Asianet Suvarna News Asianet Suvarna News

Breaking: ಶಾಸಕ ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಏರುಪೇರು

ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಶಾಸಕ ಶಾಮನೂತು ಶಿವಶಂಕರಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
 

shamanur shivashankarappa Health Condition Deteriorated admitted to hospital san
Author
First Published May 31, 2024, 4:52 PM IST

ದಾವಣಗೆರೆ (ಮೇ.31): ಹಿರಿಯ ಲಿಂಗಾಯತ ನಾಯಕ ಹಾಗೂ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯದಲ್ಲಿ ಶುಕ್ರವಾರ ಏರುಪೇರಾಗಿದೆ. ತಕ್ಷಣವೇ ಅವರನ್ನು ದಾವಣಗೆರೆಯ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಕಫದ ಸಮಸ್ಯೆಯಿಂದ ಅಸ್ವಸ್ಥರಾಗಿ ಶಾಮನೂರು ಅಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿದೆ. 94 ವರ್ಷದ ಶಾಮನೂರು ಶಿವಶಂಕರಪ್ಪ, ಹಾಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗೊದ್ದಾರೆ. ಚಿಕಿತ್ಸೆ ನಂತರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದ ವೈದ್ಯರು ತಿಳಿಸಿದ್ದಾರೆ. ಉಸಿರಾಟಕ್ಕೆ ಸಣ್ಣದಾಗಿ ಸಮಸ್ಯೆಯಾದ ಶಾಮನೂರು ಶಿವಶಂಕರಪ್ಪನವರಿಗೆ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾತ್ರಿಯ ವೇಳೆಗೆ ಮುಂಜಾಗ್ರತೆಗಾಗಿ ಬೆಂಗಳೂರಿನಲ್ಲಿ ಕಿರಿಯ ಅಳಿಯ ಡಾ.ಶರಣು ಪಾಟೀಲರ ಸ್ಪರ್ಶ ಆಸ್ಪತ್ರೆಗೆ ವೈದ್ಯರ ಸಮೇತ ಕಳಿಸಲಾಗಿದೆ. ಯಾವುದೇ ಅಪಾಯ, ಗಂಭೀರ ಸಮಸ್ಯೆ ಅಲ್ಲವೆಂದು ವೈದ್ಯರು, ಕುಟುಂಬ ಹೇಳಿಕೆ ನೀಡಿದೆ.

Latest Videos
Follow Us:
Download App:
  • android
  • ios