Asianet Suvarna News Asianet Suvarna News

ಎಂಬಿಪಾ, ಜಾಮದಾರ್‌ ವಿರುದ್ಧ ಶಾಮನೂರು ಕಿಡಿ

  • ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಮತ್ತು ಎಸ್‌.ಎಂ.ಜಾಮ್‌ದಾರ್
  • ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ
shamanuru shivashankrappa  unhappy over MB patil on lingayat issue snr
Author
Bengaluru, First Published Sep 5, 2021, 12:22 PM IST

ದಾವಣಗೆರೆ (ಸೆ.05): ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಮತ್ತು ಎಸ್‌.ಎಂ.ಜಾಮ್‌ದಾರ್  ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಲಿಂಗಾಯತರಲ್ಲಿ ಉಪಜಾತಿ ಯಾವುದೂ ಇಲ್ಲ. ಸಾದರ ಲಿಂಗಾಯತ, ಪಂಚಾಚಾರ್ಯರು, ಬಣಜಿಗರು ಎಲ್ಲರನ್ನೂ ವೀರಶೈವರು ಅಂತಲೇ ಪರಿಗಣಿಸುತ್ತೇವೆ. ಪ್ರತ್ಯೇಕ ಧರ್ಮ ಅಂತೆಲ್ಲ ಹೋರಾಟ ಮಾಡುವವರು ಮಾಡಲಿ, ಮತ್ತೆ ಅಂತಹವರು ತಣ್ಣಗಾಗುತ್ತಾರೆ ಎಂದಿದ್ದಾರೆ.

ವೀರಶೈವ ಮತ್ತು ಲಿಂಗಾಯತರನ್ನು ಒಟ್ಟಿಗೆ ಕರೆದುಕೊಂಡುಹೋಗುತ್ತೇನೆ ಎಂಬ ಎಂ.ಬಿ.ಪಾಟೀಲ್‌ ಬಗ್ಗೆ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಅವನೇನು ಒಟ್ಟಿಗೆ ಕರೆದುಕೊಂಡು ಹೋಗುತ್ತಾನೆ. ಅವನ ಹಣೆಬರಹ. ಅವನು ಏನೇ ಹೇಳಿಕೆ ಕೊಡಲಿ, ನಮ್ಮ ನಿಲುವು ಮಾತ್ರ ಒಂದೇ ಎಂದರು ಎಂದು ಏಕವಚನದಲ್ಲೇ ಹರಿಹಾಯ್ದರು.

ಪಂಚಮಸಾಲಿ 3 ನೇ ಪೀಠ ಸ್ಥಾಪನೆಗೆ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ಹೀಗೆ

ಇದೇವೇಳೆ ವೀರಶೈವ ಲಿಂಗಾಯತ ಒಂದೇ ಎಂಬ ಸಚಿವ ಮುರುಗೇಶ ನಿರಾಣಿ ಹೇಳಿಕೆ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಅವರು ಲಿಂಗಾಯತ ನಾಯಕ ಆಗೋಕೆ ಹೊರಟಿರುವ ಎಂ.ಬಿ.ಪಾಟೀಲ ಮೊದಲು ತನ್ನ ಊರಿನಲ್ಲಿ ಗೆಲ್ಲಲಿ ಎಂದು ಸವಾಲು ಹಾಕಿದರು.

Follow Us:
Download App:
  • android
  • ios