ಪ್ರಯಾಣಿಕರೇ ಎಚ್ಚರ. ಇದೇ ಮಾರ್ಚ್  16 ರಿಂದ ಸಾರಿಗೆ ಬಸ್‌ಗಳು ರಸ್ತೆಗಿಳಿಯೋದು ಡೌಟ್. ಅನಿರ್ಧಿಷ್ಟಾವದಿವರೆಗೆ ಬಸ್‌ ಸಂಚಾರ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. 

ಬೆಂಗಳೂರು (ಮಾ.09): ಮಾರ್ಚ್ 16 ಕ್ಕೆ ಬಹುತೇಕ ಸಾರಿಗೆ ನೌಕರರು ಮುಷ್ಕರ ನಡೆಸುವುದು ಕನ್ಫರ್ಮ್ ಆಗಿದೆ. ಬಜೆಟ್‌ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಯಾವುದೇ ಮಹತ್ವ ಸಿಗದ ಕಾರಣ ಬಜೆಟ್‌ನಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. 

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ 2021ರಲ್ಲಿ ನೌಕರರು ಇಟ್ಟಿದ್ದ ಯಾವುದೇ ಬೇಡಿಕೆ ಬಗ್ಗೆಯೂ ಪ್ರಸ್ತಾಪವಾಗಿಲ್ಲ. ಕಳೆದ ಡಿಸೆಂಬರ್‌ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಈ ವೇಳೆ ಸಾರಿಗೆ ನೌಕರರು ಸರ್ಕಾರಿ ನೌಕರರನ್ನಾಗಿ‌ ಮಾಡಬೇಕೆಂಬ ಬೇಡಿಕೆ ಸೇರಿ 10 ಬೇಡಿಕೆಗಳನ್ನು ಇಟ್ಟಿದ್ದರು. 

ಈ ವೇಳೆ ರಾಜ್ಯ ಸರ್ಕಾರ ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಬಿಟ್ಟು ಉಳಿದ ಒಂಬತ್ತು ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿತ್ತು. ಜೊತೆಗೆ 6ನೇ ವೇತನ ಆಯೋಗ ಜಾರಿ ಭರವಸೆ ನೀಡಲಾಗಿತ್ತು. ಆದರೆ ಬಜೆಟ್ ನಲ್ಲಿ ಇದ್ಯಾವ ಬೇಡಿಕೆ ಬಗ್ಗೆಯೂ ಪ್ರಸ್ತಾಪ ಆಗಿಲ್ಲ. ಹಾಗಾಗಿ ಮಾರ್ಚ್ 16ಕ್ಕೆ ಮುಷ್ಕರದ ಬಗ್ಗೆ ಇಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. 

"ನಮ್ಮ ಕಾರ್ಗೋ” ಸೇವೆ ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ ..

ಸಭೆಯಲ್ಲಿ ಸಾರಿಗೆ ಮುಖಂಡರು ಭಾಗಿಯಾಗಿ ಮುಂದಿನ ಹೋರಾಟ ಯಾವ ರೀತಿ ರೂಪಿಸಬೇಕು. ಮುಷ್ಕರ ನಡೆಸಬೇಕೋ ಬೇಡವೋ ಈ ಎಲ್ಲಾ ಅಂಶಗಳ ಬಗ್ಗೆ ಕೋಡಿಹಳ್ಳಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆ ಬಳಿಕ ಮುಂದಿನ ತೀರ್ಮಾನದ ಬಗ್ಗೆ ಘೋಷಣೆಯಾಗಲಿದೆ. 

 ಬಜೆಟ್‌ನಲ್ಲಿ ಆರನೇ ವೇತನ ಆಯೋಗ ಪ್ರಸ್ತಾಪವಾಗದ ಕಾರಣ ನಾಲ್ಕು ಬೇಡಿಕೆ ಇಟ್ಟು ಮತ್ತೆ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಸರ್ಕಾರಿ ನೌಕರರೆಂದು ಘೋಷಣೆ. 
6ನೇ ವೇತನ ಆಯೋಗ ಜಾರಿ. ಆರೋಗ್ಯ ಸಂಜೀವಿನಿ ಆರೋಗ್ಯ ಭಾಗ್ಯ. ವರ್ಗಾವಣೆ ನೀತಿ ಜಾರಿಗೆ ಬೇಡಿಕೆ ಇಡಲಿದ್ದಾರೆ.

ದಿನಾಂಕ 16. 3 .2021 ರಿಂದ 4 ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟ ಕಾಲ ಅವಧಿ ಮುಷ್ಕರಕ್ಕೆ ಸಾರಿಗೆ ನೌಕರರು ನಿರ್ಧರಿಸಿದ್ದು, ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.