ಎಸ್ಸಿ ಎಸ್ಟಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು: ಡಿಕೆಶಿ ಹೇಳಿಕೆ

ರಾಜ್ಯದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಭಾನುವಾರ ರಾತ್ರಿ ಸುಗ್ರೀವಾಜ್ಞೆ ಹೊರಡಿಸಿತ್ತು. ಇದು ಕಾಂಗ್ರೆಸ್ ಪಕ್ಷದ ಕೂಸು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

SC ST reservation baby of Congress party DK Shivakumar gow

ಬೆಂಗಳೂರು (ಅ.24): ಎಸ್ಸಿ ಎಸ್ಟಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.  ರಾಜ್ಯದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಸಂಬಂಧ ನ್ಯಾ.ನಾಗಮೋಹನ ದಾಸ್‌ ಸಮಿತಿ ನೀಡಿದ್ದ ವರದಿಯ ಶಿಫಾರಸ್ಸನ್ನು ಯಥಾವತ್ತಾಗಿ ಒಪ್ಪಿಕೊಂಡು, ಪರಿಶಿಷ್ಟಸಮುದಾಯಗಳ ಮೀಸಲಾತಿ ಹೆಚ್ಚಳವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಭಾನುವಾರ ರಾತ್ರಿ ಸುಗ್ರೀವಾಜ್ಞೆ ಹೊರಡಿಸಿತ್ತು.  ಈ ಹಿನ್ನೆಲೆಯಲ್ಲಿ ಮಾತನಾಡಿರುವ ಡಿಕೆಶಿ ನಾಗ ಮೋಹನ್ ದಾಸ್ ಕಮಿಟಿ ಮಾಡಿದ್ದಕ್ಕೆ ಯಶಸ್ಸು ಕಂಡಿದೆ. ಜನಾಂಗಕ್ಕೆ ನ್ಯಾಯ ಒದಗಿಸಬೇಕು ಅನ್ನೋದೇ ಕಾಂಗ್ರೆಸ್ ಪಕ್ಷದ ಬಯಕೆ. ಎಸ್.ಟಿ ಜನಾಂಗದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಅಧಿಕಾರ ಬಂದ 24 ಗಂಟೆಯಲ್ಲೇ ಬಿಜೆಪಿ ಇದನ್ನು ಮಾಡಬೇಕಿತ್ತು. ಈಗಲೂ ಡಬಲ್ ಇಂಜಿನ್ ಸರ್ಕಾರ, ಬರೀ ಪೇಪರ್ ನಲ್ಲಿ ಇಟ್ಟು ಚಾಕ್ಲೆಟ್ ಕೊಡೋದಿಕ್ಕೆ ಹೋಗಬೇಡಿ. ಬಿಜೆಪಿ ತೀರ್ಮಾನ ಕೇವಲ ಕಣ್ಣು ಒರೆಸುವುದಷ್ಟೇ ಬೇರೆನೂ ಇಲ್ಲ. ಸಿಎಂ ದೆಹಲಿಯಲ್ಲಿ ಕೂತು ಪಾರ್ಲಿಮೆಂಟ್ ನಲ್ಲಿ ಇಟ್ಟು 9ನೇ ಶೆಡ್ಯೂಲ್ ನಲ್ಲಿ ಮಾಡಲಿ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. 

ಭಾರತ್ ಜೋಡೋ ಯಾತ್ರೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ದೆಹಲಿಯಲ್ಲಿ ಮೀಟಿಂಗ್ ಇದೆ. ಬಸ್ ಯಾತ್ರೆ ಬಗ್ಗೆ ನಾನೊಬ್ಬನೇ ಕೂತು ನಿರ್ಧಾರ ಮಾಡುವುದಕ್ಕೆ ಆಗುವುದಿಲ್ಲ. ಎಲ್ಲ ನಾಯಕರ ಬಳಿ ಚರ್ಚೆ ಮಾಡಿ ಬಸ್ ಯಾತ್ರೆ ಬಗ್ಗೆ ನಿರ್ಧಾರ ಮಾಡ್ತೇವೆ. ಕಲೆಕ್ಟಿವ್ ಆಗಿ ಕುಳಿತು ನಿರ್ಧಾರ ಮಾಡಿ ಕಲೆಕ್ಟಿವ್ ಲೀಡರ್ ಶಿಪ್ ನಲ್ಲಿ ಮತ್ತೊಂದು ಯಾತ್ರೆ ಮಾಡ್ತೇವೆ ಎಂದಿದ್ದಾರೆ.

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ: ಈ ಮೀಸಲಾತಿಯು ರಾಜ್ಯ ಸರ್ಕಾರದಿಂದ ನಿರ್ವಹಿಸಲಾಗುತ್ತಿರುವ ಅಥವಾ ರಾಜ್ಯದ ನಿಧಿಗಳಿಂದ ಅನುದಾನ ಪಡೆಯುತ್ತಿರುವ ಯಾವುದೇ ಶಾಲೆ, ಕಾಲೇಜು ಅಥವಾ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನ್ವಯವಾಗುತ್ತದೆ. ಜತೆಗೆ ಕರ್ನಾಟಕ ರಾಜ್ಯದ ಸಿವಿಲ್‌ ಸೇವೆ ಅಥವಾ ರಾಜ್ಯದಡಿಯಲ್ಲಿನ ಸಿವಿಲ್‌ ಹುದ್ದೆ, ಸಾರ್ವಜನಿಕ ವಲಯದಲ್ಲಿನ ಸಂಸ್ಥೆಯಲ್ಲಿರುವ ಸೇವೆ ಹಾಗೂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ವೇಳೆ ಪರಿಷ್ಕೃತ ಮೀಸಲಾತಿಯನ್ನು ಪರಿಗಣಿಸಬೇಕು. ಈ ಬಗ್ಗೆ ರಾಜ್ಯಪತ್ರದ ಮೂಲಕ ನಿಯಮಗಳನ್ನು ರಚಿಸಬೇಕು ಎಂದು ಸುಗ್ರೀವಾಜ್ಞೆ ಆದೇಶದಲ್ಲಿ ತಿಳಿಸಲಾಗಿದೆ.

ಎಸ್‌ಸಿ-ಎಸ್​ಟಿ ಮೀಸಲಾತಿ ಹೆಚ್ಚಳ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಮುದ್ರೆ

ಮೀಸಲಾತಿಯ ಒಟ್ಟು ಮಿತಿ ಶೇ.50ರಷ್ಟುದಾಟಬಾರದು ಎಂಬ ಸಂವಿಧಾನದ ನಿಯಮ ಇದೆ. ಆದರೆ ಹಲವು ರಾಜ್ಯಗಳು ಶೇ.50 ಕ್ಕಿಂತ ಹೆಚ್ಚು ಮೀಸಲಾತಿ ನೀಡಿವೆ. ಈ ಬಗ್ಗೆ ರಾಜ್ಯ ಸರ್ಕಾರವೂ ಅನುಮೋದನೆ ಪಡೆಯಲು ಕರ್ನಾಟಕ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸಭೆಗಳು ಸದ್ಯಕ್ಕೆ ಇಲ್ಲ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಲಾಗಿದೆ.

ಇತರೆ ಮೀಸಲಾತಿ ಬಗ್ಗೆ ವರದಿ ಆಧರಿಸಿ ಕ್ರಮ: ಸಿಎಂ ಬೊಮ್ಮಾಯಿ

ಯಾವ ವರ್ಗದ ಮೀಸಲು ಕಡಿತ?: ಈ ಸುಗ್ರೀವಾಜ್ಞೆಯಿಂದ ಎಸ್‌ಸಿಗೆ ಶೇ.2 ಹಾಗೂ ಎಸ್‌ಟಿಗೆ ಶೇ.4 ರಷ್ಟುಹೆಚ್ಚಾಗಲಿರುವ (ಒಟ್ಟು ಶೇ.6) ಮೀಸಲಾತಿಯನ್ನು ಯಾವ ವರ್ಗದಿಂದ ಕಡಿಮೆ ಮಾಡಿ ಈ ವರ್ಗಗಳಿಗೆ ಹೆಚ್ಚಳ ಮಾಡಲಾಗುವುದು ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇದು ಸರ್ಕಾರದ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

Latest Videos
Follow Us:
Download App:
  • android
  • ios