Asianet Suvarna News Asianet Suvarna News

ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಅವರು  ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

senior congress leader Siddaramaiah meet former Prime Minister  HD Deve Gowda gow
Author
First Published Sep 19, 2022, 9:26 PM IST

ಬೆಂಗಳೂರು (ಸೆ.19): ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಅವರು  ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.  ವಿಧಾನಸಭೆ ಕಲಾಪ ಮುಗಿದ ಬಳಿಕ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಅವರು ಭೇಟಿ ಮಾತುಕತೆ ನಡೆಸಿದರು.‌ ಈ ವೇಳೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಜೊತೆಗಿದ್ದರು.  ರಾಜಕೀಯವಾಗಿ ದೇವೇಗೌಡರ ಶಿಷ್ಯರಾಗಿದ್ದ ಸಿದ್ದರಾಮಯ್ಯ ಅವರು ಮುನಿಸಿಕೊಂಡು ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್ ‌ಸೇರ್ಪಡೆಯಾದರು. ಬಳಿಕ ಅವರು ಮುಖ್ಯಮಂತ್ರಿ ಆದ ನಂತರದಲ್ಲಿ 2016 ಸೆಪ್ಟೆಂಬರ್ 21 ರಂದು ಎಚ್.ಡಿ.ದೇವೇಗೌಡ ಅವರನ್ನು ಮೊದಲು ಭೇಟಿ ಮಾಡಿದ್ದರು. ದೇವೆಗೌಡರ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ. ನಮಸ್ಕಾರ ಅಂದೆ. ಅವರು ನಮಸ್ಕಾರ ಅಂದ್ರು. ಕಾಲು ನೋವು ಅಂತ ಹೇಳಿದ್ರು. ಆರೋಗ್ಯ ವಿಚಾರಿಸೋಕೆ ಬಂದಿದ್ದೆ. ರಾಜಕೀಯ ಬೇರೆ, ಮನುಷ್ಯತ್ವ ಮುಖ್ಯ, ದೇವೆಗೌಡರು ದೇಶ ಕಂಡ ಹಿರಿಯ ರಾಜಕಾರಣಿ. ಲಾಸ್ಟ್ ಟೈಮ್ ಕಾವೇರಿ ವಿಚಾರಕ್ಕೆ ಭೇಟಿ ಮಾಡಿದ್ದೆ. ದೇವೆಗೌಡರಿಗೆ ಕಾಲು ನೋವು ವಾಕರ್ ಹಿಡಿದು ಓಡಾಡುತ್ತಾರೆ. ಅವರ ಸ್ಮರಣ ಶಕ್ತಿ ಚೆನ್ನಾಗಿ ಇದೆ‌ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಹಿರಿಯರಾದ ಮಾಜಿ ಪ್ರಧಾನಿ ದೇವೇ ಗೌಡರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ.
ಬಹಳ ದಿನಗಳ ನಂತರ ದೇವೇಗೌಡರನ್ನು ಭೇಟಿಯಾದದ್ದು ಸಂತೋಷವಾಯಿತು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 

 

ದೇವೇಗೌಡರ ಮನೆಗೆ ಭೇಟಿ ನೀಡಿದ್ದ ಸಚಿವ ಅಶೋಕ್‌: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಕಂದಾಯ ಸಚಿವ ಆರ್‌.ಅಶೋಕ್‌ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸುವುದರ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು.

ಸೆ.17ರಂದು ಪದ್ಮನಾಭನಗರದ ನಿವಾಸಕ್ಕೆ ತೆರಳಿದ ಆರ್‌.ಅಶೋಕ್‌ ಅವರಿಗೆ ದೇವೇಗೌಡ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ದೇವೇಗೌಡ ಅವರ ಆರೋಗ್ಯದ ಕುರಿತು ಅಶೋಕ್‌ ವಿಚಾರಿಸಿದರು. ಈ ವೇಳೆ ಕೆಲ ಹೊತ್ತು ರಾಜಕೀಯ ವಿದ್ಯಮಾನ ಬಗ್ಗೆ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅಖಾಡದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ, ದೇವೇಗೌಡ ದಾಳ ಉರುಳಿಸಿದ್ದ ಸಿದ್ದುಗೆ ದಳಪತಿ ಶಾಕ್!

ಕೆಲವು ದಿನಗಳ ಹಿಂದೆ ದೇವೇಗೌಡ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರೇ ವಿಚಾರಿಸಿ ಟ್ವೀಟ್‌ ಮಾಡಿದ್ದರು. ನಾವು ದೇವೇಗೌಡ ಅವರ ಬಗ್ಗೆ ಕಾಳಜಿ ವಹಿಸದಿದ್ದರೆ ತಪ್ಪಾಗುತ್ತದೆ. ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬನ್ನಿ ಎಂದು ಅಶೋಕ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಅಶೋಕ್‌ ಅವರು ಹೋಗಿದ್ದರು. ದೇವೇಗೌಡ ಅವರ ಮನೆಯಿಂದಲೇ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಅಶೋಕ್‌ ನೀಡಿದರು. ದೂರವಾಣಿ ಮೂಲಕವೇ ದೇವೇಗೌಡರ ಜತೆ ಮುಖ್ಯಮಂತ್ರಿಯವರು ಮಾತನಾಡಿದರು.

ಮನಸ್ತಾಪ ಏಕಾಯ್ತು ಎಂಬ ಬಗ್ಗೆ ದೇವೇಗೌಡರೊಂದಿಗೆ ಚರ್ಚೆ: ಜಿಟಿಡಿ

ಇದೇ ವೇಳೆ ಪದ್ಮನಾಭನಗರದಲ್ಲಿನ ದೇವಗಿರಿ ಶ್ರೀನಿವಾಸ ದೇವಾಲಯದ ಅಭಿವೃದ್ಧಿ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ದೇವೇಗೌಡ ಅವರು ತಿಳಿಸಿದರು. ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಅಶೋಕ್‌ ಆಶ್ವಾಸನೆ ನೀಡಿದರು ಎನ್ನಲಾಗಿದೆ.

 

Follow Us:
Download App:
  • android
  • ios