ಬಳ್ಳಾರಿಯಲ್ಲಿ ರಾಕಿಂಗ್ ಸ್ಟಾರ್ ಅಬ್ಬರ; ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು!
ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್, ಸಾರ್ವಜನಿಕವಾಗಿ ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಕರ್ನಾಟಕದ ಬಳ್ಳಾರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಳ್ಳಾರಿಯ ಹೊರವಲಯದ ಬಾಲಾಜಿನಗರ ಕ್ಯಾಂಪ್‌ನಲ್ಲಿ ನಿರ್ಮಾಣವಾಗಿರುವ ನೂತನ ಅಮೃತೇಶ್ವರ ದೇವಸ್ಥಾನ ಉದ್ಘಾಟನೆಗೆ ಆಗಮಿಸಿದ್ದ ನಟ ಯಶ್. ನೆಚ್ಚಿನ ನಟ ಆಗಮಿಸುವ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.
ಬಳ್ಳಾರಿ (ಫೆ.29): ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿ ರಾಕಿಂಗ್ ಸ್ಟಾರ್ ಯಶ್, ಸಾರ್ವಜನಿಕವಾಗಿ ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಕರ್ನಾಟಕದ ಬಳ್ಳಾರಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಳ್ಳಾರಿ ಹೊರವಲಯದ ಬಾಲಾಜಿ ನಗರದಲ್ಲಿ ನೂತನವಗಿ ನಿರ್ಮಾಣವಾಗಿರುವ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಯಶ್ ಆಗಮಿಸುತ್ತಾರೆಂಬ ಸುದ್ದಿ ಕೇಳಿ ಬಳ್ಳಾರಿ ಸುತ್ತಮುತ್ತಲಿಂದ ಸಾವಿರಾರು ಅಭಿಮಾನಿಗಳು ಜಮಾಯಿಸಿದರು. ಬಳ್ಳಾರಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಕೆಲವು ಅಭಿಮಾನಿಗಳು ನೆಚ್ಚಿನ ನಟನೊಂದಿಗೆ ಸೇಲ್ಫಿ ತೆಗೆದುಕೊಂಡರು.
ಯಶ್ ಅಭಿಮಾನಿಗಳ ದುರಂತ ಸಾವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ!
ದೇವಸ್ಥಾನ ಉದ್ಘಾಟನೆ ಮಾತನಾಡಿದ ರಾಕಿಂಗ್ ಯಶ್, ಬಾಲಾಜಿನಗರದಲ್ಲಿ ದೇವಸ್ಥಾನ ಕಟ್ಟಿರುವ ಬಳ್ಳಾರಿಯ ಕೊರ್ರಪಾಟಿ ಸಾಯಿ ಅವರು ನನಗೆ ಆತ್ಮೀಯರು. ಅವರು ತುಂಬಾ ದೈವ ಭಕ್ತರು. ಕೆಜಿಎಫ್ ಚಿತ್ರದ ಡಿಸ್ಟ್ರಿಬ್ಯೂಟ್ ಮಾಡಿದ್ರು. ಕೆಜೆಎಫ್ ಯಶಸ್ಸಿನಲ್ಲಿ ಸಾಯಿ ಅವರ ಪಾತ್ರ ಬಹಳ ಮುಖ್ಯವಾಗಿದೆ. ಬಾಲಾಜಿ ಕ್ಯಾಂಪ್ ನಲ್ಲಿ ದೇವಸ್ಥಾನ ಕಟ್ಟಲು ಪ್ರಾರಂಭ ಮಾಡೋ ಮುಂಚೆನೆ ಉದ್ಘಾಟನೆಗೆ ಬರೋಕೆ ಹೇಳಿದ್ರು. ನಾನು ಅವತ್ತೇ ಹೇಳಿದ್ದೆ. ದೇವಸ್ಥಾನ ಉದ್ಘಾಟನೆಗೆ ಬರುವೆ ಎಂದು ಹೀಗಾಗಿ ಬಳ್ಳಾರಿಗಿಂದು ಬಂದಿರುವೆ. ಬಳ್ಳಾರಿ ದೇವಸ್ಥಾನದ ಪೂಜೆ ನೋಡಿ ತುಂಬಾ ಖುಷಿ ಆಯ್ತು ಎಂದು ರಾಕಿಂಗ್ ಸ್ಟಾರ್ ಯಶ್ ಸಂತಸಪಟ್ಟರು.
ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಯ್ತು; ಯಶ್ ಫ್ಯಾನ್ಸ್ ಮನದಲ್ಲಿ ನೂರಾರು ಪ್ರಶ್ನೆಗಳು
ಫೋಟೊ ವೈರಲ್ ಬಗ್ಗೆ ಯಶ್ ಮಾತು:
ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಚಿಕ್ಕ ಕಿರಾಣಿ ಅಂಗಡಿಯಲ್ಲಿ ಐಸ್‌ಕ್ರಿಂ ಖರೀದಿಸುತ್ತಿರುವ ಚಿತ್ರ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಕಿಂಗ್ ಸ್ಟಾರ್ ಯಶ್, ನಾನು ಅದೇ ಅಂಗಡಿಗೆ ಹತ್ತು ಹನ್ನೆರಡು ವರ್ಷದಿಂದ ಹೋಗ್ತಾ ಇದ್ದೇನೆ. ಈಗ ಆ ಪೋಟೊ ಆಚೆ ಬಂದು ವೈರಲ್ ಆಗಿದೆ ಅಷ್ಟೇ. ನಟಿ ಪತ್ನಿ ರಾಧಿಕಾ ಅವರ ಮನೆ ಹತ್ತಿರ ಇರೋ ಅಂಗಡಿ ಅದು. ಮಕ್ಕಳು ತಿಂಡಿ ಕೇಳಿದ್ರು ಕೊಡಿಸಿದೆ ಅಷ್ಟೇ ಎಂದು ಮುಗುಳ್ನಕ್ಕ ಯಶ್. ಇದೇ ವೇಳೆ ರಾಜಕೀಯ ಸೇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಯಶ್, ನನಗೆ ರಾಜಕೀಯ ಇಷ್ಟ ಇಲ್ಲ, ಸದ್ಯಕ್ಕೆ ರಾಜಕೀಯದ ಮಾತು ಬೇಡ ಎಂದರು.