ಬೆಂಗಳೂರು(ನ.01): ಮೆಟ್ರೋದ 2ನೇ ಹಂತದ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ಆರ್‌.ವಿ.ರಸ್ತೆ ನಿಲ್ದಾಣದ ವಾಯುವ್ಯ ಭಾಗದಲ್ಲಿರುವ ಪ್ರವೇಶ ದ್ವಾರವನ್ನು ನ.2ರಿಂದ ಮುಚ್ಚಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ.

ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣದ ವಾಯುವ್ಯ ಭಾಗದ ಪ್ರವೇಶ ದ್ವಾರದಲ್ಲಿ ಮೆಟ್ಟಿಲು ಹಾಗೂ ಲಿಫ್ಟ್‌ ಸೌಲಭ್ಯ ಇರುವುದಿಲ್ಲ. ಪ್ರಯಾಣಿಕರು ಆರ್‌.ವಿ.ರಸ್ತೆ ನಿಲ್ದಾಣದ ಪೂರ್ವ ಭಾಗದ ಪ್ರವೇಶವನ್ನು ಮಾತ್ರ ಬಳಸಬಹುದು. ನೆಲದಿಂದ ಕಾನ್ಕೋರ್ಸ್‌ಗೆ ಲಿಫ್ಟ್‌ ಸೌಲಭ್ಯ ಅಗತ್ಯವಿರುವ ಪ್ರಯಾಣಿಕರು ತಮ್ಮ ಪ್ರಯಾಣಕ್ಕಾಗಿ ಮುಂದಿನ ನಿಲ್ದಾಣವನ್ನು (ಜಯನಗರ ಅಥವಾ ಬನಶಂಕರಿ ನಿಲ್ದಾಣಗಳನ್ನು) ಬಳಸಬಹುದು ಎಂದು ಮೆಟ್ರೋ ನಿಗಮ ಮಾಹಿತಿ ನೀಡಿದೆ.

ವೇತನ ಗೊಂದಲ, ಪೊಲೀಸರಿಗೆ ಶೀಘ್ರ ಸಿಹಿ ಸುದ್ದಿ..!

ಮೆಟ್ರೋ ಪ್ರಯಾಣಿಕರಿಗೆ ಅನಾನುಕೂಲ ಆಗದಿರಲೆಂದು ಹಂತ ಹಂತವಾಗಿ ಮಾರ್ಪಾಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣದ ಇಂಟಿಗ್ರೇಷನ್‌ಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಟು ಮಾಡುವ ಉದ್ದೇಶದಿಂದ ನಿಲ್ದಾಣದ ನೈಋುತ್ಯ ಭಾಗದ ಪ್ರವೇಶವನ್ನು ಆ.1ರಿಂದ ನಿರ್ಬಂಧಿಸಲಾಗಿತ್ತು. ಈ ನಿಲ್ದಾಣದ ನೈಋುತ್ಯ ಭಾಗದ ಪ್ರವೇಶ ದ್ವಾರವು ಪ್ಲಾಟ್‌ಫಾರಂಗೆ ಸಂಪರ್ಕ ಕಲ್ಪಿಸಿತ್ತು.

ಪೊಲೀಸ್‌ ನೇಮಕಾತಿ ವಯಸ್ಸು ಹೆಚ್ಚಳ ಮನವಿಗೆ ಸಿಎಂ ಸ್ಪಂದನೆ.

ಇದೀಗ ವಾಯುವ್ಯ ಭಾಗದ ಪ್ರವೇಶ ದ್ವಾರವನ್ನು ನಿರ್ಬಂಧಿಸಲಾಗಿದೆ. ಹೆಚ್ಚಿನ ವೆಚ್ಚ ತಗ್ಗಿಸಲು ಮತ್ತು ಲಕ್ಷ್ಮಣ್‌ರಾವ್‌ ಉದ್ಯಾನದಲ್ಲಿನ ಮರಗಳ ಹನನವನ್ನು ತಪ್ಪಿಸಲು ಈ ನಿಲ್ದಾಣದ ಮಾರ್ಪಾಡು ಅಗತ್ಯ ಮತ್ತು ಅನಿವಾರ್ಯ. ಆದ್ದರಿಂದ ಪ್ರಯಾಣಿಕರು ಸಹಕರಿಸಬೇಕು ಎಂದು ಮೆಟ್ರೋ ನಿಗಮ ಮನವಿ ಮಾಡಿದೆ.