ಶಿಕ್ಷಣ ಇಲಾಖೆಯಿಂದ ಮತ್ತೊಂದು ಎಡವಟ್ಟು; SSLC ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರುವಂತೆ ಮೌಖಿಕ ಆದೇಶ!

ಶಿಕ್ಷಣ ಇಲಾಖೆ ಇಲಾಖೆ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ವಿದ್ಯಾರ್ಥಿಗಳಿಂದ ಪರೀಕ್ಷೆ ಶುಲ್ಕ ವಸೂಲಿ, ಘೋಷವಾಕ್ಯ ಬದಲಾವಣೆ ವಿವಾದ ಆಯ್ತು ಇದೀಗ ಹತ್ತನೇ ತರಗತಿ ಪೂರ್ವಸಿದ್ಧತಾ ಪರೀಕ್ಷೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರುವಂತೆ ಶಿಕ್ಷಣ ಇಲಾಖೆ ಮೌಖಿಕ ಆದೇಶ ನೀಡಿದೆ ಎನ್ನಲಾಗಿದೆ. ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RUPSA President Lokesh Talikatte outraged against Madhu bangarappa at bengaluru rav

ಬೆಂಗಳೂರು (ಫೆ.22): ಶಿಕ್ಷಣ ಇಲಾಖೆ ಇಲಾಖೆ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ಪ್ರವೇಶದ್ವಾರದ ಮೇಲೆ ಹಾಕಲಾಗಿದ್ದ ಕೈಮುಗಿದು ಬನ್ನಿ ಘೋಷವಾಕ್ಯದ ಬದಲಾಗಿ ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ ವಿವಾದ ಸೃಷ್ಟಿ ಮಾಡಿತ್ತು. ಸಾರ್ವಜನಿಕ ಆಕ್ರೋಶ, ಖಂಡನೆ ವ್ಯಕ್ತವಾಗುತ್ತಿದ್ದಂತೆ, ಯುಟರ್ನ್ ಹೊಡೆದ ಸರ್ಕಾರ ಹಾಗೆ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿ ಮತ್ತೆ ಯಥಾಸ್ಥಿತಿ ಘೋಷವಾಕ್ಯ ಬರೆಸಿತು. ಅದಾದ ಮೇಲೆ ಮತ್ತೆ ಸರ್ಕಾರ ಖಾಸಗಿ ಶಾಲೆಗಳಲ್ಲಿ ಇನ್ನುಮುಂದೆ ನಾಡಗೀತೆ ಕಡ್ಡಾಯವಲ್ಲ ಎಂಬಂತ ಹೇಳಿಕೆ ನೀಡಿ ಆದೇಶ ಹೊರಡಿಸಿತು. ಇಲ್ಲಿಯೂ ಸಹ ಸರ್ಕಾರದ ಆದೇಶಕ್ಕೆ (Congress Government) ವಿರೋಧ ವ್ಯಕ್ತವಾಗುತ್ತಿದ್ದಂತೆ ಎಲ್ಲ ಶಾಲೆಗಳಿಗೆ ಕಡ್ಡಾಯ ಎಂದಿತು. ಇದೀಗ ಹತ್ತನೇ ತರಗತಿ ಪರೀಕ್ಷೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂದು ಮೌಖಿಕ ಸೂಚನೆ ನೀಡಿ ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಶಾಲೆಗಳಲ್ಲಿ ‘ಕೈಮುಗಿದು ಬನ್ನಿ’ ಬದಲು ‘ಪ್ರಶ್ನಿಸಿ’ ವಿವಾದಕ್ಕೆ ಪ್ರೇರಣೆ ಯಾರು?

ಹೌದು ಇತ್ತೀಚೆಗೆ ಪರೀಕ್ಷೆ ವೆಚ್ಚವೆಂದು ವಿದ್ಯಾರ್ಥಿಗಳಿಂದ 50 ರೂ, ವಸೂಲಿ ಮಾಡಿದ್ದ ಸರ್ಕಾರ. ಪರೀಕ್ಷೆ ಶುಲ್ಕ ವಸೂಲಿ ಮಾಡಿದ್ದಲ್ಲದೇ ಇದೀಗ ಹತ್ತನೇ ತರಗತಿಗೆ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನ ತರುವಂತೆ ಶಾಲೆಯಿಂದ ಮೌಖಿಕ ಸೂಚನೆ ನೀಡಿದೆ ಎಂಬ ಮಾಹಿತಿ ಬಂದಿದೆ. ಈ ಸಂಬಂಧ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದು, ಮಕ್ಕಳಿಂದ ಉತ್ತರ ಪತ್ರಿಕೆ ತರುವಂತೆ ಹೇಳಿರುವ ಶಿಕ್ಷಣ ಇಲಾಖೆ ನಡೆಯನ್ನು ಖಂಡಿಸಿದ್ದಾರೆ.

ಪರೀಕ್ಷೆ ವೆಚ್ಚವೆಂದು ಶಾಲಾ ಮಕ್ಕಳಿಂದ 50ರೂ. ವಸೂಲಿ ಮಾಡಿದ್ದಲ್ಲದೆ ಈಗ ಪತ್ರಿಕೆಗಳನ್ನ ವಿದ್ಯಾರ್ಥಿಗಳೇ ತರಬೇಕು ಎಂದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಪರೀಕ್ಷೆ ವೇಳೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ರೀತಿ ಮಾಡುತ್ತಿದ್ದಾರೆ ಎಂದು ನನಗನಿಸುತ್ತಿದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೂರ್ವಸಿದ್ಧತೆ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂದು ಶಾಲೆಗಳಿಗೆ ಕೊಟ್ಟಿರುವ ಮೌಖಿಕ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.

ಕೈ ಮುಗಿದು ಒಳಗೆ ಬಾ, ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆದರೆ ತಪ್ಪೇನು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಒಂದಾದ ಮೇಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ. ಮೊದಲಿಗೆ ಏನೋ ಮಾಡಲು ಹೋಗುತ್ತೆ. ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಯುಟರ್ನ್ ಹೊಡೆಯುತ್ತೆ. ಇದೀಗ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ತರುವ ಮೌಖಿಕ ಆದೇಶವೂ ಸಹ ಸಾರ್ವಜನಿಕರ ಅಥವಾಕ ಪೋಷಕರ ಆಕ್ರೋಶ ಗುರಿಯಾಗುವ ಸಾಧ್ಯತೆ ಇದೆ. 

Latest Videos
Follow Us:
Download App:
  • android
  • ios