ಬೆಂಗಳೂರು(ಮಾ.14): ರಮೇಶ್ ಜಾರಕಿಹೊಳಿ ಸಿಡಿ ರಾಸಲೀಲೆ ಸಿಡಿ ಪ್ರಕರಣ ದಿನೇ ದಿನೇ ಹೊಸ ಟ್ವಿಸ್ಟ್ ಪಡೆಯುತ್ತಿದೆ. ರಾಸಲೀಲೆ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದಾಗಿನಿಂದ ನಾಪತ್ತೆಯಾಗಿದ್ದ ಯುವತಿ ನಿನ್ನೆ, ಶನಿವಾರವಷ್ಟೇ ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದರು. ಅಲ್ಲದೇ ಖುದ್ದು ರಮೇಶ್ ಜಾರಕಿಹೊಳಿಯೇ ಈ ವಿಡಿಯೋವನ್ನು ಹರಿಬಿಟ್ಟಿದ್ದಾರೆಂದೂ ಆರೋಪಿಸಿದ್ದರು. ಹೀಗಿರುವಾಗಲೇ ಅತ್ತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡಾ ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಯತ್ನ ನಡೆಸುತ್ತಿದ್ದಾರೆಂದು ಕಿಡಿ ಕಾರಿದ್ದರು. 

ಸದ್ಯ ರಮೇಶ್ ಜಾರಕಿಹೊಳಿಯವರ ಸದಾಶಿವನಗರದಲ್ಲಿ ಸಿಡಿ ಷಡ್ಯಂತ್ರ ಆರೋಪಕ್ಕೆ ಡಿಕೆಶಿ ಟಾಂಗ್​ ನೀಡಿದ್ದಾರೆ. ರಮೇಶ್​ ಜಾರಕಿಹೊಳಿ ಆರೋಪ ತಳ್ಳಿ ಹಾಕಿದ ಕೆಪಿಸಿಸಿ ಅಧ್ಯಕ್ಷ ರಮೇಶ್ ಜಾರಕಿಹೊಳಿ ‘ಆಫ್​ ದಿ ರೆಕಾರ್ಡ್​, ಆನ್​ ದಿ ರೆಕಾರ್ಡ್​ ಒಂದೊಂದು ಹೇಳ್ತಾರೆ. ವಿಚಾರಣೆ ನಡೆಯುವ ವೇಳೆ ನಾವು ಜಾಸ್ತಿ ಮಾತನಾಡೋಕೆ ಆಗಲ್ಲ. ಯುವತಿಗೆ ರಕ್ಷಣೆ ನೀಡೋದಕ್ಕೆ ಮಹಿಳಾ ಆಯೋಗ ಇದೆ' ಎಂದಿದ್ದಾರೆ.

ಅಲ್ಲದೇ ಬಿಜೆಪಿಯವರೇ ಸಿಡಿ ಪ್ರಕರಣದ ಬಗ್ಗೆ ಏನೇನೋ ಹೇಳಿದ್ದಾರೆ. ಅವರ ಪಕ್ಷದವರ ಹೇಳಿಕೆ ಬಗ್ಗೆ ಮಾತ್ರ ಯಾಕೆ FIR ಆಗ್ತಿಲ್ಲ?. ಯತ್ನಾಳ್, ವಿಶ್ವನಾಥ್​ ಹೇಳಿಕೆ ಬಗ್ಗೆ ಯಾಕೆ ಯಾರು ಮಾತಾಡ್ತಿಲ್ಲ. ಅವರ ಮಂತ್ರಿಗಳೇ ಸಿಡಿ ಗುಮ್ಮ ಎಂದರೂ ಯಾಕೆ ವಿಚಾರಿಸ್ತಿಲ್ಲ. ಅದು ನಾನೇ ಅಲ್ಲ ನಕಲಿ ಅಂತಾ ಗೌರವಾನ್ವಿತ ಮಂತ್ರಿ ಹೇಳ್ತಾರೆ. ನಕಲಿ ಆದರೆ ಅದರ ಬಗ್ಗೆ ಅವರೇ ಬಾಯಿ ಬಿಡಲಿ ಎಂದು ಡಿಕೆಶಿ ಚಾಲೆಂಜ್ ಹಾಕಿದ್ದಾರೆ.