ಭಜರಂಗದಳ ಹಾಗೂ ವಿ ಎಚ್ ಪಿ ಸಂಘಟನೆಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಹಿಂದೂ ದೇವರ ಫೊಟೊಗಳನ್ನು ಸುಡುವ ಬಗ್ಗೆ ಖಡಕ್ ಎಚ್ಚರಿಕೆ ನೀಡಿವೆ.
ಬೆಂಗಳೂರು : ಹಿಂದೂ ದೇವರುಗಳನ್ನು ಸುಡುವುದನ್ನು ತಡೆಯಬೇಕೆಂದು ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಭಜರಂಗದಳ ಹಾಗೂ ವಿ ಎಚ್ ಪಿ ಸಂಘಟನೆಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಎಚ್ಚರಿಕೆ ನೀಡಿವೆ.
ಪ್ರತಿ ಬಾರಿ ದೀಪಾವಳಿ ದಿನ ಪಟಾಕಿ ಸುಡುತ್ತಾರೆ. ಆದರೆ ಅದರ ಮೇಲೆ ದೇವರುಗಳ ಫೋಟೊ ಇರುತ್ತದೆ. ನಾವು ಹಿಂದುಗಳು ಲಕ್ಷ್ಮೀ ಗಣೇಶನನ್ನು ಪೂಜೆ ಮಾಡುತ್ತೇವೆ. ಫೋಟೊ ಸುಟ್ಟಾಗ ಅದರ ಮೇಲಿನ ದೇವರ ಫೊಟೊಗಳು ಛಿದ್ರವಾಗುತ್ತವೆ. ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಆಗಬಾರದು. ಈ ರೀತಿ ದೇವರ ಫೋಟೊಗಳನ್ನು ಸುಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಭಜರಂಗದಳಸ ಸರಸಂಘಚಾಲಕ ಶಿವಕುಮಾರ್ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 5, 2018, 1:43 PM IST