ಬೆಂಗಳೂರು(ನ.01): ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಪ್ನ ಬುಕ್‌ ಹೌಸ್‌ ನವೆಂಬರ್‌ ತಿಂಗಳಲ್ಲಿ ಖರೀದಿಸುವ ಪುಸ್ತಕಗಳ ಮೇಲೆ ಶೇ.10-20 ರಿಯಾಯಿತಿ ಜೊತೆಗೆ ಪುಸ್ತಕ ಪ್ರಿಯರಿಗೆ ಕೆಲವು ವಿಶೇಷ ಕೊಡುಗೆ ನೀಡಲಿದೆ.

ಪುಸ್ತಕ ಪ್ರಿಯರಿಗೆ ಸಪ್ನ ಬುಕ್‌ ಹೌಸ್‌ನ ರಾಜ್ಯದ ಎಲ್ಲ ಶಾಖೆಗಳಲ್ಲಿ ನ. 1-30 ರವರೆಗೆ ಈ ವಿಶೇಷ ರಿಯಾಯಿತಿ ದೊರೆಯಲಿದೆ. ಜೊತೆಗೆ ಒಟ್ಟು 200 ಮೌಲ್ಯದ ಪುಸ್ತಕಗಳ ಖರೀದಿಸುವವರಿಗೆ ಸಪ್ನ ಸದಸ್ಯತ್ವ ಕಾರ್ಡ್‌ ದೊರೆಯಲಿದೆ. ಈ ಕಾರ್ಡ್‌ ಪಡೆದವರು ಒಂದು ವರ್ಷ ಪೂರ್ತಿ ಸಪ್ನದ ಯಾವ ಶಾಖೆಯಲ್ಲಾದರೂ ಶೇ.10 ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಕೊಳ್ಳಬಹುದು. 

ಸಪ್ನಾಬುಕ್‌ ಹೌಸ್‌ : ಭಾರೀ ಡಿಸ್ಕೌಂಟ್‌

ವಿಶೇಷ ಪುಸ್ತಕ ಪ್ರದರ್ಶನ ವಿಭಾಗದಲ್ಲಿನ ಜನಪ್ರಿಯ ಕೃತಿಗಳಿಗೆ ಶೇ.15 ರಷ್ಟು ಮತ್ತು ನವೆಂಬರ್‌ ತಿಂಗಳಲ್ಲಿ ಸಪ್ನ ಪ್ರಕಟಿಸುವ ಎಲ್ಲ ಕನ್ನಡ ಪುಸ್ತಕಗಳ ಮೇಲೆ ಶೇ.20 ರಷ್ಟು ವಿಶೇಷ ರಿಯಾಯಿತಿ ನೀಡುವುದಾಗಿ ಪ್ರಕಟಣೆ ತಿಳಿಸಿದೆ.