ಮಾಜಿ ವಸತಿ ಸಚಿವ ಅಂಜನಮೂರ್ತಿ  ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅಂಜನಮೂರ್ತಿ ಅವರು ಇಂದು ಬೆಳಗಿನ ಜಾವ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಬೆಂಗಳೂರು: ಮಾಜಿ ವಸತಿ ಸಚಿವ ಅಂಜನಮೂರ್ತಿ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅಂಜನಮೂರ್ತಿ ಅವರು ಇಂದು ಬೆಳಗಿನ ಜಾವ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಜಿ ಸಚಿವ ಅಂಜನಮೂರ್ತಿ ಇಹಲೋಕ ತ್ಯಜಿಸಿದ್ದಾರೆ. ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿ ನಂತರ ಸಚಿವರೂ ಆಗಿದ್ದ ಅಂಜನಮೂರ್ತಿ ಉಪ ಸಭಾಪತಿಯೂ ಆಗಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರಿನ ನೆಲಮಂಗಲದಲ್ಲಿರುವ ಇಂದಿರಾನಗರದಲ್ಲಿ ಅವರು ನೆಲೆಸಿದ್ದರು.

ಧ್ರುವನಾರಾಯಣ ನಿಧನ, ನಂಜನಗೂಡು ಟಿಕೆಟ್​ ಪುತ್ರನಿಗೆ ನೀಡುವಂತೆ ಒತ್ತಾಯ..!

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನದ ಬೆನ್ನೆಲ್ಲೇ ಧ್ರುವನಾರಾಯಣ್ ಪುತ್ರ ದರ್ಶನ್​ಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ನಂಜನಗೂಡಲ್ಲಿ ಧ್ರುವನಾರಾಯಣ್‌ ಬೆಂಬಲಿಗರು ಹೋರಾಟ ನಡೆಸಿದ್ದರು. ವರಿಷ್ಟರ ಮೇಲೆ ಮತ್ತಷ್ಟು ಒತ್ತಡ ಹೇರುವ ತಂತ್ರ ಹೂಡಿರುವ ಮೂಲ ಕಾಂಗ್ರೆಸಿಗರು, ದರ್ಶನ್‌ ಬೆಂಬಲಕ್ಕೆ ನಿಂತಿದ್ದಾರೆ. ಧ್ರುವ ಕುಟುಂಬಕ್ಕೆ ಅನ್ಯಾಯ ಮಾಡಲ್ಲ ಎಂದಿದ್ದಾರೆ ಡಿ.ಕೆ ಶಿವಕುಮಾರ್‌. ಹಾಗೆ ದರ್ಶನ್‌ಗೆ ಕರೆಮಾಡಿ ಬಯೋಡೇಟಾವನ್ನು ಮಲ್ಲಿಕಾರ್ಜುನ ಖರ್ಗೆ ಪಡೆದಿದ್ದಾರೆ.

ಧ್ರುವನಾರಾಯಣ ಪಾರ್ಥೀವ ಶರೀರದ ಮುಂದೆಯೇ ನಂಜನಗೂಡು ಟಿಕೆಟ್ ಪುತ್ರನಿಗೆ ನೀಡಲು ಬೆಂಬಲಿಗರು, ಕಾಂಗ್ರೆಸ್ ಹಿರಿಯ ಮುಖಂಡರ ಮುಂದೆ ಒತ್ತಾಯಿಸಿದ್ದರು. ಇದೇ ಕ್ಷೇತ್ರದಿಂದ ಸಿದ್ದರಾಮಯ್ಯ ಆಪ್ತ ಹೆಚ್‌ಸಿ ಮಹದೇವಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಾರ್ಥೀವ ಶರೀರದ ಮುಂದೆ ಹೈಡ್ರಾಮ ನಡೆದು ಹೋಗಿದೆ. ಧ್ರುವನಾರಾಯಣ ಬೆಂಬಲಿಗರು ಆಕ್ರೋಶ, ಪ್ರತಿಭಟನೆ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ತಂದಿದೆ. ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಕೈಮುಗಿದು ಸುಮ್ಮನಿರಲು ಮನವಿ ಮಾಡಿದರೂ ಆಕ್ರೋಶ ಕಡಿಮೆಯಾಗಲಿಲ್ಲ. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಆಘಾತದಿಂದ ನಾವು ಹೊರಬಂದಿಲ್ಲ. ಆದರೆ ಅವರ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇತ್ತ ಪ್ರತಿಭಟನೆಯಿಂದ ಸಿದ್ದರಾಮಯ್ಯ ತಲೆನೋವು ಹೆಚ್ಚಾಗಿದೆ. ಈ ಕರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿದ್ದು, ನಮ್ಗೆ ತಲೆಬಿಸಿಯಾಗಿದೆ ಎಂದಿದ್ದಾರೆ. 

ಬದುಕಲ್ಲ ಅನಿಸ್ತಿದೆ, ಪ್ಲೀಸ್​ ಇದೊಂದು ಆಸೆ ನೆರವೇರಿಸು ಎನ್ನುತ್ತಲೇ ಕೊನೆಯುಸಿರೆಳೆದ ನಟ ಸತೀಶ್​ ಕೌಶಿಕ್​!