ಯಾದಗಿರಿಯಿಂದ ಮತ್ತೆ ಸ್ಯಾಟಲೈಟ್ ಫೋನ್ ಸದ್ದು; ಶೆಳ್ಳಗಿ ಗ್ರಾಮದಿಂದ ಪಾಕ್‌ಗೆ ಕರೆ?

ಕಲ್ಯಾಣ ಕರ್ನಾಟಕ ಭಾಗದ ಜನರು ಸೆ.17ರಂದು ಹೈದರಾಬಾದ್‌ಕರ್ನಾಟಕ ವಿಮೋಚನಾಸಂಭ್ರಮದಲ್ಲಿರುವಾಗ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿಯಿಂದ ನಿಷೇಧಿತ ಸ್ಯಾಟಲೈಟ್ ಮೂಲಕ ವಿದೇಶಕ್ಕೆ ಕರೆ ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Satellite phone rang again from Yadagiri Call to Pak from Shellagi village rav

ಯಾದಗಿರಿ (ಡಿ.15): ಕಲ್ಯಾಣ ಕರ್ನಾಟಕ ಭಾಗದ ಜನರು ಸೆ.17ರಂದು ಹೈದರಾಬಾದ್‌ಕರ್ನಾಟಕ ವಿಮೋಚನಾಸಂಭ್ರಮದಲ್ಲಿರುವಾಗ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿಯಿಂದ ನಿಷೇಧಿತ ಸ್ಯಾಟಲೈಟ್ ಮೂಲಕ ವಿದೇಶಕ್ಕೆ ಕರೆ ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚೀನಾ ನಿರ್ಮಿತ ಸ್ಯಾಟ್‌ಲೈಟ್‌ ಫೋನಿಂದ ವಿದೇಶಕ್ಕೆ ಕರೆ ಹೋಗಿದೆ. ಪಾಕಿಸ್ತಾನಕ್ಕೆ ಈ ಕರೆ ಹೋಗಿರಬಹುದು ಎಂದು ಕೇಂದ್ರ ಸಂಸ್ಥೆಗಳು ಶಂಕಿಸಿವೆ.  ಸೆ.17ರಂದು ಶೆಳ್ಳಗಿ ಗ್ರಾಮದ ಕೃಷಿ ಪ್ರದೇಶವೊಂದರಿಂದ ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಕರೆ ಮಾಡಲಾಗಿದೆ.

ಅಧಿಕಾರಿಗಳ ಭೇಟಿ: ಇಲ್ಲಿಂದ ಅನಾಮಧೇಯ ಸ್ಥಳಕ್ಕೆ ನಿಷೇಧಿತ 'ತುರಾಯಾ' (ಸ್ಯಾಟಲೈಟ್ ಫೋನ್ ಉಪಕರಣ) ಮೂಲಕ ಕರೆ ಹೋಗಿರುವ ಜಾಡು ಅರಿತು ಕೇಂದ್ರ ಸಂಸ್ಥೆಗಳು ಇಲ್ಲಿಗೆ ಮಾಹಿತಿ ರವಾನಿಸಿವೆ. ತಕ್ಷಣವೇ ಈ ಬಗ್ಗೆ ಜಾಗೃತರಾದ ಅಧಿಕಾರಿಗಳು ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Mangaluru Blast Case: ಮಂಗಳೂರು ಬ್ಲಾಸ್ಟ್‌ಗೆ ಮುನ್ನ ಕರಾವಳಿಯಲ್ಲಿ ರಿಂಗಣಿಸಿದ ಸ್ಯಾಟಲೈಟ್ ಫೋನ್

ಪಾಕ್‌ಗೆ ಕರೆ ಶಂಕೆ?: ಶೆಳ್ಳಗಿಯಿಂದ ನಿಷೇಧಿತ ಸ್ಯಾಟ್ಲೈಟ್ ಫೋನ್ ಮೂಲಕ ವಿದೇಶಕ್ಕೆ ಕರೆ ಹೋಗಿರುವುದು  ಖಚಿತವಾಗಿದೆ. ಆದರೆ, ಇಂತಹುದ್ದೇ ಕಡೆಗೆ ಕರೆ ಹೋಗಿದೆ ಎಂದು ಗೊತ್ತಾಗಿಲ್ಲವಾದರೂ, ಪಾಕಿಸ್ತಾನಕ್ಕೆ ಹೋಗಿರುವುದು ಶಂಕೆ ವ್ಯಕ್ತವಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದರು. 

ಉಗ್ರರ ಸುಳಿವಿತ್ತು!: ಎರಡು ವರ್ಷಗಳ ಹಿಂದೆ, 2021ರ ಏಪ್ರಿಲ್‌ನಲ್ಲಿ ಯಾದಗಿರಿಗೆ ಸಮೀಪದ ಹೆಡಗಿಮುದ್ರಾ ಗ್ರಾಮ ಹೊರವಲಯದಿಂದ ಇಂತಹುದ್ದೇ ನಿಷೇಧಿತ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ ಕರೆ ಹೋಗಿದ್ದರಿಂದ, ಆಂತರಿಕ ಭದ್ರತಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಅಲ್ಲದೆ, ಯಾದಗಿರಿಯಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರು ಅಡಗಿದ್ದರು ಎಂಬ ಸುಳಿವಿನ ಮೇರೆಗೆ 2014ರಲ್ಲಿ ಮುಂಬೈ ಹಾಗೂ ಹೈದರಾಬಾದ್‌ನಿಂದ ಎನ್‌ಐಎ ಅಧಿಕಾರಿಗಳ ತಂಡ ಭೇಟಿ ನೀಡಿ, ಹಲವರ ವಿಚಾರಣೆಯನ್ನೂ ನಡೆಸಿತ್ತು. 

ಒಂದು ವಾರದಲ್ಲಿ ರಾಜ್ಯದ 4 ಕಡೆ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆ!

ಸಿಮಿ ಉಗ್ರನ ಅರಸಿ ಬಂದರು!: ಮಧ್ಯಪ್ರದೇಶದ ಖಂಡ್ವಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿಮಿ ಉಗ್ರ ಮೆಹಬೂಬ್ ಅಲಿಯಾಸ್ ಗುಡ್ಡು ಸೇರಿದಂತೆ ಕೆಲವರು ಯಾದಗಿರಿ ಯನ್ನು ಅಡಗುತಾಣ ಮಾಡಿಕೊಂಡಿದ್ದರು ಎಂಬ ಮಾಹಿತಿ ಮೇರೆಗೆ ಕೇಂದ್ರ ಅಧಿಕಾರಿಗಳ ತಂಡ 2014ರಲ್ಲಿ ಇಲ್ಲಿಗೆ ಭೇಟಿ ನೀಡಿತ್ತು. ಇದೀಗ ಮತ್ತೆ ಸ್ಯಾಟಲೈಟ್ ಸದ್ದು ಕೇಳಿ ಬಂದಿದೆ. ಉಗ್ರರ ಅಡುಗು ತಾಣವಾಯ್ತಾ ಯಾದಗಿರಿ?

Latest Videos
Follow Us:
Download App:
  • android
  • ios