ಕನ್ನಡಪರ ಹೋರಾಟಗಾರರ ಮೇಲೆ ರಾತ್ರೋರಾತ್ರಿ ಪೊಲೀಸರು ಸರ್ಚ್ ವಾರೆಂಟ್ ಮಾಡಿಲ್ಲ. ಯಾರ ಮೇಲೆ ಕೇಸ್ ಮಾಡಿದ್ದಾರೋ ಅಂಥವರ ಮನೆ ಸರ್ಚ್ ಮಾಡಿದ್ದಾರೆ. ಇನ್ನೊಸೆಂಟ್ ಜನ್ರು ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಬೆಂಗಳೂರು (ಜ.2): ಕನ್ನಡಪರ ಹೋರಾಟಗಾರರ ಮೇಲೆ ರಾತ್ರೋರಾತ್ರಿ ಪೊಲೀಸರು ಸರ್ಚ್ ವಾರೆಂಟ್ ಮಾಡಿಲ್ಲ. ಯಾರ ಮೇಲೆ ಕೇಸ್ ಮಾಡಿದ್ದಾರೋ ಅಂಥವರ ಮನೆ ಸರ್ಚ್ ಮಾಡಿದ್ದಾರೆ. ಇನ್ನೊಸೆಂಟ್ ಜನ್ರು ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಕನ್ನಡ ಹೋರಾಟಗಾರರ ಮನೆ ಮೇಲೆ ಪೊಲೀಸರು ರಾತ್ರೋರಾತ್ರಿ ದಾಳಿ ಮಾಡುತ್ತಿರುವ ಆರೋಪ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಪೊಲೀಸರು ಇನ್ನೂ ಆ ರೀತಿ ವರ್ತನೆ ಮಾಡಿಲ್ಲ. ಯಾರಿಗೆ ಕೇಸ್ ಆಗಿರುತ್ತೆ ಅವರನ್ನು ವಿಚಾರಣೆಗೆ ಬನ್ನಿ ಅಂತ ಕರೆದು ಹೋಗಿದ್ದಾರೆ ಅಷ್ಟೇ ಎಂದರು.
ಡಿಕೆಶಿ ಮನೆಗೆ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಭೇಟಿ; ಪದೇಪದೆ ಭೇಟಿಗೆ ಕಾರಣ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್‌ಗೆ ಸಿಬಿಐ ನೋಟಿಸ್ ಕೊಟ್ಟಿರುವುದು ಅದು ಅವರ ವೈಯಕ್ತಿಕ ವಿಚಾರ. ಸರ್ಕಾರ ಏನು ಮಾಡಬಹುದು ಅಂತ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಬಿಎಸ್‌ವೈ ಮೌಖಿಕವಾಗಿ ಸೂಚಿಸಿ ಸಿಬಿಐಗೆ ಕೊಟ್ಟಿದ್ದರು. ನಮ್ಮ ಸರ್ಕಾರ ಬಂದಾಗ ನಾವು ಕೇಸ್ ಹಿಂಪಡೆಯಲು ತೀರ್ಮಾನ ಮಾಡಿ ಹಿಂಪಡೆದಿದ್ದೆವು. ವಾಪಸ್ ತೆಗೆದುಕೊಂಡ ಬಳಿಕ ಯಾರಾದ್ರೂ ಕೇಸ್ ನೋಡಬೇಕಲ್ವಾ? ಅದಕ್ಕೆ ಲೋಕಾಯುಕ್ತಕ್ಕೆ ಕೊಡಬೇಕು ಅಂತ ನಮ್ಮಸರ್ಕಾರ ಆದೇಶ ಮಾಡಿದೆ
CBI ಹಾಗೂ ಲೋಕಾಯುಕ್ತ ಅವರು ಏನು ಕ್ರಮ ತಗೊಬೇಕೊ ತಗೊತಾರೆ. ಸರ್ಕಾರ ಮಾಡುವ ಕೆಲಸ ಏನಿದೆ ಅದನ್ನ ಮಾಡಿದೆ. ಲೋಕಾಯುಕ್ತ ಹಾಗೂ ಸಿಬಿಐ ಕಮ್ಯುನಿಕೇಟ್ ಮಾಡಿಕೊಳ್ಳಬೇಕು. ಅದರ ರೆಕಾರ್ಡ್ಸ್ ಎಲ್ಲಾ CBI ಬಳಿ ಇರುತ್ತೆ. ಲೀಗಲ್ ವಿಚಾರಗಳ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಮುಂದೆ ನೋಡೋಣ ಏನಾಗುತ್ತದೆ ಅಂತಾ ಸದ್ಯ ಮಾಹಿತಿ ಇಲ್ಲ ಎಂದರು.
ಸಚಿವ ಮಧು ಚೆಕ್ ಬೌನ್ಸ್ ಪ್ರಕರಣ ಮರೆಸಲು ತಮ್ಮನ ಅರೆಸ್ಟ್: ಸಂಸದ ಪ್ರತಾಪ್ ಸಿಂಹ
ಇನ್ನು ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಯವರ ಬಂಧನ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಗೃಹಸಚಿವರು, ಈ ಹಿಂದೆ ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ. ಯಡಿಯೂರಪ್ಪನವರೂ ಸರ್ಕಾರ ನಡೆಸಿದ್ದಾರೆ. ಸ್ಪೆಸಿಫಿಕ್ ಆಗಿ ಅದೊಂದೇ ಕೇಸ್ ಆಗಿಲ್ಲ. ಎಲ್ಲ ಕೇಸ್‌ಗಳನ್ನೂ ರಿವ್ಯೂ ಮಾಡುವಾಗ ಇದೂ ಆಗಿದೆ. ಸುಮ್ನೆ ರಾಜಕೀಯ ಉದ್ದೇಶದಿಂದ ಟೀಕೆ ಮಾಡಬಾರದು. ನೆಲದ ಕಾನೂನಿನ ಪ್ರಕಾರ ಮಾಡಿದ್ದಾರೆ. ಬಾಕಿ ಉಳಿದ ಅರೆಸ್ಟ್ ಆದವರು ಹಿಂದೂಗಳಲ್ವಾ? ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವಾ? ಕಾನೂನು ಪ್ರಕಾರ ಏನು ಆಗುತ್ತದೆಯೋ ಆಗುತ್ತದೆ. ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹಳೆಯ ಕೇಸ್ ರಿವ್ಯೂ ಮಾಡ್ತಿದ್ದೇವೆ. ಈ ಕಡೆಯಾದರೂ ನ್ಯಾಯ ಆಗಬೇಕು ಅಥವಾ ಆ ಕಡೆಯಾದರೂ ಆಗಬೇಕು. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಂಧನ ಆಗಿದ್ದು ಕಾಕತಾಳೀಯ ಅಷ್ಟೇ ಎಂದರು.
