ಜೂನ್ 5 ರಿಂದ 8ರ ತನಕ ಬೆಂಗಳೂರಿನಲ್ಲಿ ರಾಮಾಯಣ ಕುರಿತ ವಿಚಾರಗೋಷ್ಠಿ ಆಯೋಜಿತಗೊಂಡಿದೆ. ಜಿಜ್ಞಾಸುಗಳೆಲ್ಲರಿಗೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದುಡಾ. ಎ .ವಿ .ನಾಗಸಂಪಿಗೆ ಹಾಗೂ ಶ್ರೀನಿವಾಸ ವರ ಖೇಡಿ ಮನವಿ ಮಾಡಿದರು.

ಬೆಂಗಳೂರು (ಜೂ.1) ಜೂನ್ 5 ರಿಂದ 8ರ ತನಕ ಬೆಂಗಳೂರಿನಲ್ಲಿ ರಾಮಾಯಣ ಕುರಿತ ವಿಚಾರಗೋಷ್ಠಿ ಆಯೋಜಿತಗೊಂಡಿದೆ

ಪೂರ್ಣಪ್ರಜ್ಞಸಂಶೋಧನಾ ಮಂದಿರ(Purnaprajnasodhana Mandir) ಆಯೋಜಿಸಿರುವ ಈ ಗೋಷ್ಠಿ ಕನ್ನಡ ಸಂಸ್ಕೃತ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ ಎಂದು ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ. ಎ. ವಿ .ನಾಗಸಂಪಿಗೆ ಹಾಗೂ ನವದೆಹಲಿ ಕೇಂದ್ರೀಯಸಂಸ್ಕೃತ ವಿಶ್ವವಿದ್ಯಾನಿಲಯದ ಡಾ. ಶ್ರೀನಿವಾಸ ವರ ಖೇಡಿತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿಚಾರ ಸಂಕೀರ್ಣದ ಕುರಿತು ವಿವರ ನೀಡಿದರು.

ಮ.ಪ್ರ. ಸರ್ಕಾರದಿಂದ ಲವ- ಕುಶ ದೇಗುಲ ನಿರ್ಮಾಣ ಘೋಷಣೆ; ಲವ ಕುಶರ ಕತೆ ನಿಮಗೆ ಗೊತ್ತಾ?

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹಲೋಟ್ ಅವರು ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ.

ಪೂರ್ಣಪ್ರಜ್ಞ ವಿದ್ಯಾಪೀಠದ ಪರಿಸರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ಪ್ರಾಯೋಜಿಸಲಿದೆ.
ದೇಶದ ವಿವಿಧ ಸಂಸ್ಕೃತ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾಗೂ ಪ್ರಾಧ್ಯಾಪಕರು ಸೇರಿದಂತೆ ಸಮಾಜದ ವಿವಿದ ಸ್ಥರಗಳ ಗಣ್ಯರು ಗೋಷ್ಠಿಯಲ್ಲಿ ಪ್ರಬಂಧ ಮಂಡನೆ ಮಾಡಲಿದ್ದಾರೆ.

 ವಾಲ್ಮೀಕಿರಾಮಾಯಣ ಒಳಗೊಂಡಂತೆ ಅನೇಕ ಭಾಷೆಗಳಲ್ಲಿ ಕವಿಗಳು ಸಂತರು ಪ್ರಚುರಪಡಿಸಿದ ರಾಮಾಯಣಗಳನ್ನು ಆಧರಿಸಿ ಈ ಗೋಷ್ಠಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಭಾರತೀಯ ತತ್ವಶಾಸ್ತ್ರ ಅನುಸಂಧಾನ ಪರಿಷತ್ ಕೂಡ ಈ ಗೋಷ್ಠಿಗೆ ಎಲ್ಲ ರೀತಿಯಿಂದಲೂ ನೆರವಾಗುತ್ತಿದೆ.

Ramayana: ಸೀತೆ ತನ್ನ ಶ್ರೀರಾಮನಿಂದ ದೂರವಾದದ್ದು ಗಿಳಿಯ ಶಾಪವಂತೆ!

ಜಿಜ್ಞಾಸುಗಳೆಲ್ಲರಿಗೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದುಡಾ. ಎ .ವಿ .ನಾಗಸಂಪಿಗೆ ಹಾಗೂ ಶ್ರೀನಿವಾಸ ವರ ಖೇಡಿ ಮನವಿ ಮಾಡಿದರು.