ಪೊಲೀಸರಿಗೇ ಸಂಸ್ಕೃತ ಪಾಠ!
ಸಂಸ್ಕೃತ ಪ್ರಾಚೀನ ಭಾಷೆಯಾಗಿದ್ದು, ಇತರೆ ಭಾಷೆಗಳನ್ನು ಕಲಿತಂತೆ ಸಂಸ್ಕೃತವನ್ನು ಕಲಿಯಬೇಕಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ನೀಡಿದಷ್ಟೇ ಆದ್ಯತೆಯನ್ನು ಸಂಸ್ಕೃತಕ್ಕೂ ನೀಡಬೇಕು. ಶೃಂಗೇರಿ ಪ್ರಮುಖ ಯಾತ್ರಾಸ್ಥಳವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪೊಲೀಸರು ಸಹ ದೇಗುಲದಲ್ಲಿ ಪ್ರಾಂಗಣದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರವಾಸಿಗರಲ್ಲಿ ಸಂಸ್ಕೃತ ಮಾತನಾಡುವವರು ಇರುತ್ತಾರೆ. ಆದಕಾರಣ ಪೊಲೀಸರು ಸಹ ಸಂಸ್ಕೃತ ಕಲಿಯುವುದು ಅನಿವಾರ್ಯ- ವೃತ್ತ ಆರಕ್ಷಕ ಪ್ರಮೋದ್ ಕುಮಾರ್
ಶೃಂಗೇರಿ[ನ.16]: ಬೆಂಗಳೂರಿನ ಸಂಸ್ಕೃತ ಭಾರತೀ ಹಾಗೂ ಮೆಣಸೆ ರಾಜೀವ್ ಗಾಂಧಿ ಸಂಸ್ಕೃತ ಕಾಲೇಜು ಪೊಲೀಸರಿಗೆ ‘ಸಂಸ್ಕೃತ’ ಕಲಿಸುವ ವಿನೂತನ ಪ್ರಯೋಗಕ್ಕೆ ಮುಂದಾಗಿವೆ. ಅದರಂತೆ ಶೃಂಗೇರಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರದಿಂದ ಅಧಿಕೃತವಾಗಿ ಸಂಸ್ಕೃತ ಕಲಿಕಾ ಶಿಬಿರವನ್ನು ಆರಂಭವಾಗಿದೆ.
ಈ ಕುರಿತು ಮಾತನಾಡಿದ ವೃತ್ತ ಆರಕ್ಷಕ ಪ್ರಮೋದ್ ಕುಮಾರ್, ಸಂಸ್ಕೃತ ಪ್ರಾಚೀನ ಭಾಷೆಯಾಗಿದ್ದು, ಇತರೆ ಭಾಷೆಗಳನ್ನು ಕಲಿತಂತೆ ಸಂಸ್ಕೃತವನ್ನು ಕಲಿಯಬೇಕಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ನೀಡಿದಷ್ಟೇ ಆದ್ಯತೆಯನ್ನು ಸಂಸ್ಕೃತಕ್ಕೂ ನೀಡಬೇಕು. ಶೃಂಗೇರಿ ಪ್ರಮುಖ ಯಾತ್ರಾಸ್ಥಳವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪೊಲೀಸರು ಸಹ ದೇಗುಲದಲ್ಲಿ ಪ್ರಾಂಗಣದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರವಾಸಿಗರಲ್ಲಿ ಸಂಸ್ಕೃತ ಮಾತನಾಡುವವರು ಇರುತ್ತಾರೆ. ಆದಕಾರಣ ಪೊಲೀಸರು ಸಹ ಸಂಸ್ಕೃತ ಕಲಿಯುವುದು ಅನಿವಾರ್ಯ ಎಂದಿದ್ದಾರೆ.
ಈ ಶಿಬಿರದಿಂದ ಪೊಲೀಸರು ಸಂಸ್ಕೃತ ಕಲಿಯುವ ಜತೆಗೆ, ಸಂಸ್ಕೃತವನ್ನು ಉಳಿಸಿ, ಬೆಳೆಸುವ ಕಾರ್ಯವೂ ನಡೆಯಲಿದೆ ಎಂದು ಹೇಳಿದ್ದಾರೆ.
ಸುಮಾರು 10 ದಿನಗಳ ಕಾಲ ಈ ಕಲಿಕಾ ಶಿಬಿರ ನಡೆಯಲಿದೆ. ಮೆಣಸೆ ರಾಜೀವ್ ಗಾಂಧಿ ಕಾಲೇಜಿನ ಬಿ.ಇಡಿ ಪದವಿ ವಿದ್ಯಾರ್ಥಿಗಳು, ಪಿ.ಎಚ್‌ಡಿ ವಿದ್ಯಾರ್ಥಿಗಳು ಪ್ರತಿದಿನ ಈ ಶಿಬಿರದಲ್ಲಿ ಒಂದು ಗಂಟೆಗಳ ಕಾಲ ಪೊಲೀಸರಿಗೆ ಸಂಸ್ಕೃತ ಭಾಷೆ ಬಗ್ಗೆ ತರಬೇತಿ ನೀಡಲಿದ್ದಾರೆ.