ಶಕ್ತಿಯೋಜನೆ ಎಫೆಕ್ಟ್: ಸೀಟು ಬಿಡುವಂತೆ ವೃದ್ಧನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದೆ. ಶಕ್ತಿಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಇದೀಗ ಮತ್ತೊಂದು ಅವಾಂತರ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ (ಅ.13) : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದೆ. ಶಕ್ತಿಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಇದೀಗ ಮತ್ತೊಂದು ಅವಾಂತರ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಬಸ್‌ನಲ್ಲಿ ಆಸನಕ್ಕಾಗಿ ವಯೋವೃದ್ಧನ ಮೇಲೆ ಮಹಿಳೆಯರು ಮನಸೋ ಇಚ್ಛೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. ಯಾದಗಿರಿಯಿಂದ ಸೇಡಂ ಗೆ ಹೊರಟ್ಟಿದ್ದ ಬಸ್ ನಲ್ಲಿ ನಡೆದಿರುವ ದುರ್ಘಟನೆ. ಬಸ್‌ನಲ್ಲಿ ಕುಳಿತಿದ್ದ ವೃದ್ಧ. ಈ ವೇಳೆ ಬಸ್ ಹತ್ತಿದ್ದ ನಾಲ್ವರು ಮಹಿಳೆಯರು. ಸೀಟು ಬಿಡುವಂತೆ ಹೇಳಿದ್ದಾರೆ. ಆದರೆ ಮುಂದಿನ ಸೀಟು ಖಾಲಿ ಇವೆ ಅಲ್ಲಿ ಕುಳಿತುಕೊಳ್ಳಿ ಎಂದಿರುವ ವೃದ್ಧ. ಅಷ್ಟಕ್ಕೆ ನಾಲ್ವರು ಮಹಿಳೆಯರು ವಯೋವೃದ್ಧನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಮನೆ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ವ್ಯಕ್ತಿ!
ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಸಹಪ್ರಯಾಣಿಕರು. ಸ್ಥಳಕ್ಕೆ ಬಂದ ಪೊಲೀಸರು ವೃದ್ಧನ ಮೇಲೆ ಹಲ್ಲೆ ನಡೆಸಿದ ಮಹಿಳೆಯರು ವಶಕ್ಕೆ ಪಡೆದು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.