Asianet Suvarna News Asianet Suvarna News

ಕೇವಲ 25 ಸಾವಿರದಿಂದ 6500 ಕೋಟಿ ರೂ.ಗಳ ಸಾಮ್ರಾಜ್ಯ ಕಟ್ಟಿದ ಕನ್ನಡಿಗ ಶಶಿ ಹಲವರಿಗೆ ಸ್ಪೂರ್ತಿ

ಆಲ್ಕಾರ್ಗೋ ಲಾಜಿಸ್ಟಿಕ್ಸ್‌ನ ಸಂಸ್ಥಾಪಕ ಶಶಿ ಕಿರಣ್ ಶೆಟ್ಟಿ, ಕೇವಲ 25,000 ರೂ. ಹೂಡಿಕೆಯಿಂದ ಯಶಸ್ವಿ ಕಂಪನಿಯನ್ನು ನಿರ್ಮಿಸಿದರು.  ಕರ್ನಾಟಕದ ಒಂದು ಸಣ್ಣ ಪಟ್ಟಣದಿಂದ ಜಾಗತಿಕ ಲಾಜಿಸ್ಟಿಕ್ಸ್ ಸಾಮ್ರಾಜ್ಯವನ್ನು ಮುನ್ನಡೆಸುವ ಅವರ ಪಯಣವು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸ್ಫೂರ್ತಿಯಾಗಿದೆ. 

Shashi Kiran Shetty Inspiring Journey founder of Allcargo Logistics Empire from Scratch gow
Author
First Published Aug 28, 2024, 8:41 PM IST | Last Updated Aug 28, 2024, 8:41 PM IST

ಬೆಂಗಳೂರು (ಆ.28): ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಣ್ಣ ಪಟ್ಟಣದವರಾದ ಶಶಿ ಕಿರಣ್ ಶೆಟ್ಟಿ ದೂರ ದೃಷ್ಟಿಯನ್ನು ಹೊಂದಿದ್ದರು. ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದರು. ಕುಟುಂಬದ ವ್ಯವಹಾರದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ನಂತರ, ಅವರು ಮುಂಬೈಗೆ ತೆರಳಿದರು ಮತ್ತು ಅಲ್ಲಿ ತಮ್ಮ ವೃತ್ತಿಜೀವನದ ಹಾದಿಯನ್ನು ಕಂಡುಕೊಂಡರು. ಕೇವಲ 25 ಸಾವಿರ ರೂ.ಗಳ ಆರಂಭಿಕ  ಬಂಡವಾಳ ಹೂಡಿಕೆ ಮಾಡಿ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದರು, ಅದು ಈಗ 6,500 ಕೋಟಿ ರೂ. ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಅದುವೆ ಆಲ್ಕಾರ್ಗೋ ಲಾಜಿಸ್ಟಿಕ್ಸ್‌ನ ಸಂಸ್ಥಾಪಕ ಶಶಿ ಶೆಟ್ಟಿ ಅವರ ಉದ್ಯಮ ಪಯಣವು ಅನೇಕ ಯುವಕರಿಗೆ ಸ್ಫೂರ್ತಿಯಾಗಿದೆ.

ಜಿಂದಾಲ್, ಅಂಬಾನಿ ಸೋಲಿಸಿ ಅದಾನಿ ಗೆಲುವು, 4100 ಕೋಟಿಗೆ ಈ ಕಂಪನಿ ಖರೀದಿ

ಹಡಗು ಕಂಪನಿಯಲ್ಲಿ ಕೆಲಸ ಆರಂಭ:
ಶಶಿ ಕಿರಣ್ ಶೆಟ್ಟಿ ತಮ್ಮ ತವರೂರು ಬಂಟ್ವಾಳದಲ್ಲಿ ಶಿಕ್ಷಣವನ್ನು ಪೂರೈಸಿದ್ದಾರೆ. ವೆಂಕಟರಮಣ ಸ್ವಾಮಿ ಕಾಲೇಜಿನಿಂದ ಪದವಿ ಮುಗಿಸಿದ್ದು. ಕುಟುಂಬದ ವ್ಯವಹಾರ ಮುಚ್ಚಿದಾಗ, ಅವರು 1978 ರಲ್ಲಿ ಉದ್ಯೋಗ ಅರಸಿ ಮುಂಬೈಗೆ ತೆರಳಿದರು. ಕೆಲಕಾಲ ಉದ್ಯೋಗ ಹುಡುಕಿದ ನಂತರ, ಅವರು ಒಂದು ಸಣ್ಣ ಹಡಗು ಕಂಪನಿಯಲ್ಲಿ ಕೆಲಸ ಪಡೆದರು, ಅದು ಅವರ ವೃತ್ತಿಜೀವನಕ್ಕೆ ಆರಂಭಿಕ ಬುನಾದಿಯಾಯ್ತು. ನಂತರ, ಅವರು ಟಾಟಾಸ್ ಫೋರ್ಬ್ಸ್ ಗೋಕಾಕ್‌ಗೆ ಸೇರಿದರು, ಅಲ್ಲಿ ಅವರು ಹಡಗು ಉದ್ಯೋಗದ ಪ್ರಮುಖ ವ್ಯಕ್ತಿಗಳೊಂದಿಗೆ ಸಂವಹನ ನಡೆಸಿದರು ಮತ್ತು ವ್ಯವಹಾರದ ಬಗ್ಗೆ ಆಳವಾದ ಜ್ಞಾನ ಪಡೆದರು.

ವ್ಯಾಪಾರ ಆರಂಭ
ಶಶಿ ಶೆಟ್ಟಿ ಟಾಟಾದಲ್ಲಿ ನಾಲ್ಕು ವರ್ಷಗಳ ಕಾಲ ಕೆಲ ಮಾಡಿದರು. ಆಗ ದುಡಿದ ಸಂಬಳದಿಂದ  25,000 ರೂ. ಉಳಿಸಿ ಅದೇ ಮೊತ್ತದಲ್ಲಿ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಹೀಗಾಗಿ ಕೆಲಸ ಬಿಟ್ಟು ಮುಂಬೈನ ಡಿ'ಮೆಲ್ಲೋ ರಸ್ತೆಯಲ್ಲಿರುವ ವ್ಯಾಪಾರ್ ಭವನದಲ್ಲಿ ಕಚೇರಿಯನ್ನು ಸ್ಥಾಪಿಸಿದರು. ಆಗ ಅವರಿಗೆ ಕೇವಲ 25 ನೇ ವಯಸ್ಸು, ಕೇವಲ ನಾಲ್ಕು ಉದ್ಯೋಗಿಗಳೊಂದಿಗೆ ಟ್ರಾನ್ಸ್ ಇಂಡಿಯಾ ಫ್ರೈಟ್ ಸರ್ವೀಸಸ್ ಎಂಬ ಕಂಪೆನಿ ಪ್ರಾರಂಭಿಸಿದರು.

ಬ್ಲೂಮ್‌ಬರ್ಗ್ ವರದಿ: ಏಷ್ಯಾದ ಶ್ರೀಮಂತ ಎಂಬ ಅಂಬಾನಿ ಸ್ಥಾನ ಡೇಂಜರ್‌ ನಲ್ಲಿದೆ, ಆರ್ಥಿಕ ಕುಸಿತದತ್ತ ಮುಕೇಶ್!

ವ್ಯಾಪಾರ ಯಶಸ್ಸು
ಆ ಕಾಲದಲ್ಲಿ ಸೀಮಿತ ಸಂಪನ್ಮೂಲಗಳೊಂದಿಗೆ ವ್ಯಾಪಾರವನ್ನು ಪ್ರಾರಂಭಿಸುವುದು ಸವಾಲಿನ ಕೆಲಸವಾಗಿತ್ತು. ಶಶಿ ಶೆಟ್ಟಿ ಸಾರಿಗೆದಾರರಿಂದ ಟ್ರಕ್ ಅನ್ನು ಬಾಡಿಗೆಗೆ ಪಡೆದು ಈ ಬಾಡಿಗೆ ವಾಹನಗಳನ್ನು ಬಳಸಿಕೊಂಡು ಹಡಗುಗಳಿಗೆ ಸರಕುಗಳನ್ನು ತಲುಪಿಸಲು ಪ್ರಾರಂಭಿಸಿದರು. ಕಾಲಾನಂತರದಲ್ಲಿ, ವ್ಯವಹಾರವು ವಿಸ್ತರಿಸಿತು ಮತ್ತು 1994 ರಲ್ಲಿ, ಅವರ ಸಂಸ್ಥೆಯು ಆಲ್ಕಾರ್ಗೋ ಲಾಜಿಸ್ಟಿಕ್ಸ್ ಬದಲಾಗಿ ಅಭಿವೃದ್ಧಿಯಾಯ್ತು. ಇಂದು, ಇವರ ಕಂಪನಿಯಲ್ಲಿ 4,000 ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ ಮತ್ತು 180 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ, 530ಕ್ಕೂ ಹೆಚ್ಚು ಸ್ಥಳಗಳಲ್ಲಿ ಸೇವೆಗಳನ್ನು ನೀಡುತ್ತದೆ. ಶಶಿ ಕಿರಣ್ ಶೆಟ್ಟಿ ECU ವರ್ಲ್ಡ್‌ವೈಡ್ ಮತ್ತು ಗತಿ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದಾರೆ.

ಸಾಧನೆಗಳು
ಅಪಾರ ಅನುಭವದೊಂದಿಗೆ, ಶಶಿ ಕಿರಣ್ ಶೆಟ್ಟಿ ಆಲ್ಕಾರ್ಗೋವನ್ನು ಎತ್ತರಕ್ಕೆ ಕೊಂಡೊಯ್ದರು, 2003 ರಲ್ಲಿ ಕಂಟೇನರ್ ಸರಕು ನಿಲ್ದಾಣಗಳು, 2016 ರಲ್ಲಿ ಗುತ್ತಿಗೆ ಲಾಜಿಸ್ಟಿಕ್ಸ್ ಮತ್ತು 2018 ರಲ್ಲಿ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ಪ್ರವೇಶಿಸಿದರು. ಅವರು 2005 ರಲ್ಲಿ ECU-ಲೈನ್ (ಈಗ ECU ವರ್ಲ್ಡ್‌ವೈಡ್) ಅನ್ನು ಸ್ವಾಧೀನಪಡಿಸಿಕೊಂಡರು. NITIE ಯಿಂದ IIM ಮುಂಬೈಗೆ ಪರಿವರ್ತನೆಯ ನಂತರ, ಶಶಿ ಶೆಟ್ಟಿ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2023 ರಲ್ಲಿ, ಅವರಿಗೆ ಕರ್ನಾಟಕದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯ್ತು. 

Latest Videos
Follow Us:
Download App:
  • android
  • ios