:ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್ ಡೌನ್ ಆಗಿರುವ ಹಿನ್ನೆಲೆ ಇಂದು ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು (ಜು.23) :ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್ ಡೌನ್ ಆಗಿರುವ ಹಿನ್ನೆಲೆ ಇಂದು ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಕೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸರ್ವರ್ ಡೌನ್ ಹಿನ್ನಲೆ ಇಂದು ಎಲ್ಲಾ ಬೆಂಗಳೂರು ಒನ್, ಗ್ರಾಮ ಒನ್ ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿ ಮೂರು ದಿನಗಳಾಗಿವೆ. ಈಗಾಗಲೇ 3 ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ. ಗೃಹಲಕ್ಷ್ಮೀ ಜಾರಿಯಾದ ಮೊದಲ ದಿನ 77 ಸಾವಿರ ಮನೆ ಯಜಮಾನಿಯರಿಂದ ಅರ್ಜಿ ಸಲ್ಲಿಕೆಯಾಗಿತ್ತು. ಇಂದು ಸರ್ವರ್ ಡೌನ್ ಹಿನ್ನೆಲೆ ತಾತ್ಕಾಲಿಕವಾಗಿ ಒಂದು ದಿನ ಅರ್ಜಿ ಸಲ್ಲಿಕೆ ಸ್ಥಗಿತಗೊಳಿಸಲಾಗಿದೆ. ನಾಳೆಯಿಂದ ಎಂದಿನಂತೆ ಪುನಃ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Congress guarantee: ಗೃಹಜ್ಯೋತಿಗೆ ನೀರಸ ಪ್ರತಿಕ್ರಿಯೆ; 1 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಸಿಲ್ಲ!

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯಾದ್ಯಂತ ಗ್ರಾಮ ಒನ್ ಕೇಂದ್ರಗಳ ಮುಂದೆ ಮಳೆ ಲೆಕ್ಕಿಸದೇ ಸರತಿಸಾಲಿನಲ್ಲಿ ನಿಂತು ಕಾಯುತ್ತಿರುವ ಮಹಿಳೆಯರು. ಕೈಯಲ್ಲಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಹಿಡಿದು ನಿಂತು ಸುಸ್ತಾಗಿರುವ ಮನೆ ಯಾಜಮಾನಿಯರು. ಹೊರಗಡೆ ಮಳೆ, ಒಳಗಡೆ ಸರ್ವರ್ ಸಮಸ್ಯೆ, ತಾಂತ್ರಿಕದೋಷಗಳಿಂದ ಮನೆಯ ಯಾಜಮಾನಿಯರು ಬೇಸತ್ತು ಹೋಗಿದ್ದಾರೆ. ಸರ್ವರ್‌ ಡೌನ್‌ ಆಗಿರುವುದರಿಂದ ಅರ್ಜಿ ಪಡೆಯಲು ಆಗುತ್ತಿಲ್ಲ. 'ನಾಳೆ ಬನ್ನಿ' ಎಂದು ಮಹಿಳೆಯರನ್ನು ಸಿಬ್ಬಂದಿ ವಾಪಸ್‌ ಕಳುಹಿಸುತ್ತಿದ್ದಾರೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಮನೆಗೆ ತೆರಳುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.

ಗೃಹಜ್ಯೋತಿ ಯೋಜನೆ: ಒಂದು ಬಲ್ಬ್ ಇರುವ ಮನೆಗಳಿಗೆ 23 ಸಾವಿರ ರೂ. ವಿದ್ಯುತ್ ಬಿಲ್‌