ಬೆಂಗಳೂರು :  ಮುಷ್ಕರ ಸೇರಿದಂತೆ ವಿವಿಧ ದಿಢೀರ್‌ ಬೆಳವಣಿಗೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆಯಾದಲ್ಲಿ ಆ ಅವಧಿಯ ತರಗತಿಗಳನ್ನು ರಜಾ ದಿನಗಳಲ್ಲಿ ಪೂರ್ಣ ದಿನ ಬೋಧನೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ 2019-20ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ಅವಧಿ ಮತ್ತು ರಜಾ ದಿನಗಳ ವೇಳಾ ಪಟ್ಟಿಬಿಡುಗಡೆ ಮಾಡಿದೆ. ಮುಷ್ಕರ ಸೇರಿದಂತೆ ಇತರೆ ರಜೆಗಳು ಘೋಷಣೆಯಾದಾಗ ರಜೆ ನೀಡಿದ್ದಕ್ಕೆ ಬದಲಿಯಾಗಿ ರಜಾ ದಿನಗಳಲ್ಲಿ ಪೂರ್ಣ ತರಗತಿಗಳನ್ನು ತೆಗೆದುಕೊಂಡು ಪಠ್ಯಕ್ರಮ ಪೂರ್ತಿ ಮಾಡಬೇಕು. 

ಕ್ರಿಸ್‌ಮಸ್‌ ರಜೆ ಬೇಡಿಕೆಯನ್ನು ಸಂಬಂಧಿಸಿದ ಸಂಸ್ಥೆಗಳು ಆಯಾ ವ್ಯಾಪ್ತಿಯ ಉಪನಿರ್ದೇಶಕರಿಗೆ ಸಲ್ಲಿಸಿದಲ್ಲಿ ಪರಿಶೀಲಿಸಿ, ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ರಜೆ ನೀಡಿ ಅಕ್ಟೋಬರ್‌ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್‌ ತಿಳಿಸಿದ್ದಾರೆ.