ಪುರುಷರ ಮೇಲೆ ಮಹಿಳೆಯರ ದೌರ್ಜನ್ಯ ಪ್ರಕರಣ ಹೆಚ್ಚಳ; ಸಮಸ್ಯೆ ಪರಿಹಾರಕ್ಕಾಗಿ ಸಮಾವೇಶ
ವಿವಾಹಿತ ಪುರುಷರ ಆತ್ಮಹತ್ಯೆ ನಿಯಂತ್ರಣ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಶನ್’ ಆಶ್ರಯದಲ್ಲಿ ಸಮಾವೇಶ ನಡೆಯಲಿದೆ.

ಬೆಂಗಳೂರು (ಸೆ.29): ‘ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಶನ್’ ಆಶ್ರಯದಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆ ನಿಯಂತ್ರಣ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲು ಸೆಪ್ಟಂಬರ್ 30ರಂದು ಮಹಾರಾಷ್ಟ್ರದ ಪುಣೆಯಲ್ಲಿ ಸುಮಾರು 300 ಪುರುಷರ ಹಕ್ಕುಗಳ ಕಾರ್ಯಕರ್ತರು ಸಮಾವೇಶ ನಡೆಯಲಿದೆ ಎಂದು ಸಂಸ್ಥೆಯ ಎಸ್‌ಐಎಫ್‌ಎಫ್‌ನ ಸಹ ಸಂಸ್ಥಾಪಕ ಅನಿಲ್ ಮೂರ್ತಿ ಹೇಳಿದ್ದಾರೆ.
ಪುರುಷರಿಗೇಕೆ ಬೇಗ ಬಾಲ್ಡ್ ಆಗುತ್ತೆ? ಏನಾದ್ರೂ ಪರಿಹಾರವಿದ್ಯಾ?
‘ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾದವರು, ಮಹಿಳೆಯರು ದಾಖಲಿಸಿರುವ ಸುಳ್ಳು ಪ್ರಕರಣಗಳಲ್ಲಿ ಕಾನೂನಿನ ಬಲೆಯಲ್ಲಿ ಸಿಲುಕಿರುವ ಸಂತ್ರಸ್ತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಹಿಳಾ ಮೀಸಲಾತಿ ಜಾರಿಗೊಳಿಸುವ ಮೊದಲು ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಅತ್ಯಾಚಾರ ವಿರುದ್ಧದ ಕಾನೂನುಗಳು ಲಿಂಗ ತಟಸ್ಥವಾಗಿರಬೇಕು. ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ವೇಳೆ ಲಿಂಗ ತಾರತಮ್ಯದಿಂದ ಜನರನ್ನು ರಕ್ಷಿಸಬೇಕು. ಇಲ್ಲದಿದ್ದರೆ ಪುರುಷರು ಮತ್ತು ‘ಎಲ್‌ಜಿಬಿಟಿಕ್ಯೂ’ ಸಮುದಾಯಕ್ಕೆ ಅನ್ಯಾಯವಾಗುತ್ತದೆ’ ಎಂದು ಅನಿಲ್ ಮೂರ್ತಿ ಆರೋಪಿಸಿದ್ದಾರೆ.
ಪ್ರಯೋಜನ ಮಾತ್ರವಲ್ಲ, ಅಶ್ವಗಂಧ ಹೆಚ್ಚು ತಿನ್ನೋದ್ರಿಂದ ಗಂಡಸ್ರಿಗೆ ಕಾಡಬಹುದು ಸಮಸ್ಯೆ !
ವರ್ಷದಿಂದ ವರ್ಷಕ್ಕೆ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ವಿವಾಹಿತ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಕಳೆದ 15 ವರ್ಷಗಳಿಂದ ತಟಸ್ಥವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.