IAS vs IPS ಸಮರಕ್ಕೆ ಮತ್ತೊಂದು ಟ್ವಿಸ್ಟ್‌: ವೈಯಕ್ತಿಕ ವೇದನೆಯಿಂದಾಗಿ ರೂಪಾ ಮೌದ್ಗಿಲ್​​ ಸಮರ..?

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ಆಡಿಯೋ ಬಾಂಬ್‌ ಬಗ್ಗೆ ಐಪಿಎಸ್‌ ಅಧಿಕಾರಿ ಡಿ. ರೂಪಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

rohini sindhuri d roopa war twist ips officers audio leaked with rti officer gangaraju ash

ಬೆಂಗಳೂರು (ಫೆಬ್ರವರಿ 22, 2023): ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್‌ ಅಧಿಕಾರಿ ಡಿ.ರೂಪಾ ವಾರ್​ಗೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ರಾಜ್ಯ ಸರ್ಕಾರ ಇವರಿಬ್ಬರಿಗೂ ನೋಟಿಸ್‌ ನೀಡಿ ಜಾಗ ತೋರಿಸದೆ ವರ್ಗಾವಣೆ ಮಾಡಿದ ನಂತರವೂ ಈ ಪ್ರಕಣ ಅಂತ್ಯ ಕಾಣುವ ಲಕ್ಷಣಗಳೇ ಕಾಣಿಸ್ತಿಲ್ಲ. ಏಕೆಂದರೆ  ವೈಯಕ್ತಿಕ ವೇದನೆಯಿಂದಾಗಿ ರೂಪಾ ಮೌದ್ಗಿಲ್​​ ಸಮರ ಸಾರಿದ್ದಾರೆ ಎಂದು ಹೇಳಲಾಗ್ತಿದ್ದು, ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಬೆಂಕಿಯುಗುಳಿದ್ದಾರೆ. 

ಐಪಿಎಸ್‌ ಅಧಿಕಾರಿ ಡಿ. ರೂಪಾ ಗಂಡನ ಆಫೀಸಿನಲ್ಲಿ ಬೇಹುಗಾರಿಕೆ ಮಾಡ್ತಿದ್ದಾರಾ ಎಂಬ ಬಗ್ಗೆ ಅನುಮಾನ ಲಭ್ಯವಾಗಿದೆ. ಮನೀಶ್​​ ಮೌದ್ಗಿಲ್ ಕಚೇರಿಯ ಸಂದರ್ಶಕರ ವಿವರವನ್ನು ರೂಪಾ ಪಡೆಯುತ್ತಿದ್ರಾ, ಹಾಗೆ, ಸರ್ವೇ ಕಚೇರಿಗೆ ಯಾರು ಬರುತ್ತಿದ್ದರೆಂಬ ಮಾಹಿತಿ ರೂಪಾಗೆ ರವಾನೆಯಾಗುತ್ತಿತ್ತಾ ಎಂಬ ಬಗ್ಗೆ ಅನುಮಾನ ಮೂಡಿದೆ. ಏಕೆಂದರೆ, ಸಾ.ರಾ. ಮಹೇಶ್ ವಿರುದ್ಧದ ದೂರದಾರನ ಜತೆ ಡಿ.ರೂಪಾ ಸಂಭಾಷಣೆ ನಡೆಸಿದ್ದು, ಪದೇ ಪದೇ ಏಕೆ ತನ್ನ ಪತಿಯ ಆಫೀಸ್​ಗೆ ಬರುತ್ತಿದ್ದಿಯಾ ಎಂದು ರೂಪಾ ತರಾಟೆ ತೆಗೆದುಕೊಂಡಿದ್ದಾರೆ. 

ಇದನ್ನು ಓದಿ: ರೋಹಿಣಿ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ: ಡಿ. ರೂಪಾ ಆಡಿಯೋ ವೈರಲ್

ಮೈಸೂರಿನ ಭೂ ಅಕ್ರಮದ ಬಗ್ಗೆ ಸಾರಾ ಮಹೇಶ್​ ವಿರುದ್ಧ ದೂರು ದಾಖಲಿಸಿದ್ದ RTI ಕಾರ್ಯಕರ್ತ ಗಂಗರಾಜು ಅವರಿಗೆ ಡಿ. ರೂಪಾ ಧಮ್ಕಿ ಹಾಕಿದ್ದಾರೆ. ದೂರಿನ ಬಗ್ಗೆ ಮಾಹಿತಿ ಕೇಳಲು ಹೋಗುತ್ತಿದ್ದ ಗಂಗರಾಜುಗೆ ಕರೆ ಮಾಡಿ ಧಮ್ಕಿ ಹಾಕಿರುವ ಆಡಿಯೋ ಬಹಿರಂಗಗೊಂಡಿದೆ. ರೂಪಾ ಧಮ್ಕಿ ಹಾಕಿದ 25 ನಿಮಿಷದ ಆಡಿಯೋ ಸುವರ್ಣ ನ್ಯೂಸ್​ಗೆ ಲಭ್ಯವಾಗಿದ್ದು, ಜನವರಿ 30 ಹಾಗೂ ಫೆಬ್ರವರಿ 1 ರಂದು ಎರಡು ಬಾರಿ ಡಿ. ರೂಪಾ ಗಂಗರಾಜು ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಮಾಹಿತಿ ಪಡೆಯಲು ಒಂದು ಕರೆ ಮಾಡಿದ್ದು, ಎರಡನೇ ಕರೆಯಲ್ಲಿ ಅವಾಚ್ಯಶಬ್ಧಗಳಿಂದ ಐಪಿಎಸ್‌ ಅಧಿಕಾರಿ ನಿಂದಿಸಿರುವ ಆಡಿಯೋ ಲಭ್ಯವಾಗಿದೆ. 

ಅಲ್ಲದೆ, ಪತಿ ಮನೀಷ್​​ ಮೌದ್ಗಿಲ್‌ಗೆ​​ ರೋಹಿಣಿ ಸಿಂಧೂರಿ ಕ್ಲೋಸ್​ ಎಂದು ರೂಪಾಗೆ ಸಿಟ್ಟು ಇದ್ಯಾ..? ಇದೇ ಕಾರಣಕ್ಕೆ ರೋಹಿಣಿ ಸಿಂಧೂರಿ ಮೇಲೆ ರೂಪಾ ಕೆಂಡ ಕಾರುತ್ತಿದ್ದಾರಾ ಎಂದೂ ಅನುಮಾನ ಮೂಡ್ತಿದೆ.  

ಇದನ್ನೂ ಓದಿ: D Roopa Vs Rohini Sindhuri: ನಿಮ್ ಜಗಳದಲ್ಲಿ ನನ್ ಮಗನ ಹೆಸ್ರು ಎಳಿಬೇಡಿ: ಡಿಕೆ ರವಿ ತಾಯಿ ಕಣ್ಣೀರು

ಏಕೆಂದರೆ, ರೋಹಿಣಿ ಎಷ್ಟು ಮನೆ ಹಾಳು ಮಾಡಿದ್ದಾಳೆ ಜನರಿಗೆ ಗೊತ್ತಾಗಲಿ ಎಂದು 35 ಸೆಕೆಂಡ್​ನ ಸ್ಫೋಟಕ ಆಡಿಯೋದಲ್ಲಿ ರೂಪಾ ರೌದ್ರಾವತಾರ ತೋರಿರುವುದು ಬಹಿರಂಗಗೊಂಡಿದೆ. 

ಈ ಮಧ್ಯೆ, ಸಾಮಾಜಿಕ ಕಾರ್ಯಕರ್ತ ಗಂಗರಾಜು ಮೇಲೆ ರೂಪಾ ಆಕ್ರೋಶ ವ್ಯಕ್ತಪಡಿಸಿದ್ದು, ರೋಹಿಣಿ ಪರವಾಗಿ ಸರ್ವೇ ಆಫೀಸ್​ನಲ್ಲಿ ನೀವು ದೂರು ನೀಡಿದ್ದೀರಿ, ರೋಹಿಣಿ ಡಿಸಿಯಾಗಿದ್ದಾಗ ಮಾತ್ರ ಏಕೆ ನೀವು ದೂರು ಕೊಟ್ಟಿದ್ದೀರಿ, ರೋಹಿಣಿ ಡಿಸಿಯಾಗೋಕ್ಕಿಂತ ಮುಂಚೆ ಯಾಕೆ ಕಂಪ್ಲೇಂಟ್​ ಕೊಟ್ಟಿಲ್ಲ ಎಂದು ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಆರ್‌ಟಿಐ ಕಾರ್ಯಕರ್ತ ರೂಪಾ ಆರೋಪಗಳಿಗೆ ಸಮಜಾಯಿಷಿ ನೀಡಿದ್ದು, ಮೊದಲಿದ್ದ ಜಿಲ್ಲಾಧಿಕಾರಿಗಳಿಗೂ ದೂರು ಕೊಟ್ಟಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಇದಕ್ಕೂ ಓದಿ: ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ: ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಡಿ. ರೂಪಾ

ಮತ್ತೆ ಫೇಸ್‌ಬುಕ್‌ನಲ್ಲಿ ಡಿ. ರೂಪಾ ಪೋಸ್ಟ್‌
ಇನ್ನೊಂದೆಡೆ ಗಂಗರಾಜು ಅವರೊಂದಿಗೆ ಮಾತನಾಡಿರುವ ಆಡಿಯೋ ಬಾಂಬ್‌ ಮಾಧ್ಯಮಗಳಲ್ಲಿ ಹೊರಬಿದ್ದ ಬೆನ್ನಲ್ಲೇ ಆರ್‌ಟಿಐ ವಿರುದ್ಧ ಗಂಗರಾಜು ಮಾಡಿರುವ ಆರೋಪವನ್ನು ಡಿ. ರೂಪಾ ನಿರಾಕರಿಸಿದ್ದಾರೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ಆಡಿಯೋ ಬಾಂಬ್‌ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಐಪಿಎಸ್‌ ಅಧಿಕಾರಿ, ನಾನು ಗಂಗರಾಜು ಅವರಿಗೆ ಭ್ರಷ್ಟಾಚಾರದ ವಿರುದ್ದ ಹೋರಾಡಬೇಡಿ ಎಂದು ಹೇಳಿಲ್ಲ. ನಾನು ಎತ್ತಿರುವ ವಿಚಾರದ ಬಗ್ಗೆಯೂ ಮಾಧ್ಯಮ ಗಮನ ಹರಿಸಲಿ ಎಂದು ಪೋಸ್ಟ್‌ ಮಾಡಿದ್ದಾರೆ.

ಅಲ್ಲದೆ, ಒಂದೇ ಮಾದರಿಯಲ್ಲಿ ನಡೆದಿರುವ ಹಲವು ಪ್ರಕರಣಗಳನ್ನು ಗಮನಿಸಿ. ಐಎಎಸ್‌ ದಂಪತಿ ಡಿವೋರ್ಸ್‌ ಪ್ರಕರಣದ ಬಗ್ಗೆ ತನಿಖೆಯಾಗಲಿ. ಕರ್ನಾಟಕದ ಐಎಎಸ್‌ ಅಧಿಕಾರಿ, ತಮಿಳುನಾಡಿನ ಅಧಿಕಾರಿ ಸಾವಿಗೀಡಾಗಿದ್ದಾರೆ. ಇದೆಲ್ಲವನ್ನು ಸಹ ಗಮನಿಸಿ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರೊಂದಿಗಿನ ಆಡಿಯೋ ಬಾಂಬ್‌ ಬಗ್ಗೆ ಡಿ. ರೂಪಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios