Russia Ukraine Crisis: ಕೋಡಿಮಠ ಸ್ವಾಮೀಜಿ ಹೇಳಿದ್ದ ಭವಿಷ್ಯ ನಿಜವಾಗಿ ಹೋಗಲಿದೆಯೇ?

ಉಕ್ರೇನ್ ದೇಶದ ಮೇಲೆ ಸಮರ ಸಾರಿದ ರಷ್ಯಾ
ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಹೇಳಿದ್ದ ಭವಿಷ್ಯ ಇದೇನಾ?
ಜಗತ್ತಿನ ಒಂದು ದೇಶ ಭೂಪಟದಿಂದ ಅಳಿಸಿ ಹೋಗಲಿದೆ ಎಂದಿದ್ದರು ಸ್ವಾಮೀಜಿ

Russia Ukraine Crisis kodimatha swamiji prediction on Nation san

ಬೆಂಗಳೂರು (ಫೆ.24): ಉಕ್ರೇನ್ (Ukraine) ಮೇಲೆ ಸಮರ ಘೋಷಣೆ ಮಾಡಿರುವ ರಷ್ಯಾ (Russia), ಕ್ಷಣಗಳು ಕಳೆದಂತೆ ಹೊಸ ಹೊಸ ಪ್ರದೇಶಗಳನ್ನು ಕೈವಶ ಮಾಡಿಕೊಳ್ಳುತ್ತಿದೆ. ಈಗಾಗಲೇ ಹಲವು ಸಾವುನೋವುಗಳ ಬಗ್ಗೆ ವರದಿಯಾಗಿದ್ದು, ಮುಂದೊಂದು ದಿನ ಉಕ್ರೇನ್ ಎನ್ನುವ ದೇಶವಿತ್ತು ಎನ್ನುವ ಸುಳಿವೇ ಇಲ್ಲದಂತೆ ಮಾಡುವ ಎಲ್ಲಾ ಪ್ರಯತ್ನಗಳನ್ನು ರಷ್ಯಾ ಮಾಡುತ್ತಿದೆ. ವಿಶೇಷ ಮಿಲಿಟರಿ ಕಾರ್ಯಾಚರಣೆ (military operation) ಎಂದು ರಷ್ಯಾ ಹೇಳಿದ್ದರೂ, ಉಕ್ರೇನ್ ದೇಶದ ಮೇಲೆ ದಶದಿಕ್ಕುಗಳಿಂದಲೂ ದಾಳಿ ಮಾಡುತ್ತಿರುವ ರಷ್ಯಾ, ಯಾವ ವಿರೋಧವಿಲ್ಲದಿದ್ದರೆ ಕೆಲವೇ ದಿನಗಳಲ್ಲಿ ಉಕ್ರೇನ್ ನ ಮೇಲೆ ಅಧಿಪತ್ಯ ಸ್ಥಾಪನೆ ಮಾಡಲಿದೆ.

ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರದ ನಡುವೆ ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ (Shivananda Rajendra Swamiji ) ಹೇಳಿರುವ ಭವಿಷ್ಯ ನಿಜವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅಂದಾಜು ಎರಡು ವರ್ಷದ ಹಿಂದೆ ಕೋಡಿಮಠದ ಸ್ವಾಮೀಜಿ (kodimatha Swamiji ) ಒಂದು ಭವಿಷ್ಯ (Prediction)ನುಡಿದಿದ್ದರು. "ಮುಂದಿನ ಎರಡು ವರ್ಷಗಳಲ್ಲಿ ಜಗತ್ತಿನ ಒಂದು ದೇಶ ಭೂಪಟದಿಂದ ಅಳಿಸಿ ಹೋಗಲಿದೆ' ಎಂದು ಹೇಳಿದ್ದರು. ಆಗ ಈ ಭವಿಷ್ಯ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ವಿಚಾರ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಅದರ ನಿಜವಾದ ಅರ್ಥ ಉಕ್ರೇನ್ ದೇಶ ಎನ್ನುವುದೀಗ ಅರ್ಥವಾಗಿದೆ.

ಅದರೊಂದಿಗೆ ಈ ವರ್ಷದ ಆರಂಭದಲ್ಲಿ ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಕೋಡಿಮಠದ ಶ್ರೀಗಳು, ಈ ವರ್ಷ ಜಗತ್ತಿಗೆ ಗಾಳಿ ಗಂಡಾಂತರ ಕಾದಿದೆ ಎಂದು ಹೇಳಿದ್ದರು. ಅದರಂತೆ ಜಗತ್ತು ವಾಯುಮಾಲೀನ್ಯದಂಥ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿರುವ ವೇಳೆ ವಿಶ್ವದ ದೊಡ್ಡ ದೇಶಗಳ ಪೈಕಿ ಒಂದಾದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಏರ್ಪಡುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

ಉಕ್ರೇನ್‌ನ (Ukraine) ಮೇಲೆ ರಷ್ಯಾದ (Russia) ಆಕ್ರಮಣದ ಮೊದಲ ಗಂಟೆಗಳಲ್ಲಿ 40 ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಮತ್ತು ಸುಮಾರು 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಹಾಯಕ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. "40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ನನಗೆ ತಿಳಿದಿದೆ. ಸುಮಾರು 10 ನಾಗರಿಕರ ಸಾವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ" ಎಂದು ಅಧ್ಯಕ್ಷೀಯ ಆಡಳಿತದ ಸಹಾಯಕ ಒಲೆಕ್ಸಿ ಅರೆಸ್ಟೋವಿಚ್ (Oleksiy Arestovych) ಸುದ್ದಿಗಾರರಿಗೆ ತಿಳಿಸಿದರು.

Russia Ukraine Crisis: ಶರಣಾಗೋದಿಲ್ಲ, ಕೊನೇ ತನಕ ಹೋರಾಡ್ತೀವಿ ಎಂದ ಉಕ್ರೇನ್!
ಪ್ರತಿಭಟನೆ ಮಾಡುವವರಿಗೆ ರಷ್ಯಾ ಎಚ್ಚರಿಕೆ: ಉಕ್ರೇನ್ ಮೇಲೆ ಕಾರ್ಯಾಚರಣೆ ಮಾಡುತ್ತಿರುವ ಬೆನ್ನಲ್ಲಿಯೇ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು (anti-war sympathisers) ಜೋರಾಗಿವೆ. ಈ ಕುರಿತಾಗಿ ಎಚ್ಚರಿಕೆ ನೀಡಿರುವ ರಷ್ಯಾದ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ (Protest) ನಡೆಸುವಂತಿಲ್ಲ. ಪ್ರತಿಭಟನೆ ನಡೆಸುವ ವ್ಯಕ್ತಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಬಂಧನ ಮಾಡಿ ಎಂದು ಸೂಚನೆ ನೀಡಲಾಗಿದೆ.

Russia Ukraine Crisis: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕದ ಎಂಬಿಬಿಎಸ್ ವಿದ್ಯಾರ್ಥಿ!
ಯುರೋಪಿಯನ್ ಒಕ್ಕೂಟಗಳ (European Union) ಮುಖ್ಯಸ್ಥ ಚಾರ್ಲ್ಸ್ ಮೈಕೆಲ್ (Charles Michel), ಉಕ್ರೇನ್ ನ ಮೇಲೆ ಆಕ್ರಮಣ ಮಾಡುತ್ತಿರುವ ಮಾಸ್ಕೋ (Mascow) ವಿರುದ್ಧ ಹೊಸ ನಿರ್ಬಂಧಗಳನ್ನು (new sanctions) ನಿರ್ಧರಿಸಲು ತುರ್ತು ಯುರೋಪಿಯನ್ ಯೂನಿಯನ್ ಶೃಂಗಸಭೆ (European Union Summit) ನಡೆಸಲಿದ್ದಾರೆ. ಅದಕ್ಕೂ ಮುನ್ನ, ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ದಾಳಿಯಲ್ಲಿ ಯಾವುದೇ ಕಾರಣಕ್ಕೂ "ಭಾಗವಹಿಸಬಾರದು" ಎಂದು ಬೆಲಾರಸ್ (belarus) ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios