ಜಾರಕಿಹೊಳಿ 'ಹಿಂದು ಅಶ್ಲೀಲ' ಹೇಳಿಕೆ ನೀಡಿದ ಬೆನ್ನಲ್ಲೇ ಇಂದಿನಿಂದ 'ಸ್ವಾಭಿಮಾನಿ ಹಿಂದು ಅಭಿಯಾನ' !

ಹಿಂದೂ ಪದ ಅಶ್ಲೀಲ ಎಂದು ಸತೀಶ್ ಜಾರಕಿಹೊಳಿ ಹೇಳಿರುವುದು ನಾಚಿಕೆಗೇಡು ಸಂಗತಿ. ಈ ಅಪಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಕಾಂಗ್ರೆಸ್ ಹುಟ್ಟಿನಿಂದ ಇವತ್ತಿನವರೆಗೆ ಹಿಂದು ಭಾರತೀಯತೆ ಮೇಲೆ ಹಲವು ಬಾರಿ ಅವಮಾನ ಮಾಡಿದೆ. ಸ್ವಾಭಿಮಾನಿ ಹಿಂದು ಅಭಿಯಾನ ಇಂದಿನಿಂದ ಆರಂಭವಾಗಲಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು

satish jarkiholi statement backround hindhu swabhiman campaign from today rav

ಉಡುಪಿ (ನ.8) : ಹಿಂದೂ ಪದ ಅಶ್ಲೀಲ ಎಂದು ಸತೀಶ್ ಜಾರಕಿಹೊಳಿ ಹೇಳಿರುವುದು ನಾಚಿಕೆಗೇಡು ಸಂಗತಿ. ಈ ಅಪಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಕಾಂಗ್ರೆಸ್ ಹುಟ್ಟಿನಿಂದ ಇವತ್ತಿನವರೆಗೆ ಹಿಂದು ಭಾರತೀಯತೆ ಮೇಲೆ ಹಲವು ಬಾರಿ ಅವಮಾನ ಮಾಡಿದೆ. ಸ್ವಾಭಿಮಾನಿ ಹಿಂದು ಅಭಿಯಾನ ಇಂದಿನಿಂದ ಆರಂಭವಾಗಲಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು

ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ!

ಅವರು ಮಂಗಳವಾರ ನಗರದ ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು

ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ಕ್ಷಮೆ ಯಾಚಿಸಲೇಬೇಕು, ಕಾಂಗ್ರೆಸ್‌ ನ ಕಾರ್ಯಾಧ್ಯಕ್ಷನಾಗಿ ಜಾರಕಿಹೋಳಿ ಹೇಳಿಕೆ ಕೊಟ್ಟಿದಾರೆ. ನೆಹರು ನನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದರು. ನೆಹರು ಹಾಕಿಕೊಟ್ಟ ಪರಂಪರೆ ಇವತ್ತಿಗೂ ಮುಂದುವರೆಯುತ್ತಾ ಬಂದಿದೆ.ಅವಕಾಶ ಸಿಕ್ಕಾಗಲೆಲ್ಲ ಹಿಂದುತ್ವ ಮತ್ತು ಭಾರತೀಯತೆ ಬಗ್ಗೆ ಕಾಂಗ್ರೆಸ್ ಅಪಮಾನ ಮಾಡುತ್ತಾ ಬಂದಿದೆ ಎಂದು ಕಿಡಿಕಾರಿದರು

ಕಾಂಗ್ರೆಸ್ ಹಿರಿಯ ನಾಯಕ ಶಿವರಾಜ್ ಪಾಟೀಲ್ ಭಗವದ್ಗೀತೆಯನ್ನು ಜಿಹಾದ್ ಗೆ ಹೋಲಿಸಿದರೆ, ಸಿದ್ದರಾಮಯ್ಯನವರು ತಿಲಕ ಕಂಡರೆ ಆಗುವುದಿಲ್ಲ ಎಂದು ಹೇಳಿದ್ದರು. ಸಾವರ್ಕರ್ ಬಗೆಗೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಹಿಂದುಗಳನ್ನು ಕಂಡರೆ ಅಸಹನೆ, ಭಾರತೀಯತೆಯನ್ನು ಕಾಂಗ್ರೆಸ್ ಯಾವತ್ತೂ ಒಪ್ಪಿಲ್ಲ ಎಂದರು 

ಹಿಂದುತ್ವಕ್ಕೆ ಧಕ್ಕೆಯಾದಾಗಲೆಲ್ಲ ನಾವು ಎದ್ದು ನಿಂತಿದ್ದೇವೆ. ಈ ವಿಚಾರವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ, ಈ ಹೇಳಿಕೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಭಾರತೀಯತೆ ಹಿಂದೂ ಜೀವನ ಪದ್ಧತಿಯನ್ನು ಒಪ್ಪದ ಕಾಂಗ್ರೆಸ್ ಸಮಾಜದ ಕ್ಷಮೆ ಕೇಳಬೇಕು ಎಂದವರು ಆಗ್ರಹಿಸಿದರು

ಜಾರಕಿಹೊಳಿ ಶಾಲೆಗೆ ಸೇರುವಾಗ, ಚುನಾವಣೆಗೆ ಸ್ಪರ್ಧಿಸುವಾಗ ಹಿಂದೂ ಪರಿಶಿಷ್ಟ ಜಾತಿ ಎಂದು ಹೇಳಿದ್ದಿರೋ ಅಥವಾ ಅಶ್ಲೀಲ ಹಿಂದೂ ಎಂದು ಹೇಳಿ ಶಾಲೆಗೆ ಸೇರಿದ್ದೀರೋ? ಕಾಂಗ್ರೆಸ್ ಈ ಹೇಳಿಕೆಗೆ ಬಹಳ ದೊಡ್ಡ ಪ್ರಮಾಣದ ಬೆಲೆ ತರಬೇಕಾಗುತ್ತದೆ. ಮಂಗಳವಾರ ಬೆಳಗ್ಗೆ ನಾನೇ ಟ್ವೀಟ್ ಮಾಡಿದ್ದೇನೆ ಎಂದರು

ಹಿಂದುತ್ವಕ್ಕೆ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಅಪಮಾನ ಮಾಡಿದೆ. ಈ ನಡೆಯ ವಿರುದ್ಧ ಯುವಕರು ರಸ್ತೆಗೆ ಬರಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಇದನ್ನು ಖಂಡಿಸಬೇಕು. ನಾನು ಸ್ವಾಭಿಮಾನಿ ಹಿಂದು, ಹಿಂದುತ್ವಕ್ಕೆ ಧಕ್ಕೆಯಾದಾಗ ಸೆಟೆದು ನಿಲ್ಲುತ್ತೇನೆ. ದೇಶದ ಅಸ್ಮಿತೆಗೆ ಧಕ್ಕೆಯಾದಾಗ ಹೋರಾಟ ಮಾಡುತ್ತೇನೆ ಎಂಬುದನ್ನು ತೋರಿಸಿಕೊಡಬೇಕು. ರಸ್ತೆಗೂ ಬನ್ನಿ ಸಾಮಾಜಿಕ ಜಾಲತಾಣಗಳಲ್ಲೂ ಕಾಂಗ್ರೆಸ್ ನಡೆಯನ್ನು ಖಂಡಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಹಿಂದು ಅಶ್ಲೀಲ ಪದ ಹೇಳಿಕೆ: ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದ ಜಾರಕಿಹೊಳಿ

ದೈವಾರಾಧಕರಿಗೆ ಮಾಸಾಶನ ವಿರೋಧಿಸಿದ ಬಿ.ಟಿ.ಲಲಿತಾ ನಾಯಕ್ ಈ ಹಿಂದೆ ಕನ್ನಡ ಸಂಸ್ಕೃತಿ ಸಚಿವರಾಗಿದ್ದವರು. ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳಬೇಡಿ ಎನ್ನುತ್ತಾರೆ,‌ ಇದು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ದೈವ ನರ್ತಕರಿಗೆ ಮಾಸಾಶನ ಕೊಟ್ಟಾಗ ಸಮಾಜ ಅದನ್ನು ಸ್ವಾಗತಿಸಿದೆ ಎಂದವರು ಹೇಳಿದರು

Latest Videos
Follow Us:
Download App:
  • android
  • ios