ಬೆಂಗಳೂರು (ಆ.13): ಪುಲಕೇಶಿನಗರದ ಗಲಭೆ ಪೂರ್ವ ನಿಯೋಜಿತವಾಗಿದ್ದು, ಎಸ್‌ಡಿಪಿಐ, ಪಿಎಫ್‌ಐ ಮುಖಂಡರಿಂದಲೇ ಗಲಭೆಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಅರಬ್ಬಿ ಕಾಲೇಜು ಪಕ್ಕ ಸಭೆ ನಡೆಸಿಯೇ ಈ ಕೃತ್ಯ ಎಸಗಲಾಗಿದೆ. ತರುವಾಯ ಪೊಲೀಸ್‌ ಠಾಣೆಗೂ ನುಗ್ಗಿದ್ದಾರೆ.

"

ಸಾರ್ವಜನಿಕರ ಮೇಲ್ಲೂ ಕಲ್ಲು ಎಸೆದಿದ್ದಾರೆ’ ಎಂದು ಹೇಳಿದರು. ‘ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲಿ ಆಗಿದೆ. ಘಟನೆ ಕಾರಣರಾದ ಮುಜಾಯಿಲ್‌ ಪಾಷಾ, ಆಯಾಜ್‌ರನ್ನು ಈಗಾಗಲೇ ಬಂಧಿಸಲಾಗಿದೆ. ಗುಂಡಾ ಕಾಯ್ದೆಯಡಿ ಗಲಭೆ ಮಾಡಿದವರನ್ನು ಬಂಧಿಸಿ, ಸಾರ್ವಜನಿಕ ಆಸ್ತಿ ಹಾಳು ಮಾಡಿದವರಿಗೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಷ್ಟಭರಿಸಿಕೊಳ್ಳಬೇಕು ಎಂದು ಹೇಳಿದರು.

ಡಿ.ಜೆ.ಹಳ್ಳಿ ದಾಂಧಲೆ: ಕಾಂಪೌಂಡ್‌ ಒಡೆದು ನಮ್ಮವರ ರಕ್ಷಿಸಿದೆವು, ಹಿರಿಯ ಅಧಿಕಾರಿ

ಸಾಮಾಜಿಕ ಜಾಲತಾಣದಲ್ಲಿ ಆ ರೀತಿಯಲ್ಲಿ ಏನಾದರೂ ಪೋಸ್ಟ್‌ ಹಾಕಿದರೆ ಸೈಬರ್‌ ಕ್ರೈಂ ವಿಭಾಗ ಇದೆ. ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಡಲಿ, ಕ್ರಮ ಕೈಗೊಳ್ಳುವುದಕ್ಕೆ ಒತ್ತಾಯ ಮಾಡಬಹುದು. ಆದರೆ, ಕಾನೂನು ಕೈಗೆ ತೆಗೆದುಕೊಳ್ಳುವುದಕ್ಕೆ ಇವರಿಗೆ ಯಾವ ಅಧಿಕಾರ ಇದೆ’ ಎಂದು ಕಿಡಿಕಾರಿದರು.