ಸ್ಯಾಂಟ್ರೋ ರವಿಗೆ 20 ವರ್ಷದ ಇತಿಹಾಸವಿದೆ. ಯಾವ್ಯಾವ ಸರ್ಕಾರ ಗಳಿದ್ದವು ಯಾರ್ಯಾರು ಮಂತ್ರಿಗಳಿದ್ದರು. ಯಾರ ಜೊತೆಗೆ ಸಂಬಂಧ ಇತ್ತು ಎಲ್ಲವೂ ತನಿಖೆ ಆಗಲಿದೆ. ಆತನ ಎಲ್ಲ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ (ಜ.10): ಸ್ಯಾಂಟ್ರೋ ರವಿಗೆ 20 ವರ್ಷದ ಇತಿಹಾಸವಿದೆ. ಯಾವ್ಯಾವ ಸರ್ಕಾರ ಗಳಿದ್ದವು ಯಾರ್ಯಾರು ಮಂತ್ರಿಗಳಿದ್ದರು. ಯಾರ ಜೊತೆಗೆ ಸಂಬಂಧ ಇತ್ತು ಎಲ್ಲವೂ ತನಿಖೆ ಆಗಲಿದೆ. ಆತನ ಎಲ್ಲ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜನವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಲಿದ್ದಾರೆ‌. 28 ರಾಜ್ಯಗಳಿಂದ ಯುವ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಗಳ ಕಾರ್ಯಕ್ರಮದ‌ ಎಲ್ಲ ಸಿದ್ದತೆ ಮಾಡಲಾಗಿದೆ. 

ಪಂಚಮಸಾಲಿ 2ಎ ಮೀಸಲಾತಿ ವಿಚಾರ. ಸಂವಿಧಾನ ಬದ್ದವಾಗಿ ಮೀಸಲಾತಿ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿ ಬಹಳ ಮುಖ್ಯ. ಹೀಗಾಗಿ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಮಹಾದಾಯಿಗೆ ಅರಣ್ಯ ಇಲಾಖೆ ಸ್ಪಷ್ಟನೆ ವಿಚಾರ‌. ಅರಣ್ಯ ಇಲಾಖೆ ಸ್ಪಷ್ಟನೆ ಕೇಳುವುದು ಸಾಮಾನ್ಯ.. ಈ ಹಿಂದೆ ಸಾಕಷ್ಟು ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ. ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ‌.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ. ಅದು ಅವರ ವೈಯಕ್ತಿಕ ವಿಚಾರ, ಆ ಬಗ್ಗೆ ವ್ಯಾಖ್ಯಾನ ನಾನು ಮಾಡಲ್ಲ. ಪ್ರತಿಯೊಬ್ಬ ರಾಜಕಾರಣಿ ನಡೆ ಚುನಾವಣೆಯಲ್ಲಿ ನಿರ್ಧಾರವಾಗುತ್ತೆ. ಎಲ್ಲ ಕಡೆ ನಿಲ್ಲಲು ಅವರು ಸರ್ವ ಸ್ವತಂತ್ರರು, ಆದರೆ ತೀರ್ಮಾನವನ್ನು ಕೋಲಾರದ ಜನತೆ ಮಾಡುತ್ತಾರೆ.

ಸ್ಯಾಂಟ್ರೋ ರವಿ ಬೆಂಗಳೂರು ಮನೆ ಮೇಲೆ ಪೊಲೀಸ್‌ ದಾಳಿ
ಬೆಂಗಳೂರು: ವಂಚನೆ ಪ್ರಕರಣದ ಆರೋಪ ಸಂಬಂಧ ನಗರದಲ್ಲಿ ಮಂಜುನಾಥ ಅಲಿಯಾಸ್‌ ಸ್ಯಾಂಟ್ರೋ ರವಿಗೆ ಸೇರಿದ ಮನೆಗಳು ಹಾಗೂ ಕಚೇರಿ ಮೇಲೆ ಮೈಸೂರು ಪೊಲೀಸರು ದಾಳಿ ನಡೆಸಿ ಸೋಮವಾರ ಪರಿಶೀಲಿಸಿದ್ದಾರೆ.

ಬಸವನಗುಡಿ ಮತ್ತು ಶೇಷಾದ್ರಿಪುರದಲ್ಲಿನ ಮನೆಗಳು ಹಾಗೂ ಎಂ.ಜಿ.ರಸ್ತೆಯ ಟ್ರಿನಿಟಿ ಸರ್ಕಲ್‌ ಸಮೀಪದ ಕಚೇರಿಗೆ ತೆರಳಿ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶೋಧ ಮಾಡಿದ್ದಾರೆ. ಈ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿ ಪೊಲೀಸರು ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Karnataka Politics: ಶೀಘ್ರವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಘೋಷಣೆ

ಮೊದಲು ಶೇಷಾದ್ರಿಪುರ ಸಮೀಪದ ವಾಹಬ್‌ ಅಲ್ಟಿಮಾ ಅಪಾರ್ಚ್‌ಮೆಂಟ್‌ನಲ್ಲಿ ರವಿ ಒಡೆತನದ ಫ್ಲ್ಯಾಟ್‌ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆ ಫ್ಲ್ಯಾಟ್‌ನಲ್ಲಿ ಕೆಲ ಹೊತ್ತು ಪರಿಶೀಲಿಸಿದ್ದಾರೆ. ಆನಂತರ ಬಸವನಗುಡಿಗೆ ತೆರಳಿ ಶೋಧನಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನಾಲ್ಕೈದು ತಿಂಗಳ ಹಿಂದೆ ಶೇಷಾದ್ರಿಪುರದ ಫ್ಲ್ಯಾಟ್‌ ಅನ್ನು ಖಾಲಿ ಮಾಡಿದ್ದ ರವಿ, ಆನಂತರ ಬಸವನಗುಡಿಯಲ್ಲಿ ಮನೆ ಮಾಡಿ ವಾಸವಾಗಿದ್ದ ಎನ್ನಲಾಗಿದೆ. ಈ ಮನೆಗಳಲ್ಲದೆ ಎಂ.ಜಿ.ರಸ್ತೆಯ ಟ್ರಿನಿಟಿ ಸರ್ಕಲ್‌ ಬಳಿ ಕಚೇರಿ ಮಾಡಿಕೊಂಡು ಪೊಲೀಸ್‌ ವರ್ಗಾವಣೆ ದಂಧೆಯ ಡೀಲ್‌ ಅನ್ನು ಆತ ನಡೆಸುತ್ತಿದ್ದ ಎಂಬ ಮಾತುಗಳು ಕೇಳಿ ಬಂದಿವೆ.

ಸ್ಯಾಂಟ್ರೋ ರವಿ ಪ್ರಕರಣ: ವಿಪಕ್ಷಗಳಿಗೂ ಶಾಕ್‌ ನೀಡಿದ ಸಿಎಂ ಬೊಮ್ಮಾಯಿ

ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಆತನ ಪತ್ನಿ ವಂಚನೆ ದೂರು ದಾಖಲಿಸಿದ್ದಾರೆ. ಅಲ್ಲದೆ, ಪೊಲೀಸ್‌ ವರ್ಗಾವಣೆ ಕುರಿತು ಆತನ ಡೀಲ್‌ ಮಾತುಕತೆಯ ಆಡಿಯೋಗಳು ಬಹಿರಂಗೊಂಡು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿವೆ.