Asianet Suvarna News Asianet Suvarna News

ಬದಲಾಗುತ್ತಾ ಲೈಂಗಿಕ ವೃತ್ತಿ ನಿರತ ಮಹಿಳೆಯರ ಜೀವನ.?

ರಾಜ್ಯ ಬಜೆಟ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರ ಶ್ರೇಯೋಭಿವೃದ್ಧಿ ಕುರಿತ ಜಯಮಾಲ ಅಧ್ಯಕ್ಷತೆಯ ಸಮಿತಿಯ ವರದಿಗೆ  ಸ್ಪಂದಿಸದ ಹಾಗೂ ಹಾಲಿ ಬಜೆಟ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಯಾವ ಕಾರ್ಯಕ್ರಮವನ್ನೂ ರೂಪಿಸದ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಇದೀಗ ಸಮಿತಿಯ ಸದಸ್ಯರಲ್ಲೇ ಒಬ್ಬರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ.

Roopa Hassan UnHappy Over Karnataka Govt Budget
Author
Bengaluru, First Published Jul 18, 2018, 8:26 AM IST

ಬೆಂಗಳೂರು :  ರಾಜ್ಯ ಬಜೆಟ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರ ಶ್ರೇಯೋಭಿವೃದ್ಧಿ ಕುರಿತ ಜಯಮಾಲ ಅಧ್ಯಕ್ಷತೆಯ ಸಮಿತಿಯ ವರದಿಗೆ  ಸ್ಪಂದಿಸದ ಹಾಗೂ ಹಾಲಿ ಬಜೆಟ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಯಾವ ಕಾರ್ಯಕ್ರಮವನ್ನೂ ರೂಪಿಸದ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಇದೀಗ ಸಮಿತಿಯ ಸದಸ್ಯರಲ್ಲೇ ಒಬ್ಬರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ.

ಹಾಗೆಯೇ ವಿವಿಧ ಇಲಾಖೆಗಳಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಹಾಗೂ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಅವರು ಆಯೋಗಕ್ಕೆ ದೂರು ದಾಖಲಿಸಿದ್ದಾರೆ.

ಸರ್ಕಾರದ 20 ಕ್ಕೂ ಹೆಚ್ಚು ಇಲಾಖೆಗಳಿಂದ ಒಟ್ಟು 277 ಯೋಜನೆಗಳು ಮಹಿಳೆಯರಿಗಾಗಿ ಮೀಸಲಾಗಿವೆ. ಮಹಿಳೆಯರ ಜೀವನಮಟ್ಟ ಸುಧಾರಣೆಗಾಗಿ ವಾರ್ಷಿಕ ಕೋಟಿಗಟ್ಟಲೆ ವ್ಯಯ ಮಾಡುತ್ತಿದ್ದರೂ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗಾಗಿ ಇರುವ ಯೋಜನೆಗಳು ಶೇ.0.7ಕ್ಕಿಂತಲೂ ಕಡಿಮೆ. ಈಗಾಗಲೇ ಮಾಹಿತಿ ವಿನಿಮಯ ಮತ್ತು ವಿವಿಧ ಇಲಾಖೆಗಳ ಸಮನ್ವಯದ ಕೊರತೆಯಿಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.

ಹೀಗಿದ್ದರೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ. ಇದು ಸರ್ಕಾರದ ನಿರ್ಲಕ್ಷ್ಯತನಕ್ಕೆ ಕನ್ನಡಿ ಹಿಡಿದಂತಿದೆ.  ಸರ್ಕಾರವೇ ಹೀಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಲೈಂಗಿಕ ಕಾರ್ಯಕರ್ತರು, ಮಹಿಳೆಯರು, ಮಕ್ಕಳ ಸಬಲೀಕರಣವಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

ನಿರ್ಜೀವಗೊಂಡ ‘ಚೇತನಾ’: ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿಗಾಗಿ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ‘ಚೇತನಾ’ ಯೋಜನೆಯಲ್ಲಿ ದಮನಿತರ ಸಂಖ್ಯೆಯನ್ನು ವಾರ್ಷಿಕ 10  ಸಾವಿರಕ್ಕೆ ಏರಿಸಿ  ಸಹಾಯಧನವನ್ನೂ ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ವಿಪರ್ಯಾಸವೆಂದರೆ, ವರದಿ ಸಲ್ಲಿಕೆಯಾದ ನಂತರ 1000 ಫಲಾನುಭವಿಗಳ ಗುರಿಯನ್ನು 325 ಕ್ಕೆ ಇಳಿಸಲಾಗಿದೆ! ಈ ವರ್ಷ ಕೇವಲ 403 ಮಂದಿಗೆ ಪುನರ್ವಸತಿ ಕಲ್ಪಿಸಲು ಯೋಜಿಸಲಾಗಿದೆ. 

ಇಷ್ಟು ಕಡಿಮೆ ಸಂಖ್ಯೆಯಲ್ಲಿ ದಮನಿತರನ್ನು ವಾರ್ಷಿಕವಾಗಿ ಪುನರ್ವಸತಿಗೊಳಿಸುವುದಾದರೆ ಅಧ್ಯಯನ ಕೈಗೊಳ್ಳುವ ಅಗತ್ಯವಾದರೂ ಏನಿತ್ತು?ಇತರ ಅಭಿವೃದ್ಧಿ ಇಲಾಖೆಗಳಿಗೆ ಸಬಲೀಕರಣದ ಜವಾಬ್ದಾರಿ ಹಂಚಿಕೆ ಮಾಡಿರುವುದರಿಂದ ಸರಿಯಾದ ಪುನರ್ವಸತಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ ಎನ್ನುತ್ತಾರೆ ರೂಪಾ ಹಾಸನ.

(ಸಾಂದರ್ಬಿಕ ಚಿತ್ರ )

Follow Us:
Download App:
  • android
  • ios