ಬೆಂಗ​ಳೂರು :  ನಾಡಿನ ಸುಪ್ರಸಿದ್ಧ ಪುಸ್ತಕ ಕಾಶಿ, ಬೆಂಗಳೂರಿನ ‘ಸಪ್ನ ಬುಕ್‌ ಹೌಸ್‌’ ತನ್ನ 52ರ ಸಂಭ್ರಮದಲ್ಲಿ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಘೋಷಿಸುವ ಮೂಲಕ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 

ಜನವರಿ 26ರಿಂದ ಫೆಬ್ರವರಿ 10ರ ತನಕ ತನ್ನೆಲ್ಲಾ ಗ್ರಾಹಕರಿಗೂ ಕೆಲವು ವಿನೂತನ ಯೋಜನೆಗಳನ್ನು ಘೋಷಿಸಿದೆ. ಅ ಅವಧಿಯಲ್ಲಿ ಸಪ್ನಾದ ಎಲ್ಲಾ ಶಾಖೆಗಳಲ್ಲೂ ಪುಸ್ತಕಗಳ ಮೇಲೆ ಶೇ.10% ರಿಂದ 52%ರಷ್ಟುರಿಯಾಯಿತಿ ಇರುತ್ತದೆ. 

ಐನೂರಕ್ಕೂ ಹೆಚ್ಚು ಮೊತ್ತದ ಪುಸ್ತಕದ ಖರೀದಿ ಮಾಡಿದವರಿಗೆ ಸಪ್ನಾ ಲಾಯಲ್ಟಿಕಾರ್ಡ್‌ ಕೊಡಲಾಗುತ್ತದೆ. ಈ ಕಾರ್ಡು ಹೊಂದಿರುವವರಿಗೆ ಬೋನಸ್‌ ಪಾಯಿಂಟುಗಳು ದೊರೆಯುತ್ತವೆ. 

ಪ್ರತಿ ನೂರು ಪಾಯಿಂಟುಗಳು ಒಟ್ಟಾದ ಕೂಡಲೇ ಮೊದಲ ನೂರು ಪಾಯಿಂಟುಗಳು ರಿಯಾಯಿತಿಗೆ ಅರ್ಹವಾಗುತ್ತವೆ. ಪುಸ್ತಕ ಖರೀದಿಗೆ ತಿಂಗಳ ಕಂತಿನ ಸೌಲಭ್ಯವನ್ನೂ ನೀಡಲಾಗುತ್ತದೆ. ಸುಮಾರು ಎರಡು ಕೋಟಿ ಶೀರ್ಷಿಕೆಗಳನ್ನು ಈ ಯೋಜನೆಯಡಿ ಖರೀದಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.