'ಸರ್ಕಾರದಿಂದ ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನ ಸ್ಥಗಿತ'
- ಕೋವಿಡ್ ನೆಪ ಹೇಳಿ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನಗಳನ್ನು ಸರ್ಕಾರ
- ಕೇವಲ ಟೊಳ್ಳು ಆಶ್ವಾಸನೆ ನೀಡುತ್ತಾ ಜನತೆಯ ದಾರಿ ತಪ್ಪಿಸುತ್ತಿದೆ
ಹಾನಗಲ್ (ಅ.25): ಕೋವಿಡ್ (Covid) ನೆಪ ಹೇಳಿ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನಗಳನ್ನು (Pension) ಸರ್ಕಾರ ನಿಲ್ಲಿಸಿದ್ದು, ಕೇವಲ ಟೊಳ್ಳು ಆಶ್ವಾಸನೆ ನೀಡುತ್ತಾ ಜನತೆಯ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ (RV Deshpande) ಕಿಡಿಕಾರಿದ್ದಾರೆ.
ಹಾನಗಲ್ (Hanagal) ತಾಲೂಕಿನ ಕತ್ತರಿಕೊಪ್ಪ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಉಪ ಚುನಾವಣೆ (By election) ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಡಬಲ್ ಎಂಜಿನ್ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ? ಬಿಜೆಪಿಗೆ (BJP) ಅನುಕೂಲ ಮಾಡಲು ಜೆಡಿಎಸ್ (JDS) ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜೆಡಿಎಸ್ ಮತ ಬಿಜೆಪಿಗೆ ಸಹಾಯ ಮಾಡಲಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಹೇಳಿದರು. ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆ ಮಾಡಿರುವುದೇ ಬಿಜೆಪಿ ಸಾಧನೆ. ಇದರಿಂದ ಕಾರ್ಮಿಕರಿಗೆ (labour), ಕೂಲಿಕಾರರಿಗೆ ತೊಂದರೆ ಆಗಿದೆ. ಇವೆಲ್ಲ ಬೆಳವಣಿಗೆ ಆಡಳಿತ, ಪ್ರತಿಪಕ್ಷಗಳಿಗೆ ಗೌರವ ತರುವುದಿಲ್ಲ ಎಂದರು.
ಅಸಮಾಧಾನ
ಜೋಯಿಡಾ-ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಇಬ್ಭಾಗವಾಗುವುದೇ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಶಾಸಕ ಆರ್.ವಿ. ದೇಶಪಾಂಡೆ-ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ನಡುವೆ ಹಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡ ಅಭ್ಯರ್ಥಿ ಎಂದು ಘೋಟ್ನೇಕರ್ ಘೋಷಿಸಿದ್ದಾರೆ. ಜತೆಗೆ ಹಲವು ದಿನಗಳಿಂದ ಜನರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆರ್.ವಿ. ದೇಶಪಾಂಡೆ ಮುಂದಿನ ನಡೆ ಏನು? ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ? ಎನ್ನುವ ಕುತೂಹಲ ಜನರಲ್ಲಿದೆ.
ಹಳಿಯಾಳ, ದಾಂಡೇಲಿ, ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಘೋಟ್ನೇಕರ್ ಅವರನ್ನು ಸಾಕಷ್ಟು ಕಾಡಿಸುತ್ತಿದ್ದಾರೆ. ಅವರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ಅಸಡ್ಡೆ ತೋರಿಸುತ್ತಿರುವುದು, ಅವರ ಬಗ್ಗೆ ಶಾಸಕ ದೇಶಪಾಂಡೆ ಅವರಿಗೆ ತಪ್ಪುಕಲ್ಪನೆ ಮೂಡಿಸುತ್ತಿರುವುದು, ಕೆಲವೇ ಕೆಲವರ ಗುಂಪು ಕಟ್ಟಿತಮ್ಮವರ ಕೆಲಸ ಅಷ್ಟೇ ಮಾಡುವುದು, ಹಲವಾರು ಕಾಮಗಾರಿಗಳನ್ನು ತಮಗೆ ಹೇಗೆ ಬೇಕೋ ಹಾಗೆ ದೇಶಪಾಂಡೆ ಅವರಿಂದ ಮಾಡಿಸಿಕೊಳ್ಳುವುದು ಕಾಂಗ್ರೆಸ್‌ನ ಒಂದು ವಲಯದವರ ಆಕ್ರೋಶಕ್ಕೆ ಕಾರಣವಾಗಿದೆ.