ಬೆಂಗಳೂರು(ಜು.09): ಕೊರೋನಾ ಸೋಂಕು ದೃಢಪಟ್ಟ ಗರ್ಭಿಣಿಯರಿಗೆ ಹಾಗೂ ಸೋಂಕಿನ ಶಂಕಿತ ಗರ್ಭಿಣಿಯರಿಗೆ ಚಿಕಿತ್ಸೆಗೆ 24 ಹಾಸಿಗೆ ಇರುವ ವಿಲ್ಸನ್‌ ಗಾರ್ಡನ್‌ ಬಿಬಿಎಂಪಿ ಆಸ್ಪತ್ರೆಯನ್ನು ನಿಗದಿ ಪಡಿಸಿ ಬಿಬಿಎಂಪಿ ಆದೇಶಿಸಿದೆ.

"

ನಗರದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಗರ್ಭಿಣಿಯರು ತಪಾಸಣೆ ಮತ್ತು ಹೆರಿಗೆಗೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾಕಷ್ಟುದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಆಸ್ಪತ್ರೆಗೆ ನಿಗದಿ ಪಡಿಸಿ ಬಿಬಿಎಂಪಿ ಆರೋಗ್ಯ ವಿಭಾಗದ (ಕ್ಲಿನಿಕಲ್‌) ಮುಖ್ಯ ಆರೋಗ್ಯಾಧಿಕಾರಿ ನಿರ್ಮಾಲಾ ಬುಗ್ಗಿ ಆದೇಶಿಸಿದ್ದಾರೆ.

ಕೊರೋನಾ ಆರ್ಭಟ: ಹೋಟೆಲ್ ಬಂದ್‌ ಮಾಡಲು ನಿರ್ಧಾರ

ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗದೇ ಆಸ್ಪತ್ರೆಗೆ ದಾಖಲಾದ ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆ ಸೀಲ್‌ಡೌನ್‌ ಮಾಡಬೇಕಾದ ಪ್ರಸಂಗ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹೆರಿಗೆಯ 15 ದಿನ ಮುನ್ನವೇ ಗರ್ಭಿಣಿಯರಿಗೆ ಕೊರೋನಾ ಸೋಂಕು ಪರೀಕ್ಷೆ ಮಾಡಿಸುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆರಿಗೆಗೆ 15 ದಿನ ಇರುವ ಗರ್ಭಿಣಿಯರನ್ನು ಸೋಂಕು ಪರೀಕ್ಷೆ ಮಾಡಿಸಲಾಗುತ್ತಿದೆ. ಕೆಲವರಿಗೆ ಈ ವೇಳೆ ಸೋಂಕು ಇರುವುದೂ ಸಹ ಪತ್ತೆಯಾಗಿದೆ. ಹೀಗಾಗಿ ಬಿಬಿಎಂಪಿ ಕೊರೋನಾ ಸೋಂಕಿತ ಮತ್ತು ಶಂಕಿತ ಗರ್ಭಿಣೆಯ ತಪಾಸಣೆಗೆ ಮತ್ತು ಹೆರಿಗೆಗೆ ವಿಲ್ಸನ್‌ ಗಾರ್ಡನ್‌ ಬಿಬಿಎಂಪಿ ಆಸ್ಪತ್ರೆಯನ್ನು ನಿಗದಿ ಪಡಿಸಿದೆ. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗ ಸಹ ಒಳಗೊಂಡಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ನಿರ್ಮಾಲಾ ಬುಗ್ಗಿ ತಿಳಿಸಿದ್ದಾರೆ.