ಸೆಮಿ ಕಂಡಕ್ಟರ್ ಘಟಕಗಳಿಗೆ ಶೀಘ್ರ ಸಮ್ಮತಿ: ಆರ್‌ಸಿ 5 ಕಂಪನಿಗಳಿಂದ 1.53 ಲಕ್ಷ ಕೋಟಿ ಹೂಡಿಕೆಗೆ ಪ್ರಸ್ತಾಪ ಸಲ್ಲಿಕೆ 2 ತಿಂಗಳಲ್ಲಿ ಯೋಜನೆಗೆ ಕೇಂದ್ರದ ಅಂಗೀಕಾರ: ಸಚಿವ ರಾಜೀವ್
ಬೆಂಗಳೂರು (ಅ.13) : ಐದು ಕಂಪೆನಿಗಳ 1.53 ಲಕ್ಷ ಕೋಟಿ ರು. ಮೊತ್ತದ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆ ಪ್ರಸ್ತಾವನೆಗಳಿಗೆ ಎರಡು ತಿಂಗಳೊಳಗೆ ಕೇಂದ್ರ ಸರ್ಕಾರವು ಸಮ್ಮತಿ ಸೂಚಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ 2022, ನಮ್ಮ ಕೌಶಲ್ಯ ಚಾಂಪಿಯನ್‌ಗಳನ್ನು ಸಂಭ್ರಮಿಸುವ ಸಮಯ, ರಾಜೀವ್ ಚಂದ್ರಶೇಖರ್!
ನಗರದ ಖಾಸಗಿ ಹೊಟೇಲ್‌ನಲ್ಲಿ ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಡ್ ಸೆಮಿ ಕಂಡಕ್ಟರ್ ಅಸೋಸಿಯೇಷನ್(ಐಇಎಸ್‌ಎ) ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ವಿಷನ್ ಸಮ್ಮಿಟ್’ನಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರವು 5 ಕಂಪೆನಿಗಳ 1.53 ಲಕ್ಷ ಕೋಟಿ ರು. ಮೊತ್ತದ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯ ಪ್ರಸ್ತಾವನೆಗಳಿಗೆ 30 ರಿಂದ 60 ದಿನದೊಳಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ ಚಿಪ್ ಮತ್ತು ಡಿಸ್‌ಪ್ಲೇ ತಯಾರಿಕಾ ಘಟಕಗಳ ಸ್ಥಾಪನೆಯಾಗಲಿವೆ. ಕಳೆದ ಎಂಟರಿಂದ ಒಂಬತ್ತು ತಿಂಗಳಲ್ಲಿ ದೇಶದ ಸೆಮಿ ಕಂಡಕ್ಟರ್ ಉತ್ಪಾದನಾ ವಲಯದಲ್ಲಿ ಭಾರೀ ಪ್ರಗತಿ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟರು.
ವೇದಾಂತ, ಫೆäಕ್ಸ್‌ಕಾನ್ ಜೆವಿ, ಐಜಿಎಸ್‌ಎಸ್, ವೆಂಚರ್ಸ್, ಐಎಸ್‌ಎಂಸಿ ಕಂಪೆನಿಗಳು ಎಲೆಕ್ಟ್ರಾನಿಕ್ ಚಿಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದು 1.53 ಲಕ್ಷ ಕೋಟಿ ರು. ಹೂಡಿಕೆ ಮಾಡಲಿವೆ. ಕಂಪೆನಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿ ಒಪ್ಪಿಗೆ ಸೂಚಿಸಲಿದ್ದು ಹೂಡಿಕೆ ಪ್ರಾರಂಭಿಸಲಿವೆ. ಗುಜರಾತ್ ಮತ್ತು ಕರ್ನಾಟಕ ಸರ್ಕಾರಗಳು ಅಭಿವೃದ್ಧಿ ದೃಷ್ಟಿಯಿಂದ ಬಂಡವಾಳ ಆಕರ್ಷಣೆಗೆ ಒತ್ತು ನೀಡಿವೆ. ಇದರಿಂದಾಗಿ ಉದ್ಯೋಗ ಸೃಷ್ಟಿ, ಹೂಡಿಕೆ, ಸಂಶೋಧನೆ, ರಾಜ್ಯಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು.
ರಫ್ತು ಗುರಿ 1200 ಕೋಟಿ ರು.
2014 ರಲ್ಲಿ ಯಾವುದೇ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ರಫ್ತು ಮಾಡಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ನಾವು 15 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಉತ್ಪನ್ನ ರಫ್ತು ಮಾಡಲಿದ್ದೇವೆ. 2025 ರ ವೇಳೆಗೆ ನಾವು ಒಟ್ಟಾರೆ 300 ಬಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವ ಗುರಿ ಹೊಂದಿದ್ದು 120 ಬಿಲಿಯನ್ ಡಾಲರ್ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ವಿವರಿಸಿದರು.
ಮುಂದಿನ ಶತಮಾನ ಭಾರತದ್ದು: ರಾಜೀವ್ ಚಂದ್ರಶೇಖರ್
ಐಇಎಸ್‌ಎ ಅಧ್ಯಕ್ಷ ವಿವೇಕ್ ತ್ಯಾಗಿ ಮಾತನಾಡಿ, ಎಲೆಕ್ಟ್ರಾನಿಕ್ಸ್ ವಲಯಕ್ಕೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಬಹಳಷ್ಟುಬಿಡಿ ಭಾಗಗಳು ಭಾರತದಲ್ಲಿ ತಯಾರಾಗುತ್ತಿವೆ. ಒಮ್ಮೆ ಇಲ್ಲಿ ಬಿಡಿಭಾಗಗಳು ತಯಾರಾಗಿ, ಉತ್ಪನ್ನಗಳು ಹೊರ ಹೊಮ್ಮಿದರೆ ದೇಶದಲ್ಲಿ ಭಾರೀ ಬದಲಾವಣೆ ಆಗಲಿದೆ. ಇದಕ್ಕೆ ಪೂರಕವಾಗಿ ಐಇಎಸ್‌ಎ ಕಾರ್ಯ ನಿರ್ವಹಿಸಲು ಬದ್ಧವಿದೆ ಎಂದು ಭರವಸೆ ನೀಡಿದರು.
