ಬೆಂಗಳೂರು, (ಏ.15): ಕೊರೋನಾ ಸೋಂಕನ್ನು ನಿಯಂತ್ರಿಸಲು ಬಿಎಸ್‌ವೈ ನೇತೃತ್ವದ ಬಿಎಸ್‌ವೈ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಅಲ್ಲದೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಯಡಿಯೂರಪ್ಪ ಆರ್ಥಿಕ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಮನವಿ ಮೇರೆಗೆ  ಉದ್ಯಮಿಗಳು, ಸೆಲೆಬ್ರಿಟಿಗಳು, ಜನಪ್ರತಿನಿಧಿಗಳು, ಮಠಾಧೀಶರು ಕೈ ಜೋಡಿಸಿದ್ದು,  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡುತ್ತಿದ್ದಾರೆ. 

ಕುಸಿದು ಹೋಗಿರುವ ಆರ್ಥಿಕತೆಗೆ ಟಾನಿಕ್ ನೀಡಲು ಸಿಎಂ ಮಾಸ್ಟರ್ ಪ್ಲಾನ್

ಇದೀಗ ಖಾತೆಗೆ ಜಮೆಯಾಗಿರುವ ಮೊತ್ತದ ಬಗ್ಗೆ ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟಾರೆ 138 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ. 

ಮಾರ್ಚ್‌ 27 ರಿಂದ ಏಪ್ರಿಲ್‌ 15ರ ವರೆಗೆ ಒಟ್ಟು 138,26,87,588 ರೂಪಾಯಿ ದೇಣಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಖಾತೆಗೆ ಜಮೆಯಾಗಿದೆ. 

ಇದರಲ್ಲಿ 137,39,87,587 ರೂಪಾಯಿ ಮೊತ್ತ ನೇರವಾಗಿ ಜಮೆಯಾಗಿದ್ದರೆ, ಚೆಕ್ ಮೂಲಕ 87 ಲಕ್ಷ ರೂಪಾಯಿ ಸಿಎಂ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹವಾಗಿದೆ ಬಿಎಸ್‌ವೈ ಮಾಹಿತಿ ನೀಡಿದ್ದಾರೆ.ಕೊರೋನಾ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಡಿಎ ವ್ಯಾಪ್ತಿಯ 12 ಸಾವಿರ ಸಿಎ ಸೈಟ್‌ ಹರಾಜಿಗೆ ನಿರ್ಧಾರ ಮಾಡಿದೆ. ಈ ಸಿಎ ಸೈಟ್‌ ಹರಾಜಿನಿಂದ 14-15 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ ಇಟ್ಟುಕೊಂಡಿದೆ.