Asianet Suvarna News Asianet Suvarna News

'ಹಿಂದು ಅಶ್ಲೀಲ ಪದ' ಸತೀಶ್ ಜಾರಕಿಹೊಳಿ ಹೇಳಿಕೆಗೆ ಈಶ್ವರಪ್ಪ ಆಕ್ರೋಶ

ಹಿಂದು ಎನ್ನುವ ಪದಕ್ಕೆ, ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಮಾತು ಆಡಿದರೇ ತಿಂದ ಅನ್ನ ಕರಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಕೆ.ಎಸ್.ಈಶ್ವರಪ್ಪ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

Satish Jarakiholi statement issue ks eshwarappa outraged against jarkiholi rav
Author
First Published Nov 8, 2022, 2:43 PM IST

ಶಿವಮೊಗ್ಗ (ನ.8): ಹಿಂದು ಎನ್ನುವ ಪದಕ್ಕೆ, ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಮಾತು ಆಡಿದರೇ ತಿಂದ ಅನ್ನ ಕರಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಕೆ.ಎಸ್.ಈಶ್ವರಪ್ಪ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಅವರ ಹೇಳಿಕೆಯನ್ನು ಸುರ್ಜೇವಾಲಾ ಖಂಡನೆ ಮಾಡಿದ್ದಾರೆ. ಅವರು ಹೇಳಿದ ಮೇಲೂ ನನ್ನ ಮಾತಿಗೆ ಬದ್ದ ಎನ್ನುವ ಮೂಲಕ ಜಾರಕಿಹೊಳಿ ಸೊಕ್ಕಿನ ಮಾತಾಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಶಕ್ತಿ ಇದ್ದರೆ ಕ್ರಮ ಕೈಗೊಳ್ಳಲಿ. ಪಕ್ಷದಿಂದ ಅಮಾನತುಗೊಳಿಸಲಿ ಎಂದು ಒತ್ತಾಯಿಸಿದರು.

ಜಾರಕಿಹೊಳಿ ಹಿಂದು ಅಶ್ಲೀಲ ಹೇಳಿಕೆ ಹಿನ್ನೆಲೆ; ಇಂದಿನಿಂದ ಸ್ವಾಭಿಮಾನಿ ಹಿಂದು ಅಭಿಯಾನ -ಸುನೀಲ್ ಕುಮಾರ್

ಸೋನಿಯಾಗಾಂಧಿ ಹಾಗೂ ಮುಸಲ್ಮಾನರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ವಾಲ್ಮೀಕಿ ರಕ್ತ ಹಂಚಿಕೊಂಡು ಜಾರಕಿಹೊಳಿ ಹುಟ್ಟಿದ್ದಾರೆ. ಮೊದಲು ಹಿಂದುಗಳ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದುಗಳು ಬುದ್ದಿ ಕಲಿಸುತ್ತಾರೆ ಎಂದರು.

ಜನ ಸಂಕಲ್ಪ ಯಾತ್ರೆ ಕುರಿತು ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಲೆಕ್ಕ ಕೊಡಿ ಮೊದಲು. ಸಿದ್ದರಾಮಯ್ಯ ಈ ಮೊದಲು ಸೋನಿಯಾಗಾಂಧಿ ಮೆಚ್ಚಿಸಬೇಕಿತ್ತು. ಈಗ ಖರ್ಗೆ ಅವರನ್ನು ಮೆಚ್ಚಿಸಲು ಹೊರಟ್ಟಿದ್ದಾರೆ. ಖರ್ಗೆ ಮೆಚ್ಚಿಸಿ ಎಲ್ಲಾದರೂ ಟಿಕೇಟ್ ಪಡೆಯಬೇಕು ಅಂತಾ ಒದ್ದಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಚಾಮುಂಡೇಶ್ವರಿಯಲ್ಲಿ ಸೋತು‌ ಬಾದಾಮಿಗೆ ಹೋದರು. ಈಗ ಬಾದಾಮಿಯಲ್ಲಿ ಸೋಲ್ತೀನಿ ಅಂತಾ ಗೊತ್ತಾಗಿ ಬೇರೆ ಕ್ಷೇತ್ರ ಹುಡುಕಾಡುತ್ತಿದ್ದಾರೆ. ಅವರು ಗೆಲ್ಲೋದು ಕಷ್ಟ, ಇನ್ನು ಖರ್ಗೆ ಅವರಿಗೆ ಗಿಫ್ಟ್ ಏನು ಕೊಡ್ತಾರೆ ? ಅವರ ಮಾತೇ ಹಾಸ್ಯಾಸ್ಪದ ಎಂದು ಹೇಳಿದರು. ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ!

Follow Us:
Download App:
  • android
  • ios