ.21) : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಳ್ಳಿಯ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ ಹಾಗೂ ಶಿವನ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಸಚಿವ ಮುನಿರತ್ನ ಹಾಗೂ ಬಿಬಿಎಂಪಿಗೆ ಹೈಕೋರ್ಚ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ವಕೀಲೆ ಗೀತಾ ಮಿಶ್ರಾ(Advocate Geeta Mishra) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ನ್ಯಾಯಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಚಿವ ಮುನಿರತ್ನ(Minister Muniratna), ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ(Rajarajeshwari Nagar Assembly Constituency)ದ ಬಿಜೆಪಿ ಘಟಕದ ಅಧ್ಯಕ್ಷ ಗೋವಿಂದರಾಜು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ(BBMP) ಆಯುಕ್ತರು, ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಸಚಿವ ಮುನಿರತ್ನ ಉದ್ಧಟತನದ ಮಾತು ನಿಲ್ಲಿಸಲಿ: ಶಾಸಕ ಕೆ.ಶ್ರೀನಿವಾಸ ಗೌಡ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್‌ ವಾದಿಸಿದರು.

ಕೆರೆ ಅಂಗಳದಲ್ಲಿ ಕಾಮಗಾರಿ ನಡೆಸಲು ಸರ್ಕಾರ ಅಥವಾ ಯಾವುದೇ ಪ್ರಾಧಿಕಾರ ಕಾರ್ಯಾದೇಶ ನೀಡಿಲ್ಲ. ಅಲ್ಲದೆ, ಅಕ್ರಮ ಕಟ್ಟಡ ನಿರ್ಮಾಣದಿಂದ ಉಂಟಾಗುತ್ತಿರುವ ತ್ಯಾಜ್ಯದಿಂದ ಕೆರೆಗೆ ತುಂಬಲಾಗುತ್ತಿದೆ. ಇದರಿಂದ ಕೆರೆ ಪ್ರದೇಶವು ಕಡಿಮೆಯಾಗುತ್ತಿದೆ. ಹೈಕೋರ್ಚ್‌ ಆದೇಶದ ಅನ್ವಯ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆಯು (ನೀರಿ) ಮಲ್ಲತ್ತಹಳ್ಳಿ ಕೆರೆ ಸಮೀಕ್ಷೆ ನಡೆಸಿದೆ. ಕೆರೆ ವಿಸ್ತೀರ್ಣ 73 ಎಕರೆಯಷ್ಟಿತ್ತು. ಆದರೆ, ಅದರಲ್ಲಿ 4.7 ಎಕರೆ ಒತ್ತುವರಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನನ್ನ ವಿರುದ್ಧ ಡಿಕೆ ಬ್ರದರ್ಸ್‌ ಸ್ಪರ್ಧಿಸಲಿ: ಮುನಿರತ್ನ ಸವಾಲ್‌

‘ನನ್ನ ವಿರುದ್ದ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಹೋದ ಡಿ.ಕೆ.ಸುರೇಶ್‌ ಇಬ್ಬರೂ ಬಂದು ಸ್ಪರ್ಧಿಸಲಿ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಸವಾಲು ಎಸೆದಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರು ಯಾಕೇ ಅವರಿಬ್ಬರೂ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಈಗಾಗಲೇ ಹಿಂದೆ ಬಂದು ಎಷ್ಟುಅಂತರದಿಂದ ಸೋತಿದ್ದಾರೆ ಎಂಬುದು ಗೊತ್ತಿದೆಯಲ್ಲ. ಚುನಾವಣೆ ಸಂದರ್ಭ, ಏನೇನೋ ಕದ್ದ ಎಂಬ ಆರೋಪ ಮಾಡುತ್ತಿದ್ದಾರೆ. ಮೆಟ್ರೋ ಕದ್ದ ಎಂದೂ ಹೇಳುತ್ತಾರೆ. ಇದಕ್ಕೆಲ್ಲ ಯಾರು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಬ್ರಾಹ್ಮಣರು ಸಿಎಂ ಆಗಬಾರದೇ?: ಎಚ್‌ಡಿಕೆ ವಿರುದ್ಧ ಮುನಿರತ್ನ ಕಿಡಿ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವರಿಷ್ಠರು ಹೇಳಿದರೆ ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧ. ನನ್ನ ಪಕ್ಷ ಎಲ್ಲಿ ಹೋಗು ಅಂದರೂ ಅಲ್ಲಿ ಹೋಗಿ ಸ್ಪರ್ಧೆ ಮಾಡುತ್ತೇನೆ. ಪಕ್ಷ ದೊಡ್ಡದು. ಪಕ್ಷದ ಸೂಚನೆ ಪಾಲಿಸುತ್ತೇನೆ. ಕೋಲಾರಕ್ಕೆ ಹೋಗು ಅಂದರೆ ಅಲ್ಲಿಗೆ ಹೋಗುತ್ತೇನೆ. ಬೇರೆ ಕ್ಷೇತ್ರಕ್ಕೆ ಹೋಗು ಅಂದರೆ ಅಲ್ಲಿ ಹೋಗುತ್ತೇನೆ ಎಂದು ಹೇಳಿದರು.