ನಿವೃತ್ತ ಪಿಎಸ್‌ಐ ಅಬ್ದುಲ್‌ ನಫೀಜ್‌ ಬಂಧಿತನಾಗಿದ್ದು, ಮನೆಯ ಬಾಡಿಗೆದಾರರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಸಂತ್ರಸ್ತೆ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. 

ಬೆಂಗಳೂರು(ಆ.16): ತಮ್ಮ ಬಾಡಿಗೆದಾರರ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ 74 ವರ್ಷದ ನಿವೃತ್ತ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ವೊಬ್ಬರನ್ನು ಬೆಂಗಳೂರಿನ ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿವೃತ್ತ ಪಿಎಸ್‌ಐ ಅಬ್ದುಲ್‌ ನಫೀಜ್‌ ಬಂಧಿತನಾಗಿದ್ದು, ಮನೆಯ ಬಾಡಿಗೆದಾರರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಸಂತ್ರಸ್ತೆ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೇಡವೆಂದು ಬೇಡಿಕೊಂಡರೂ ಬಿಡದೇ ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿದ ತಾಯಿ, ತಾನೂ ಹಾರಿ ಸಾವು

14 ವರ್ಷಗಳ ಹಿಂದೆ ಪಿಎಸ್‌ಐ ಹುದ್ದೆಯಿಂದ ನಿವೃತ್ತರಾದ ಬಳಿಕ ಅಬ್ದುಲ್‌, ಶಿವಾಜಿನಗರ ಸಮೀಪ ತನ್ನ ಕುಟುಂಬದ ಜತೆ ನೆಲೆಸಿದ್ದ. ಹಲವು ದಿನಗಳಿಂದ ನಿವೃತ್ತ ಪಿಎಸ್‌ಐ ಮನೆಯಲ್ಲಿ ಸಂತ್ರಸ್ತೆ ಕುಟುಂಬ ಬಾಡಿಗೆಗೆ ಇತ್ತು. ಹೀಗಾಗಿ ಮನೆ ಮಾಲಿಕರಿಗೆ ಆಕೆಯ ಕುಟುಂಬದವರ ನಡುವೆ ಸಲುಗೆ ಬೆಳೆದಿದೆ. ಈ ಆಪ್ತತೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಬೆದರಿಸಿ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ್ದಾನೆ. ಈ ದೌರ್ಜನ್ಯದ ಬಗ್ಗೆ ತನ್ನ ಪೋಷಕರಿಗೆ ಹೇಳಿ ಬಾಲಕಿ ಕಣ್ಣೀರಿಟ್ಟಿದ್ದಳು. ಕೊನೆಗೆ ಆರೋಪಿ ವಿರುದ್ಧ ಪೊಲೀಸರಿಗೆ ಬಾಲಕಿ ಪೋಷಕರು ದೂರು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.