Asianet Suvarna News Asianet Suvarna News

ಕಾವೇರಿ ಹೋರಾಟಕ್ಕೆ ಕುಳಿತ ಮಂಡ್ಯದ ಗಂಡು ಅಂಬರೀಶ್‌ ಪುತ್ರ ಅಭಿಷೇಕ್‌: ಅಪ್ಪನಂತೆ ಬಿಗಿಪಟ್ಟು

ಕಾವೇರಿ ನೀರಿಗಾಗಿ ತಮ್ಮ ಪದವಿಯನ್ನೇ ತ್ಯಾಗ ಮಾಡಿದ್ದ ಮಂಡ್ಯದ ಗಂಡು ಅಭಿಷೇಕ್‌ ಅಂಬರೀಶ್‌ ಮಂಡ್ಯದ ರೈತರಿಗೆ ಬೆಂಬಲ ನೀಡಿ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

Sandalwood Actor Ambarish son Abhishek ambareesh entry to mandya farmers Cauvery struggle sat
Author
First Published Sep 22, 2023, 1:26 PM IST

ಮಂಡ್ಯ (ಸೆ.22): ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲಿಯೇ ಮಂಡ್ಯದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಕಾವೇರಿ ನೀರಿಗಾಗಿ ತಮ್ಮ ಪದವಿಯನ್ನೇ ತ್ಯಾಗ ಮಾಡಿದ್ದ ಮಂಡ್ಯದ ಗಂಡು ಅಭಿಷೇಕ್‌ ಅಂಬರೀಶ್‌ ಮಂಡ್ಯದ ರೈತರಿಗೆ ಬೆಂಬಲ ನೀಡಿ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಅಭಿಷೇಕ್‌ ಅಂಬರೀಶ್‌ ಅವರು, ನಾನು ಯುವಕನಾಗಿದ್ದೀನಿ. ಯಾವುದೇ ರಾಜಕೀಯ ದೃಷ್ಟಿಯಿಂದ ಇಲ್ಲಿ ಬಂದಿಲ್ಲ. ನಾನು ಚಿಕ್ಕದ್ದಿನಿಂದಾಗಲೂ ಕಾವೇರಿ ಹೋರಾಟ ನೋಡಿ ಬೆಳೆದವನು. ಅಪ್ಪಾಜಿ, ಅಮ್ಮ ಎಲ್ಲರೂ ಕಾವೇರಿ ಪರ ಹೋರಾಟ ಮಾಡಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುವ ಕೆಲಸವನ್ನ ಅಮ್ಮ ಮಾಡ್ತಾರೆ. ನಮ್ಮ ನೀರು ಬಿಟ್ರೆ ಮುಂದೆ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ. ನಮ್ಮ ನೀರು, ಜನಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು.

ವರನಟ ರಾಜ್‌ಕುಮಾರ್‌ ಬಳಿಕ ಕಾವೇರಿ ಹೋರಾಟಕ್ಕಿಳಿದ ದೊಡ್ಡಮನೆ ಕುಡಿ: ಪ್ರಾಣಾನೇ ಮುಡಿಪಾಗಿಡೋದಾಗಿ ಪ್ರಮಾಣ

ಕನ್ನಡ ಚಿತ್ರರಂಗ ಕಾವೇರಿ ವಿಚಾರದಲ್ಲಿ ಯಾವಾಗಲೂ ಬೆಂಬಲವಾಗಿ ಇದ್ದೇ ಇರುತ್ತದೆ. ಶೀಘ್ರದಲ್ಲೇ ಅದಕ್ಕೆ ಒಂದು ವೇದಿಕೆ ಸಿದ್ದವಾಗಲಿದೆ. ನಮ್ಮ ಬಳಿ ನೀರು ಇದ್ರೆ ತಮಿಳುನಾಡಿನವರು ನೀರು ಕೇಳಲಿ. ನಮ್ಮ ಬಳಿಯೇ ನೀರು ಇಲ್ಲದಿದ್ದಾಗ ಅವರಿಗೆ ನೀರು ಕೋಡೊದು ಹೇಗೆ.? ಎರಡೂ ರಾಜ್ಯ ಸರ್ಕಾರಗಳು ಕೂತು ಮಾತನಾಡಬೇಕು. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಬೇಕು ಎಂದು ಪ್ರತಿಭಟನೆಯಲ್ಲಿ ನಟ ಅಭಿಷೇಕ್ ಅಂಬರೀಶ್ ಹೇಳಿದರು.

ಕಾವೇರಿ ಹೋರಾಟಕ್ಕೆ ಸಾಥ್‌ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ: ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ನೀರಿನ ಕುರಿತ ರೈತರು ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಸಾಥ್‌ ನೀಡಿದರು. ಈ ವೇಳೆ ಮಾತನಾಡಿದ ನಿರ್ಮಲಾನಂದನಾಥ ಶ್ರೀಗಳು, ಹಲವು ದಶಕಗಳಿಂದ ಕರ್ನಾಟಕ ತಮಿಳನಾಡು ಮಧ್ಯೆ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆ ಮೇರೆಗೆ ಮೊದಲು ಕುಡಿಯುವುದಕ್ಕೆ ನೀರು ಕೊಡಬೇಕು ಅನಂತರ ವ್ಯವಸಾಯ, ಕೈಗಾರಿಕೆಗೆ ಕೊಡಬೇಕು ಎಂದರು.

ಸರ್ಕಾರದ ವಿರುದ್ಧ ಸಿಡಿದೆದ್ದ ಕನ್ನಡ ಸಾಹಿತ್ಯ ಪರಷತ್‌: ಕಾವೇರಿ ಹೋರಾಟಕ್ಕೆ ಬೆಂಬಲ

ಸಂಕಷ್ಟ ಸೂತ್ರ ರಚಿಸದಿರುವುದು ಬೇಸರದ ಸಂಗತಿ: ಪ್ರತಿವರ್ಷ ತಮಿಳುನಾಡಿಗೆ 419TMC ನೀರು, ಕರ್ನಾಟಕಕ್ಕೆ  270TMC ನೀರು ನಿಗದಿ ಮಾಡಲಾಗಿದೆ. ಆದರೆ, ‌ಮಳೆ ಕಡಿಮೆಯಾದ ಸಂಧರ್ಭದಲ್ಲಿ ನೀರು ಹಂಚಿಕೆ ಸಮಸ್ಯೆ ಎದುರಾಗುತ್ತದೆ. ಆಗ ಸಂಕಷ್ಟ ಸೂತ್ರ ರಚಿಸಬೇಕಿತ್ತು. ಈ ವರ್ಷ ಮಳೆ ಅಭಾವದಿಂದ ನಮ್ಮಲ್ಲಿ ಬೆಳೆಗೆ ಬಿಡಿ, ಕುಡಿಯಲು ನೀರು ಸಿಗದಂತಾಗಿದೆ. ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಒಂದೆಡೆ ನೀರು ಇಲ್ಲದಿದ್ರೆ ಬೆಳೆ ಒಣಗುವುದು ಒಂದೆಡೆಯಾದರೆ ಇನ್ನೊಂದೆಡೆ ಕುಡಿಯಲು ನೀರು ಸಿಗದಿದ್ದರೆ ಮನುಷ್ಯನೇ ಒಣಗಿ ಹೋಗುತ್ತಾನೆ. ಸದ್ಯ ಬೆಳೆಗಿಂತ ಮನುಷ್ಯ ಅಸ್ತಿತ್ವವೇ ಈಗ ಪ್ರಶ್ನೆ ಆಗಿದೆ. ತಮಿಳುನಾಡು ಬೆಳೆಗೆ ನೀರು ಕೇಳುತ್ತದೆ ನಮಗೆ ಕುಡಿಯುಲು ನೀರು ಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು ಎಂದು ತೀರ್ಪಿನ ವಿರುದ್ಧ ಬೇಸರ ವ್ಯಕ್ತಪಡಿಸಿದರು.

Follow Us:
Download App:
  • android
  • ios